ಸ್ನೇಹ ಸಂಬಂಧ ಬಾಂಧವ್ಯ ಯಾವಾಗಲೂ ನೆನಪಿನಲ್ಲಿ ಇರಲಿ
Recommended Video

ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಇದೆ. ಐದು ವರ್ಷದಿಂದ ರಾಜಕೀಯವಾಗಿ ಜಗಳ ಮಾಡದ ಸ್ನೇಹಿತರು ಚುನಾವಣೆಯ ಸಮಯದಲ್ಲಿ ಈ ಪಕ್ಷ ಸರಿ, ಆ ಪಕ್ಷ ಸರಿ ಎಂದು ಮಾತನಾಡುತ್ತಾ ಜಗಳ ಮಾಡಿಕೊಳ್ಳುತ್ತಾರೆ. ಇದೇ ನಿಟ್ಟಿನಲ್ಲಿ ನಟ ಡಾಲಿ ಧನಂಜಯ ಮತ್ತು ಸ್ನೇಹಿತರು ಸೇರಿ ಸ್ನೇಹ ಸಂಬಂಧ ಬಾಂಧವ್ಯದ ಬಗ್ಗೆ ಸಂದೇಶ ಸಾರಿದ್ದಾರೆ.
ಕೆಇಬಿ ಅನ್ನೋ ತಂಡವನ್ನು ಕಟ್ಟಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸದಾ ವೀಕ್ಷಕರನ್ನ ನಕ್ಕು ನಗಿಸುವ ಪ್ರಯತ್ನವನ್ನ ಮಾಡುತ್ತಿರುವ ನಾಗಭೂಷಣ್, ಪೂರ್ಣಚಂದ್ರ ತೇಜಸ್ವಿ, ಹಾಗೂ ಮಹದೇವ್ ಪ್ರಸಾದ್ ಈ ಬಾರಿ ಚುನಾವಣೆಯ ಸ್ಪೆಷಲ್ ಆಗಿ ಒಂದು ಉತ್ತಮ ಸಂದೇಶ ಸಾರುವಂತಹ ವಿಡಿಯೋವನ್ನು ಮಾಡಿದ್ದಾರೆ.

ಚುನಾವಣೆ ಹಾಗೂ ರಾಜಕೀಯ ಪಕ್ಷದ ಸಲುವಾಗಿ ಸ್ನೇಹಿತರ ಜೊತೆ ಜಗಳ ಮಾಡಿಕೊಳ್ಳಬೇಡಿ ಎನ್ನುವುದನ್ನ ವಿಡಿಯೋ ಮೂಲಕ ಹೇಳಲು ಹೊರಟಿದ್ದಾರೆ. ನಟ ಧನಂಜಯ ವಿಡಿಯೋ ಕೊನೆಯಲ್ಲಿ ಸ್ನೇಹ ಸಂಬಂಧ ಬಾಂಧವ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎಂಬುದನ್ನು ತಿಳಿಸುತ್ತಾರೆ.

ಮತದಾನ ಮಾಡಿ, ಈ ಪಕ್ಷಕ್ಕೆ ಓಟು ಹಾಕಿ, ಆ ಪಕ್ಷವನ್ನ ಗೆಲ್ಲಿಸಬೇಡಿ ಅಂತೆಲ್ಲಾ ಸ್ಟಾರ್ ಗಳು ಬೀದಿಗಿಳಿದು ಪ್ರಚಾರ ಹಾಗೂ ಮತಯಾಚನೆಯಲ್ಲಿ ಬ್ಯುಸಿ ಆಗಿರುವಾಗ ಸ್ಪೆಷಲ್ ಸ್ಟಾರ್ ಹೆಸರಿಗೆ ತಕ್ಕಂತೆ ಸ್ಪೆಷಲ್ ಆಗಿರುವ ಸಂದೇಶ ನೀಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.


Click it and Unblock the Notifications











