ಡಾಲಿಗಿಂತ ಕ್ರೂರಿ ಈ 'ಪಾಪ್ ಕಾರ್ನ್ ಮಂಕಿ ಟೈಗರ್'
'ಡಾಲಿ' ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ನಟ ಧನಂಜಯ್ ಈಗ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಟಗರು' ಚಿತ್ರದಲ್ಲಿ ಖಳನಟನಾಗಿ ಅಬ್ಬರಿಸಿದ್ದ ಡಾಲಿ ಈಗ ಮತ್ತದೇ ಭಯಾನಕ ಗೆಟಪ್ ನಲ್ಲಿ ದರ್ಶನ ನೀಡಿದ್ದಾರೆ. ಹೌದು, 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ಧನಂಜಯ್ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ.
ಈ ಲುಕ್ ನೋಡುತ್ತಿದ್ದರೇ ಡಾಲಿ ಮತ್ತೊಮ್ಮೆ ನಟ ರಾಕ್ಷಸ ಎನ್ನುವುದನ್ನು ಸಾಬೀತು ಮಾಡಿದ್ದಂತಿದೆ. ಕಪ್ಪು ಟೀ ಶರ್ಟ್ ಧರಿಸಿ, ತಲೆ ಬೋಳಿಸಿ, ತಲೆ ಮೇಲೆ ಮಂಕಿ ಎಂದು ಬರೆದುಕೊಂಡಿರುವ ಧನಂಜಯ್, ಕೆಂಡಕಾರುವತಂಹ ಕಣ್ಣುಗಳಿಂದ ಭಯಾನಕ ನೋಟ ಬೀರುತ್ತಿದ್ದಾರೆ. ಇನ್ನೂ ಆಳವಾಗಿ ನೋಡುವುದಾರೇ ಡಾಲಿ ಈ ಚಿತ್ರದಲ್ಲಿ ಸೈಕೋ ಪಾತ್ರ ಮಾಡ್ತಿದ್ದಾರಾ ಎಂಬ ಅನುಮಾನವೂ ಮೂಡದೆ ಇರಲ್ಲ.

ವಿಶೇಷ ಅಂದ್ರೆ ಧನಂಜಯ್ ಲುಕ್ ತೆಲುಗಿನ ಸೂಪರ್ ಹಿಟ್ 'ಗಜನಿ' ಸಿನಿಮಾವನ್ನು ನೆನಪಿಸುವಂತಿದೆ. ತೆಲುಗು ನಟ ಸೂರ್ಯ ಅಭಿನಯಿಸಿದ್ದ ಗಜನಿ ಚಿತ್ರದ ಲುಕ್ ಅನ್ನೇ ಹೋಲುವ ಧನಂಜಯ್ ಲುಕ್ ಕುತೂಹಲ ಮೂಡಿಸುತ್ತಿದೆ. ಅಂದ್ಹಾಗೆ ಪಾಪ್ ಕಾರ್ನ್ ಮಂಕಿ ಟೈಗರ್ ನಿರ್ದೇಶಕ ಸೂರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ.

ಸೂರಿ ಸಿನಿಮಾ ಅಂದಮೇಲೆ ಆಕ್ಷನ್, ಕ್ರೈಮ್, ಥ್ರಿಲ್ಲಿಂಗ್ ಇದ್ದೇ ಇರುತ್ತೆ. 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಸಹ ಪಕ್ಕಾ ಸೂರಿ ಫ್ಲೇವರ್ ನ ಸಿನಿಮಾ ಅನ್ನುವುದು ಫಸ್ಟ್ ಲುಕ್ ನಲ್ಲೇ ಗೊತ್ತಾಗುತ್ತಿದೆ. ಉಳಿದಂತೆ ಚಿತ್ರದಲ್ಲಿ ನಿವೇದಿತಾ, ಅಮೃತಾ, ಸಪ್ತಮಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಹಂತದಲ್ಲಿರುವ 'ಪಾಪ್ ಕಾರ್ನ್ ಮಂಕಿ ಟೈಗರ್' ಸದ್ಯದಲ್ಲೆ ಟೀಸರ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











