»   » ಜಗತ್ತಿನಲ್ಲಿರುವ ತಾಯಂದಿರಿಗೆ ಡಾಲಿಯ ಪ್ರೀತಿಯ ಉಡುಗೊರೆ

ಜಗತ್ತಿನಲ್ಲಿರುವ ತಾಯಂದಿರಿಗೆ ಡಾಲಿಯ ಪ್ರೀತಿಯ ಉಡುಗೊರೆ

Posted By:
Subscribe to Filmibeat Kannada

ಸಿನಿಮಾರಂಗದಲ್ಲಿ ಸದ್ಯ ನಟ ರಾಕ್ಷಸ ಹಾಗೂ ಡಾಲಿ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ನಟ ಧನಂಜಯ ತಾಯಂದಿರ ದಿನಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಮದರ್ಸ್ ಡೇ ಗಾಗಿ ವಿಶೇಷ ಕವನವನ್ನು ಬರೆದಿದ್ದಾರೆ ನಟ ಧನಂಜಯ.

ನನ್ನವ್ವ ಎನ್ನುವ ಹೆಸರಿನಲ್ಲಿ ಡಾಲಿ ಬರೆದಿರುವ ಕವನ ಹೀಗಿದೆ ನೋಡಿ. ಏನ್ ಕೆಲಸ ಮಾಡ್ತಿದೀಯ ಮಗ..? ಅಂತ ಕೇಳ್ಳಿಲ್ಲ ನನ್ನವ್ವ, ನಿನಗನ್ಸಿದ್ ಏನಾರ ಮಾಡ್ಲ ಮಗ, ಯಾರಿಗು ತೊಂದರೆ ಕೊಡಬೇಡ ಅಂದ್ಲು. ಎಷ್ಟು ದುಡಿತೀಯೊ ಮಗ..? ಅಂತ ಕೇಳ್ಳಿಲ್ಲ ನನ್ನವ್ವ, ಸಂಜೆ ಮನಿಗ್ ಬಂದಾಗ ಕೈ ತುತ್ತು ಹಾಕಿ, ಸುಸ್ತಾಗಿರ್ತೀಯ ಉಂಡು ಮಂಕಳ್ಳ ಮಗ ಅಂದ್ಲು.

ಒಂಬತ್ತು ತಿಂಗಳ ಸಂಭ್ರಮದಲ್ಲಿ ಶ್ವೇತಾ ಶ್ರೀವಾತ್ಸವ್

ನಂಗೇನ್ ಮಾಡ್ದೆ ಮಗ..? ಅಂತ ಕೇಳ್ಳಿಲ್ಲ ನನ್ನವ್ವ, ತಾನ್ ಹೊಂಚಿದ್ ಒಂದುಂಡೆ ಬೆಣ್ಣೆ ಹಾಕಿ, ಉಂಡ್ಕಂಡ್ ಚೆನ್ನಾಗಿರ್ಲ ಮಗ ಅಂದ್ಲು. ಕುಂತ್ಕಂಡ್ ಎಲ್ಡ್ ಮಾತಾಡು ಅಂತ ಕೇಳ್ಳಿಲ್ಲ ನನ್ನವ್ವ, ಸೋತು ಬಂದಾಗ್ಲೆಲ್ಲ ಜೋಗುಳ ಹಾಡಿ ಯಾವಾಗ್ಲು ನಗ್ತಾ ಇರ್ಲ ಮಗ ಅಂದ್ಲು.

Dhananjaya wrote poetry in the name of Nannavva as part of Mothers Day

ನಂಗೂ ವಯಸ್ಸಾತು, ಇನ್ ಆಗಕ್ಕಿಲ್ಲ ಕಣ್ ಮಗ ಅನ್ಲಿಲ್ಲ ನನ್ನವ್ವ, ಒಂದ್ ಮದುವೆ ಆಗ್ಲ ಮಗ, ನಿಂಗೂ ಆಸರೆ ಆಗುತ್ತೆ ಅಂದ್ಲು. ನಿನ್ ಕಳ್ಕಳಕ್ ನನ್ ಕೈಯಲ್ ಆಗಕ್ಕಿಲ್ಲ ನಿನ್ನಂತವಳನ್ನೆ ನಂಗ್ ಕಟ್ತಿಯೇನೆ, ಅವ್ವ? ಅಂದೆ ಹುಂಕಣ್ ಸುಮ್ನಿರ್ಲ ಮಗ, ಅಂತವಳನೆ ಕಟ್ತೀನಿ, ಜೊತಿಗ್ ನಾನು ಮಗಳಾಗಿ ಹುಟ್ಟಿನಿನ್ನ ಹಿಂಗೆ ನೋಡ್ಕಂತೀನಿ, ಅಂದ್ಲು ನನ್ನವ್ವ. - ಡಾಲಿ ಧನಂಜಯ

English summary
Kannada actor Dhananjaya wrote poetry in the name of Nannavva as part of Mother's Day.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X