ಕ್ರಿಸ್‌ಮಸ್‌ಗೆ ಧನಂಜಯ್ ನಟನೆಯ 'ಬಡವ ರಾಸ್ಕಲ್' ತೆರೆಗೆ

ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆದ ಮೇಲೆ ಸ್ಟಾರ್ ನಟರ ಚಿತ್ರಗಳು ರಿಲೀಸ್ ದಿನಾಂಕ ಪ್ರಕಟಿಸಿ ಥಿಯೇಟರ್‌ಗಳನ್ನು ಕಾಯ್ದಿರಿಸುತ್ತಿವೆ. ಕನ್ನಡದಲ್ಲೂ ಹಲವು ನಿರೀಕ್ಷೆಯ ಚಿತ್ರಗಳು ಬಿಡುಗಡೆಗಾಗಿ ಕಾಯುತ್ತಿವೆ. ಪ್ರಥಮವಾಗಿ ಸುದೀಪ್ ನಟನೆಯ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರಗಳು ಬರ್ತಿದೆ.

ಅಕ್ಟೋಬರ್ 14 ರಂದು ಈ ಎರಡು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸಲಗ ಕ್ರೇಜ್ ಮುಗಿಯುತ್ತಿದ್ದಂತೆ ಧನಂಜಯ್ ನಾಯಕನಾಗಿ ನಟಿಸಿರುವ ಒಂದೊಂದೇ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಡಾಲಿ ನಿರ್ಮಿಸಿ ನಾಯಕನಾಗಿ ಅಭಿನಯಿಸಿರುವ ಬಡವ ರಾಸ್ಕಲ್ ಚಿತ್ರ ಈಗ ಹೊಸ ರಿಲೀಸ್ ದಿನಾಂಕ ಪ್ರಕಟಿಸಿದೆ. ಸ್ವತಃ ಧನಂಜಯ್ ಟ್ವೀಟ್ ಮಾಡಿರುವ ಪ್ರಕಾರ, ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿ ಡಿಸೆಂಬರ್ 24 ರಂದು ಬಡವ ರಾಸ್ಕಲ್ ಸಿನಿಮಾ ಬಿಡುಗಡೆಯಾಗುತ್ತಿದೆ.

Dhananjaya Starrer Badava Rascal Movie Releasing on December 24, 2021

ಈ ಹಿಂದೆ ಘೋಷಿಸಿದ್ದಂತೆ ಸೆಪ್ಟೆಂಬರ್ 24ಕ್ಕೆ ರಿಲೀಸ್ ಆಗಬೇಕಿತ್ತು. ಆ ಸಮಯದಲ್ಲಿ 100 ಪರ್ಸೆಂಟ್ ಅನುಮತಿ ಸಿಕ್ಕಿರಲಿಲ್ಲ. ಹಾಗಾಗಿ, ಬಡವ ರಾಸ್ಕಲ್ ಚಿತ್ರ ಮುಂದಕ್ಕೆ ಹೋಗಿತ್ತು. ಈಗ ಪರಿಸ್ಥಿತಿ ಮೊದಲಿನಂತೆ ಆಗಿದೆ. ಥಿಯೇಟರ್‌ಗಳು ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಜನರು ಚಿತ್ರಮಂದಿರಗಳಿಗೆ ಬರ್ತಿದ್ದಾರೆ.

ಅಂದ್ಹಾಗೆ, ಬಡವ ರಾಸ್ಕಲ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದು, ಧನಂಜಯ್ ಮತ್ತು ಅಮೃತಾ ಅಯ್ಯಂಗರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಸ್ವತಃ ಧನಂಜಯ್ ಈ ಸಿನಿಮಾಗೆ ಬಂಡವಾಳ ಹಾಕಿದ್ದು, ರಾಜ್ಯಾದ್ಯಂತ ಕೆಆರ್‌ಜಿ ಸ್ಟುಡಿಯೋ ಬಿಡುಗಡೆ ಮಾಡುತ್ತಿದೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದರು. ಆನಂದ್ ಆಡಿಯೋ ಸಾಂಗ್ಸ್ ಖರೀದಿಸಿದ್ದು, ಈಗಾಗಲೇ ಬಿಡುಗಡೆಯಾಗಿದ್ದ ಹಾಡುಗಳು ಹಿಟ್ ಆಗಿತ್ತು.

ಇದಕ್ಕೂ ಮುಂಚೆ ರೋಹಿತ್ ಪದಕಿ ನಿರ್ದೇಶನದ 'ರತ್ನನ್ ಪ್ರಪಂಚ' ಚಿತ್ರ ರಿಲೀಸ್ ಆಗುತ್ತಿದೆ. ಟ್ರಾವೆಲ್ ಕಾಮಿಡಿ-ಡ್ರಾಮಾ ಜಾನರ್‌ನ 'ರತ್ನನ್ ಪ್ರಪಂಚ' ಅಕ್ಟೋಬರ್ 22 ರಂದು ನೇರವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದು, ರೆಬಾ ಮೋನಿಕಾ ಜಾನ್ ನಟಿಸಿದ್ದಾರೆ.

ಈ ಚಿತ್ರಗಳನ್ನು ಹೊರತುಪಡಿಸಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಸಿನಿಮಾದಲ್ಲಿ ಧನಂಜಯ್ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ತಿಂಗಳಲ್ಲಿ 'ಪುಷ್ಪ ಭಾಗ-1' ರಿಲೀಸ್ ಆಗುತ್ತಿದೆ. ಶಿವಣ್ಣನ 'ಬೈರಾಗಿ,' ಜಗ್ಗೇಶ್ ಜೊತೆ ತೋತಾಪುರಿ, ಡಾಲಿ, ಆರ್ಕೆಸ್ಟ್ರಾ ಮೈಸೂರು ಅಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada Actor Dhananjaya Starrer Badava Rascal Movie Releasing on December 24.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X