»   » ಮಾತುಕತೆ ಮುಗಿಸಿದ 'ಬದ್ಮಾಶ್' ಹುಡುಗ ಧನಂಜಯ್

ಮಾತುಕತೆ ಮುಗಿಸಿದ 'ಬದ್ಮಾಶ್' ಹುಡುಗ ಧನಂಜಯ್

Posted By:
Subscribe to Filmibeat Kannada

'ರಾಟೆ'ಯಲ್ಲಿ ಹೇಳಿಕೊಳ್ಳುವಂತಹ ಯಶಸ್ಸೇನು ಗಳಿಸದ ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ತಮ್ಮ ಹೊಸ ಚಿತ್ರ 'ಬದ್ಮಾಶ್' ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಈಗಾಗಲೇ 'ಬದ್ಮಾಶ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಚಿತ್ರದಲ್ಲಿನ ಟಾಕಿ ಪೋರ್ಷನ್ ಪೂರ್ಣಗೊಂಡಿದೆ.

ಆಕಾಶ್ ಶ್ರೀವತ್ಸ ಆಕ್ಷನ್ ಕಟ್ ಹೇಳಿರುವ 'ಬದ್ಮಾಶ್' ಚಿತ್ರದಲ್ಲಿ ಇನ್ನೂ ಫೈಟಿಂಗ್ ಹಾಗೂ ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದುಕೊಂಡಿದೆ. ಸತತ 6 ವರ್ಷಗಳ ನಂತರ ಗಾಂಧಿನಗರಕ್ಕೆ ಮರಳಿರುವ ಸಂಚಿತಾ ಶೆಟ್ಟಿ ಈ ಚಿತ್ರದ ನಾಯಕಿ.

Dhananjaya starrer 'Badmash' completes talkie portion

'ಬದ್ಮಾಶ್' ಪಕ್ಕಾ ಮಾಸ್ ಚಿತ್ರ. ಪ್ರಸ್ತುತ ವಿದ್ಯಮಾನಗಳ ಆಧಾರದ ಮೇಲೆ ಹೆಣೆಯಲಾಗಿರುವ ಕಥೆ. ಚಿತ್ರದಲ್ಲಿ ನಾಯಕಿ ರೇಡಿಯೋ ಜಾಕಿಯಾದರೆ, ನಾಯಕ ನಂಬಿಕೆ ದ್ರೋಹಿ. ಹಾಗೆಯೇ ಅಚ್ಯುತ್ ಮತ್ತು ಜಹಾಂಗೀರ್ ಕಾಮಿಡಿ ರೋಲ್‌ ನಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

Dhananjaya starrer 'Badmash' completes talkie portion

ಚಿತ್ರದ ನಿರ್ಮಾಣ ಕಾರ್ಯವನ್ನು ರವಿ ಕಶ್ಯಪ್ ವಹಿಸಿಕೊಂಡಿದ್ದಾರೆ. ಆದಷ್ಟು ಬೇಗ ಸಾಂಗ್ ಮತ್ತು ಫೈಟ್ ಶೂಟಿಂಗ್ ಮುಗಿದರೆ, 'ಬದ್ಮಾಶ್' ನಿಮ್ಮ ಎದುರಿಗೆ ಬರಲಿದ್ದಾನೆ.

English summary
Dhananjaya and Sanchita Shetty starrer 'Badmash' completes the talkie portion and is all set to start the song and fight sequences. The movie is directed by Akash Srivatsa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada