ಡಾಲಿ ಧನಂಜಯ್ ಅಭಿಮಾನಿಗಳ ಗಮನಕ್ಕೊಂದು ಮಾಹಿತಿ

ಆಗಸ್ಟ್ 23ಕ್ಕೆ ಧನಂಜಯ್ ಅಭಿಮಾನಿಗಳು ಡಾಲಿ ಉತ್ಸವ ಮಾಡಲು ಉತ್ಸುಕರಾಗಿದ್ದರು. ಆದರೆ, ಕೊರೊನಾ ವೈರಸ್ ಈ ವರ್ಷದ ಸಂಭ್ರಮಕ್ಕೆ ಬ್ರೇಕ್ ಹಾಕಿದೆ.

Recommended Video

Upendra ಬ್ರಹ್ಮ ಚಿತ್ರದಲ್ಲಿನ ಡುಯೆಟ್ ಹಾಡು ತಯಾರಾದ ಕ್ಷಣಗಳು | Filmibeat Kannada

ಇದೇ ಕಾರಣದಿಂದ ನಟ ಧನಂಜಯ್ ಸಹ ತಮ್ಮ ಅಭಿಮಾನಿಗಳಿಗೆ ಹೃದಯಪೂರ್ವಕ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ಭಾನುವಾರ ಧನಂಜಯ್ ಅವರ ಹುಟ್ಟುಹಬ್ಬವಿದ್ದು, ಈ ವರ್ಷ ಸಂಭ್ರಮದ ಆಚರಣೆಗೆ ಕಡಿವಾಣ ಹಾಕೋಣ ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಧನಂಜಯ್ 'ಇದೇ 23ಕ್ಕೆ ಹುಟ್ಟುಹಬ್ಬದ ಸಂಭ್ರಮ. ಪ್ರತಿ ವರ್ಷದ ಹುಟ್ಟುಹಬ್ಬ ನಿಮ್ಮೊಡನೆ ನನಗರಿವಿಲ್ಲದಂತೆಯೆ ಕಳೆದು ಹೋಗುತ್ತಿತ್ತು. ಆದರೆ ಈ ವರ್ಷ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಯಾವುದೇ ಆಚರಣೆಯಿರಿವುದಿಲ್ಲ. ಎಲ್ಲಿದ್ದೀರೋ ಅಲ್ಲಿಂದಲೇ ವಿಶ್ ಮಾಡಿ. ಆಶೀರ್ವದಿಸಿ' ಎಂದು ವಿನಂತಿಸಿಕೊಂಡಿದ್ದಾರೆ.

Dhananjaya Not Celebrating His Birthday This Year

ಇದರ ಜೊತೆಗೆ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳು ತಯಾರಿಸಿರುವ ನಟರಾಕ್ಷಸ ಹಾಡನ್ನು ಸಹ ಹಂಚಿಕೊಂಡಿದ್ದಾರೆ.

ಅಂದ್ಹಾಗೆ, ಧನಂಜಯ್ ಪ್ರಸ್ತುತ ಅಗ್ನಿ ಶ್ರೀಧರ್ ಚಿತ್ರಕಥೆ ರಚಿಸಿರುವ 'ಹೆಡ್ ಬುಷ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಡಾನ್ ಜಯರಾಜ್ ಅವರ ಜೀವನ ಆಧಾರಿತ ಚಿತ್ರ. ಶೂನ್ಯ ಎಂಬ ನವ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರೋಹಿತ್ ಪದಕಿ ನಿರ್ದೇಶನ ರತ್ನನ್ ಪ್ರಪಂಚ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ಇದಕ್ಕೂ ಮುಂಚೆ ದುನಿಯಾ ವಿಜಯ್ ನಿರ್ದೇಶನದ ಸಲಗ ಹಾಗೂ ಪುನೀತ್ ರಾಜ್ ಕುಮಾರ್ ನಟಿಸಿರುವ ಯುವರತ್ನ ಸಿನಿಮಾಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಈ ಎರಡು ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದೆ.

More from Filmibeat

English summary
Kannada Actor Dolly Dhananjay not celebrating his birthday this year, because of coronavirus crisis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X