For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್' ಆದ ಧನುಷ್; ಗಾಳಿಪಟ 2 ನಟಿ ಜತೆಗಿನ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

  |

  ನಟ ಧನುಷ್ ಅಭಿನಯದ ಸಾಲು ಸಾಲು ಚಿತ್ರಗಳು ಈ ವರ್ಷ ತೆರೆಗೆ ಅಪ್ಪಳಿಸುತ್ತಿವೆ. ಈ ವರ್ಷ ಧನುಷ್ ಅಭಿನಯದ ಮೊದಲ ಸಿನಿಮಾ ಮಾರನ್ ನೇರವಾಗಿ ಓಟಿಟಿಗೆ ಲಗ್ಗೆ ಇಟ್ಟು ಫ್ಲಾಪ್ ಟಾಕ್ ಪಡೆದುಕೊಂಡರೆ, ನಂತರ ಧನುಷ್ ಅಭಿನಯಿಸಿದ್ದ ಮೊದಲ ಹಾಲಿವುಡ್ ಸಿನಿಮಾ ದ ಗ್ರೇ ಮ್ಯಾನ್ ಬಿಡುಗಡೆಗೊಂಡಿತ್ತು. ಹೀಗೆ ಈ ವರ್ಷದ ಮೊದಲ ಸಿನಿಮಾದಲ್ಲಿ ಬಿದ್ದು ಎರಡನೇ ಸಿನಿಮಾದ ನಟನೆಗಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಧನುಷ್ ಅಭಿನಯದ ಈ ವರ್ಷದ ಮೂರನೇ ಸಿನಿಮಾ ತಿರುಚಿತ್ರಾಂಬಲಂ ಕಳೆದ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಿ ನೂರು ಕೋಟಿ ಕಲೆಕ್ಷನ್ ಮಾಡಿ ಅಬ್ಬರಿಸಿತ್ತು.

  ಈ ಚಿತ್ರದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕಾಣಿಸಿಕೊಂಡಿದ್ದ ಧನುಷ್ ತಮ್ಮ ಹಳೆಯ ವಿಐಪಿ ಚಿತ್ರದ ಫೀಲ್ ಕೊಟ್ಟರು. ಹೀಗೆ ಕಮ್‌ಬ್ಯಾಕ್ ಮಾಡಿರುವ ಧನುಷ್ ಅಭಿನಯದ ಇನ್ನೆರಡು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಹೌದು, ಧನುಷ್ ಅವರ ಮುಂದಿನ ಸಿನಿಮಾಗಳಾದ 'ನಾನೆ ವರುವೆನ್' ಹಾಗೂ 'ವಾತಿ' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

  ನಾನೆ ವರುವೆನ್ ಇದೇ ತಿಂಗಳ 29ರಂದು ಬಿಡುಗಡೆಯಾದರೆ, ಇಂದು ( ಸೆಪ್ಟೆಂಬರ್ 19 ) ವಾತಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ವಾತಿ ಸಿನಿಮಾ ಇದೇ ಡಿಸೆಂಬರ್ 2ರಂದು ತೆರೆ ಕಾಣಲಿದೆ ಎಂದು ಚಿತ್ರ ತಂಡ ನೂತನ ಪೋಸ್ಟರ್ ಹಂಚಿಕೊಳ್ಳುವ ಮೂಲಕ ತಿಳಿಸಿದೆ. ಈ ಸಿನಿಮಾದಲ್ಲಿ ಧನುಷ್ ಪ್ರಾಧ್ಯಾಪಕನ ಪಾತ್ರ ನಿರ್ವಹಿಸುತ್ತಿದ್ದು, ಇತ್ತೀಚೆಗಷ್ಟೆ ಕನ್ನಡ ಚಿತ್ರರಂಗಕ್ಕೆ ಗಾಳಿಪಟ 2 ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದ ಮಲಯಾಳಂ ನಟಿ ಸಂಯುಕ್ತಾ ಮೆನನ್ ಈ ಚಿತ್ರದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ.

  ಈ ಚಿತ್ರಕ್ಕೆ ತೆಲುಗಿನಲ್ಲಿ ತೊಲಿಪ್ರೇಮ ರೀತಿಯ ಹಿಟ್ ಚಿತ್ರ ನಿರ್ದೇಶಿಸಿ ತನ್ನ ಮೊದಲನೇ ಪ್ರಯತ್ನದಲ್ಲೇ ನಿರ್ದೇಶಕನಾಗಿ ಗೆದ್ದಿದ್ದ ವೆಂಕಿ ಅಟ್ಲೂರಿ ನಿರ್ದೇಶನವಿದೆ. ಮೊದಲನೇ ಸಿನಿಮಾದಲ್ಲಿಯೇ ಹಿಟ್ ನೀಡಿದ್ದ ವೆಂಕಿ ಅಟ್ಲೂರಿ ನಂತರ ಮಿಸ್ಟರ್ ಮಜ್ನು ಹಾಗೂ ರಂಗ್ ದೇ ರೀತಿಯ ಸಾಮಾನ್ಯ ಫಲಿತಾಂಶ ಪಡೆದುಕೊಂಡ ಚಿತ್ರ ಮಾಡಿ ಯಶಸ್ಸು ಸಿಗದೇ ನಿರಾಸೆಗೊಳಗಾಗಿದ್ದರು. ಹೀಗಾಗಿ ಈ ಚಿತ್ರ ನಿರ್ದೇಶಕ ವೆಂಕಿ ಅಟ್ಲೂರಿಗೆ ಕಮ್‌ಬ್ಯಾಕ್ ಮಾಡಲು ಇರುವ ಅವಕಾಶವಾಗಿದೆ. ಈ ಸಿನಿಮಾ ತಮಿಳಿನಲ್ಲಿ ವಾತಿಯಾಗಿ ತೆರೆ ಕಂಡರೆ ತೆಲುಗಿನಲ್ಲಿ ಸರ್ ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಗಲಿದೆ.

  English summary
  Dhanush and Samyuktha Menon starrer Tamil and Telugu bilingual Vaathi aka Sir movie releasing on December 2
  Monday, September 19, 2022, 13:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X