For Quick Alerts
  ALLOW NOTIFICATIONS  
  For Daily Alerts

  ರಾತ್ರೋರಾತ್ರಿ ದುಬೈಗೆ ಬಂದ ಧನಂಜಯ್; ಶೂಟಿಂಗ್‌ಗಾಗಿ ಅಲ್ಲ ಅಪ್ಪು, ಅಣ್ಣಾವ್ರಿಗಾಗಿ!

  |

  ಸದ್ಯ ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಬ್ಯುಸಿ ಇರುವ ನಟನೆಂದರೆ ಅದರು ಡಾಲಿ ಧನಂಜಯ. ಈ ವರ್ಷ ಧನಂಜಯ ಅಭಿನಯದ ಮೂರು ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಇತ್ತೀಚಿಗಷ್ಟೆ ಮಾನ್ಸೂನ್ ರಾಗ ಬಿಡುಗಡೆಯಾಗಿ ವೀಕ್ಷಕರಿಂದ ಧನಂಜಯ್ ತಮ್ಮ ನಟನೆಗೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ಇನ್ನು ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಸದ್ಯ ಎಲ್ಲರ ಚಿತ್ತ ಈ ಚಿತ್ರದತ್ತ ನೆಟ್ಟಿದೆ.

  ಇನ್ನು ಹೆಡ್ ಬುಷ್ ಭೂಗತ ಲೋಕದ ಮೆಗಾ ರೌಡಿ ಜಯರಾಜ್ ಕುರಿತ ಚಿತ್ರವಾಗಿದ್ದು, ಧನಂಜಯ್, ಪಾಯಲ್ ರಜಪೂತ್ ಸೇರಿದಂತೆ ಇನ್ನೂ ಹಲವು ಖ್ಯಾತ ನಟರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಅಗ್ನಿ ಶ್ರೀಧರ್ ಚಿತ್ರ ಕತೆಯನ್ನು ಬರೆದಿದ್ದರೆ, ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಧನಂಜಯ ಜಯರಾಜ್ ಪಾತ್ರವನ್ನು ನಿರ್ವಹಿಸಿದ್ದು, ಇದೀಗ ಅದೇ ಲುಕ್‌ನಲ್ಲಿ ದುಬೈಗೆ ಬಂದಿಳಿದಿದ್ದಾರೆ.

  ಓಟಿಟಿಗೆ 'ಮಾನ್ಸೂನ್‌ ರಾಗ' ಯಾವಾಗ? ಎಲ್ಲಿ? ಓಟಿಟಿಗೆ 'ಮಾನ್ಸೂನ್‌ ರಾಗ' ಯಾವಾಗ? ಎಲ್ಲಿ?

  ನಿನ್ನೆ ( ಸೆಪ್ಟೆಂಬರ್ 21 ) ರಾತ್ರಿ ದುಬೈಗೆ ತೆರಳುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದ ಡಾಲಿ ಧನಂಜಯ್ ಜಯರಾಜ್ ನಡಿಗೆ ದುಬೈನೆಡೆಗೆ ಎಂದು ಬರೆದುಕೊಂಡಿದ್ದರು. ಇನ್ನು ಧನಂಜಯ್ ದುಬೈಗೆ ತಲುಪಿದ್ದು ವೈಟ್ ಅಂಡ್ ವೈಟ್ ಶರ್ಟ್ ಹಾಗೂ ಬೆಲ್ ಬಾಟಂ ಪ್ಯಾಂಟ್‌ನಲ್ಲಿ ಜಯರಾಜ್ ಅವತಾರದಲ್ಲಿ ಮಿಂಚಿದ್ದಾರೆ. ಅಂದಹಾಗೆ ಧನಂಜಯ್ ದುಬೈಗೆ ಜಯರಾಜ್ ಅವತಾರದಲ್ಲಿ ಬಂದಿಳಿದಿರುವುದು ಚಿತ್ರದ ಶೂಟಿಂಗ್‌ಗಾಗಿ ಅಲ್ಲ, ಬದಲಾಗಿ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಯುಎಇಯಲ್ಲಿ ನಡೆಯಲಿರುವ ಡಾ.ರಾಜ್ ಕಪ್ ಕ್ರಿಕೆಟ್‌ ಟೂರ್ನಮೆಂಟ್ ಆಡಲು.

  ಈ ಐದನೇ ಆವೃತ್ತಿಯ ರಾಜ್ ಕಪ್ ಶಾರ್ಜಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರಲ್ಲಿ ಡಾಲಿ ಧನಂಜಯ್ ಸಹ ಒಂದು ತಂಡದ ನಾಯಕತ್ವವನ್ನು ನಿಭಾಯಿಸಲಿದ್ದಾರೆ. ಇನ್ನು ಕರ್ನಾಟಕ ಚಲನಚಿತ್ರ ನೃತ್ಯಗಾರರ ಹಾಗೂ ನೃತ್ಯ ಸಂಯೋಜಕರ ಸಂಘ ಈ ಟೂರ್ನಿಯನ್ನು ಆಯೋಜಿಸುತ್ತಿದ್ದು, ಕರ್ನಾಟಕ ರಾಜ್ಯ ಪ್ರವಾಸ ಇಲಾಖೆ ಹಾಗೂ ಸಮೃದ್ಧಿ ಗ್ರೂಪ್ಸ್ ಈ ಟೂರ್ನಿಯನ್ನು ಸಮರ್ಪಿಸುತ್ತಿವೆ. ಟೂರ್ನಿಯಲ್ಲಿ ಎಂಟು ತಂಡಗಳು ಇರಲಿದ್ದು, ನಟರುಗಳಾದ ಎಕ್ಸ್ ಕ್ಯೂಸ್ ಮಿ ಸುನಿಲ್, ಸತೀಶ್ ನೀನಾಸಂ, ಡಾಲಿ ಧನಂಜಯ್, ಶರಣ್, ದಿಗಂತ್, ಡಾರ್ಲಿಂಗ್ ಕೃಷ್ಣ ಹಾಗೂ ಸೌರವ್ ಲೋಕಿ ತಂಡಗಳ ನಾಯಕತ್ವವನ್ನು ನಿರ್ವಹಿಸಲಿದ್ದಾರೆ. ಟೂರ್ನಿ ಇದೇ ತಿಂಗಳ 24ರಿಂದ ಆರಂಭವಾಗಲಿದೆ. ಈ ಟೂರ್ನಿಯ ಪಂದ್ಯಗಳ ಟಿಕೆಟ್ ಮುಂಗಡ ಬುಕಿಂಗ್ ಅನ್ನು 'ಪ್ಲಾಟಿನಮ್ ಲಿಸ್ಟ್' ವೆಬ್ ಸೈಟ್ ನಲ್ಲಿ ಮಾಡಬಹುದಾಗಿದ್ದು, ಈಗಾಗಲೇ ಮುಂಗಡ ಬುಕಿಂಗ್ ತೆರೆದಿದೆ. ಇನ್ನು ಟಿಕೆಟ್ ದರಗಳು 7.02 ಅಮೆರಿಕನ್ ಡಾಲರ್‌ನಿಂದ ಆರಂಭಗೊಳ್ಳಲಿದೆ.

  English summary
  Actor Dhananjaya reached Dubai to participate in Raj Cup cricket tournament 5th season. Take a look
  Thursday, September 22, 2022, 13:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X