ಅಕ್ಷಯ್ ಕುಮಾರ್‌ಗೆ ಧನುಷ್ ಟಕ್ಕರ್; ಬೆಂಗಳೂರಿನಲ್ಲಿ ಧನುಷ್ 'ವಾತಿ' ದರ್ಬಾರ್!
ಬೆಂಗಳೂರು.. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಇನ್ನೂ ಹಲವಾರು ಭಾಷೆಗಳ ಚಿತ್ರಗಳನ್ನು ವೀಕ್ಷಿಸುವ ಎಲ್ಲಾ ಭಾಷೆಯ ಸಿನಿ ರಸಿಕರು ಇರುವ ತಾಣ. ಹೀಗೆ ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರು ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಮಾರ್ಕೆಟ್ ಕೂಡ ಹೌದು.
ಸಣ್ಣ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಿಂದ ಹಿಡಿದು ಒಂದು ಟಿಕೆಟ್ ದರ ಸಾವಿರಾರು ರೂಪಾಯಿ ಇರುವ ಮಲ್ಟಿಪ್ಲೆಕ್ಸ್‌ವರೆಗಿನ ಎಲ್ಲಾ ವರ್ಗದ ಚಿತ್ರಮಂದಿರಗಳೂ ಸಹ ಇರುವ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳನ್ನು ಪಡೆದುಕೊಂಡು ಹೆಚ್ಚು ಪ್ರದರ್ಶನಗಳನ್ನು ಪ್ರದರ್ಶಿಸಿ ದುಡ್ಡ ಬಾಚಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ನಿರ್ಮಾಪಕ ಹಾಗೂ ವಿತರಕರ ಗುರಿ.

ಅದರಲ್ಲಿಯೂ ಬೆಂಗಳೂರಿನಲ್ಲಿ ಹೆಚ್ಚೆಚ್ಚು ಮಲ್ಟಿಪ್ಲೆಕ್ಸ್ ವೀಕ್ಷಕರಿದ್ದು, ಇಲ್ಲಿ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳಲು ಪೈಪೋಟಿ ನಡೆಯುತ್ತಿರುತ್ತದೆ. ಹಾಗೆಂದ ಮಾತ್ರಕ್ಕೆ ದೊಡ್ಡ ಬಂಡವಾಳವಿರುವ ಚಿತ್ರಕ್ಕೆ ಹೆಚ್ಚು ಪ್ರದರ್ಶನ ಹಾಗೂ ಕಡಿಮೆ ಬಜೆಟ್‌ನ ಚಿತ್ರಕ್ಕೆ ಕಡಿಮೆ ಪ್ರದರ್ಶನ ಸಿಗಲಿದೆ ಎಂದೇನಿಲ್ಲ. ಬಿಡುಗಡೆ ದಿನ ದೊಡ್ಡ ಚಿತ್ರಗಳು ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡರೂ ಸಹ ಯಾವ ಚಿತ್ರದ ಕಂಟೆಂಟ್ ಚೆನ್ನಾಗಿರಲಿದೆಯೋ ಆ ಚಿತ್ರ ಮಾತ್ರ ನಂತರದ ದಿನಗಳಲ್ಲಿ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳಲಿದೆ.
ಸದ್ಯ ಬೆಂಗಳೂರಿನಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಷಯ್ ಕುಮಾರ್ ನಟನೆಯ ಬಿಗ್ ಬಜೆಟ್‌ನ ಚಿತ್ರ ಸೆಲ್ಫಿಗಿಂತ ಧನುಷ್ ನಟನೆಯ ವಾತಿ ಚಿತ್ರ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದೆ. ಹೌದು, ಧನುಷ್ ಹಾಗೂ ಸಂಯುಕ್ತ ಮೆನನ್ ನಟನೆಯ ವಾತಿ ಚಿತ್ರ ಬೆಂಗಳೂರಿನಲ್ಲಿ ಉಳಿದೆಲ್ಲಾ ಚಿತ್ರಗಳಿಗಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವ ಮೂಲಕ ಸದ್ದು ಮಾಡುತ್ತಿದೆ.
ಇಂದು ( ಫೆಬ್ರವರಿ 28 ) ಬೆಂಗಳೂರು ನಗರದಲ್ಲಿ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಚಿತ್ರಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ನಟನೆಯ ಸೆಲ್ಫಿ ಚಿತ್ರವನ್ನೇ ಹಿಂದಿಕ್ಕಿರುವ ವಾತಿ ಸಿನಿಮಾ ಅಗ್ರಸ್ಥಾನವನ್ನೂ ಸಹ ಅಲಂಕರಿಸಿದೆ. ಹಾಗಾದರೆ ಬೆಂಗಳೂರಿನಲ್ಲಿ ಇಂದು ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
ವಾತಿ / ಸರ್ - 231 ಪ್ರದರ್ಶನಗಳು
ಸೆಲ್ಫಿ - 178 ಪ್ರದರ್ಶನಗಳು
ಆಂಟ್‌ಮ್ಯಾನ್ - 157 ಪ್ರದರ್ಶನಗಳು
ಗೌಳಿ - 132 ಪ್ರದರ್ಶನಗಳು
ಪಠಾಣ್ - 92 ಪ್ರದರ್ಶನಗಳು
ರೋಮಾಂಚಂ - 69 ಪ್ರದರ್ಶನಗಳು
ಸೆಲ್ಫಿ ಚಿತ್ರ ಹಿಂದಿನ ದಿನಗಳಿಗಿಂತ ಈ ದಿನ ತುಂಬಾ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡು ಕುಸಿತ ಕಂಡಿದ್ದರೆ, ವಾತಿ ಚಿತ್ರ ಹಿಂದಿನ ದಿನಗಳಿಗಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡು ಏರಿಕೆ ಕಂಡಿದೆ. ಉಳಿದಂತೆ ಪಠಾಣ್ ಮೂವತ್ತು ದಿನಗಳ ಓಟವನ್ನು ಪೂರೈಸಿದರೂ ಸಹ ಇನ್ನೂ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡು ಉತ್ತಮವಾಗಿ ಸಾಗುತ್ತಿದೆ.


Click it and Unblock the Notifications











