ದುನಿಯಾ ವಿಜಯ್ ಗೆ ಟಕ್ಕರ್ ಕೊಡಲಿದ್ದಾರೆ ಡಾಲಿ ಧನಂಜಯ್.!
ಟಗರು ಚಿತ್ರದ ನಂತರ ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಬೈರವಗೀತಾ ಸಿನಿಮಾ ಮಾಡಿದ್ದ ಧನಂಜಯ್ ಅಷ್ಟಾಗಿ ಸದ್ದು ಮಾಡಿಲ್ಲ. ಈ ಕಡೆ ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಾಯಕನಾಗಿದ್ದು ಬಿಟ್ಟರೇ ಬೇರೆ ಡಾಲಿ ಸ್ವಲ್ಪ ಸೈಲೆಂಟ್ ಆಗಿದ್ದಾಗೆ ಕಂಡಿತ್ತು.
ಆದ್ರೆ, ನಾವು ಅಂದುಕೊಂಡಂತೆ ಇರಲಿಲ್ಲ ಧನಂಜಯ್. ಸತತ ಸಿನಿಮಾಗಳಲ್ಲಿ ಬ್ಯುಸಿಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈಗ ಒಂದೊಂದೆ ಘೋಷಣೆ ಮಾಡ್ತಿದ್ದಾರೆ. ಹೌದು, ಪುನೀತ್ ಯುವರತ್ನ ಚಿತ್ರದಲ್ಲಿ ವಿಲನ್ ಆಗಿರುವ ಧನಂಜಯ್ ಮುಂದಿನ ಚಿತ್ರದಲ್ಲಿ ದುನಿಯಾ ವಿಜಯ್ ಗೆ ಟಕ್ಕರ್ ನೀಡಲಿದ್ದಾರಂತೆ.
ದುನಿಯಾ ವಿಜಯ್ ಅಭಿನಯಿಸುತ್ತಿರುವ ಸಲಗ ಚಿತ್ರದಲ್ಲಿ ವಿಜಿಯ ಎದುರು ವಿಶೇಷ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಡಾಲಿ ಐಪಿಎಸ್ ಆಫೀಸರ್ ಪಾತ್ರ ಮಾಡಲಿದ್ದು, ಇದು ವಿಜಿ ಪಾತ್ರಕ್ಕೆ ಟಕ್ಕರ್ ಕೊಡುವಂತಿದೆಯಂತೆ.

ಹಾಗಂತ ಇದು ವಿಲನ್ ಪಾತ್ರ ಎಂದು ಹೇಳಲು ಸಾಧ್ಯವಿಲ್ಲ. ಈ ಹಿಂದೆ ಹೇಳಿದಂತೆ ರಘು ಶಿವಮೊಗ್ಗ ಸಲಗ ಚಿತ್ರ ನಿರ್ದೇಶನ ಮಾಡಬೇಕಿತ್ತು. ಕಾರಣಾಂತರಗಳಿಂದ ರಘು ಹಿಂದೆ ಸರಿದರು. ಇನ್ನೊಬ್ಬ ನಿರ್ದೇಶಕರು ಈ ಪ್ರಾಜೆಕ್ಟ್ ಟೇಕ್ ಮಾಡ್ತಿದ್ದಾರೆ.
ದುನಿಯಾ ವಿಜಯ್ ಬರ್ತಡೇಗೆ ಸಲಗ ಚಿತ್ರದ ಫಸ್ಟ್ ರಿಲೀಸ್ ಆಗಿತ್ತು. ಸದ್ಯಕ್ಕೆ ಇಷ್ಟು ಮಾಹಿತಿ ಬಿಟ್ಟರೇ ಹೆಚ್ಚಿನ ವಿವರ ಸಿಕ್ಕಿಲ್ಲ. ಇನ್ನು ಧನಂಜಯ್ ಬಗ್ಗೆ ಹೇಳುವುದಾರೇ ಯಜಮಾನ ಮುಗಿಸಿ, ಪಾಪ್ ಕಾರ್ನ್ ಮಂಕಿ ಟೈಗರ್ ಮಾಡ್ತಿದ್ದು, ನಂತರ ಡಾಲಿ, ಯುವರತ್ನ ಹಾಗೂ ಧ್ರುವ ಸರ್ಜಾ ಜೊತೆ ಪೊಗರು ಸಿನಿಮಾ ಮಾಡಲಿದ್ದಾರಂತೆ.


Click it and Unblock the Notifications











