ಅಣ್ಣ From Mexico: ಮೆಕ್ಸಿಕೊದಿಂದ ಅಣ್ಣನನ್ನು ಕರೆತರಲು 'ಬಡವ ರಾಸ್ಕಲ್' ತಂಡ ರೆಡಿ!
ನಟ ರಾಕ್ಷಸ್ ಡಾಲಿ ಧನಂಜಯ್ ಮತ್ತು ನಿರ್ದೇಶಕ ಶಂಕರ್ ಗುರು ಕಾಂಬಿನೇಷನ್‌ನ 'ಬಡವ ರಾಸ್ಕಲ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಧನಂಜಯ್ ಈ ಸಿನಿಮಾ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್ ಕಾಲಿಟ್ಟರು. ಈಗ ಮತ್ತೆ ಈ 'ಬಡವ ರಾಸ್ಕಲ್' ತಂಡ ಮೆಕ್ಸಿಕೊದಿಂದ ಅಣ್ಣನನ್ನು ಕರೆದುಕೊಂಡು ಬರಲು ರೆಡಿಯಾಗ್ತಿದೆ.
ನಟ ಧನಂಜಯ್ ಅವರ ಹುಟ್ಟುಹಬ್ಬದಂದು 'ಅಣ್ಣ From Mexico' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿತ್ತು. ಆದಾದ ನಂತರ ಚಿತ್ರದ ಬಗ್ಗೆ ಸದ್ದಿರಲಿಲ್ಲ. ಈಗ ಯಾವುದೇ ಸದ್ದು ಗದ್ದಲವಿಲ್ಲದೆ 'ಅಣ್ಣ From Mexico' ತಂಡ ಸಿನಿಮಾದ ಮುಹೂರ್ತ ಮಾಡಿ ಮುಗಿಸಿದೆ. ಜೊತೆಗೆ ಚಿತ್ರೀಕರಣಕ್ಕೂ ತಯಾರಿ ಮಾಡಿಕೊಂಡಿದೆ.

ಬಂಡೆ ಮಹಾಕಾಳಿ ಆಶೀರ್ವಾದದಿಂದಿಗೆ 'ಅಣ್ಣ From Mexico'
ಎರಡು ವರ್ಷದ ಹಿಂದಿ ತೆರೆಕಂಡಿದ್ದ 'ಬಡವ ರಾಸ್ಕಲ್' ಸಿನಿಮಾ ಬಳಗ ಮತ್ತೆ ಒಂದಾಗಿದೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮ ಹುಟ್ಟುಹಬ್ಬದಂದ 'ಅಣ್ಣ From Mexico' ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದರು. ಈ ಚಿತ್ರತಂಡ ಸದ್ದಿಲ್ಲದೇ ಮುಹೂರ್ತ ಮುಗಿಸಿ ಶೂಟಿಂಗ್ ಅಖಾಡಕ್ಕೆ ಹೆಜ್ಜೆ ಇಡಲು ತಯಾರಾಗಿದೆ.
ಡಿಸೆಂಬರ್ 15 ರ ಶುಭ ಶುಕ್ರವಾರದಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಧನಂಜಯ್ ಹಾಗೂ ಶಂಕರ್ ಗುರು ಜೋಡಿಯ 'ಅಣ್ಣ From Mexico' ಸಿನಿಮಾದ ಮುಹೂರ್ತ ನೆರವೇರಿದೆ. ಸಿನಿಮಾವನ್ನು ದಿ ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದ್ದಾರೆ. ರಾಯಲ ಸ್ಟುಡಿಯೋಸ್ ಪಾಲುದಾರರಾದ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದಾರೆ. ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ.
ಅಣ್ಣ From Mexico
'ಬಡವ ರಾಸ್ಕಲ್' ಸಿನಿಮಾ ಬಳಿಕ 'ಅಣ್ಣ From Mexico' ಶಂಕರ್ ಗುರು ನಿರ್ದೇಶನದ ಎರಡನೇ ಸಿನಿಮಾ. ಪಕ್ಕ ಆಕ್ಷನ್ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ದಿ ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದ್ದು. ಐರಾ ಫಿಲ್ಮ್ಸ್ ಕೂಡ ಸಿನಿಮಾಗೆ ಕೈ ಜೋಡಿಸಿದೆ. 'ಅಣ್ಣ From Mexico' ಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಜನವರಿ ತಿಂಗಳಿನಿಂದ 'ಅಣ್ಣ From Mexico' ಶೂಟಿಂಗ್ ಶುರುವಾಗಲಿದೆ, ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. 'ಬಡವ ರಾಸ್ಕಲ್' ಅಂತಹ ಫ್ಯಾಮಿಲಿ ಸಿನಿಮಾ ನೀಡಿದ್ದ ಶಂಕರ್ ಗುರು ಮತ್ತು ಧನಂಜಯ್ ಮತ್ತೊಂದು ಸಿನಿಮಾ ಮೂಲಕ ಜನರ ಮುಂದೆ ಬರುತ್ತಿದ್ದಾರೆ.
ಇನ್ನು, ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ, ಪುಷ್ಪ-2, ಝೀಬ್ರಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತೆರೆ ಕಂಡು ಉತ್ತಮ ರೆಸ್ಪಾನ್ಸ್ ಪಡೆದ 'ಟಗರು ಪಲ್ಯದ' ಬಳಿಕ ನಟ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮತ್ತು ಅವರನ್ನು ಬೆಳಕಿಗೆ ತರುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.


Click it and Unblock the Notifications










