For Quick Alerts
  ALLOW NOTIFICATIONS  
  For Daily Alerts

  ಬಂಪರ್‌ಗೂ ಮೊದಲೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಧನ್ವೀರ್!

  |

  'ಬಜಾರ್' ಸಿನಿಮಾದ ನಂತರ 'ಬಂಪರ್' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದ ನಟ ಧನ್ವೀರ್ ಈಗ ಮತ್ತೊಂದು ಸರ್ಪ್ರೈಸ್ ಸುದ್ದಿ ನೀಡಿದ್ದಾರೆ. ಬಂಪರ್‌ಗೂ ಮೊದಲು ಇನ್ನೊಂದು ಹೊಸ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  ಹೌದು, ಹರಿ ಸಂತೋಷ್ ನಿರ್ದೇಶನದಲ್ಲಿ ಬಂಪರ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಶೂಟಿಂಗ್ ಸಹ ಆರಂಭವಾಗಬೇಕಿತ್ತು. ಈ ನಡುವೆ ಬಂಪರ್‌ಗೆ ಬ್ರೇಕ್ ಹಾಕಿರುವ ಚಿತ್ರತಂಡ ರೊಮ್ಯಾಂಟಿಕ್ ಸಿನಿಮಾ ಆರಂಭಿಸುವ ಸುಳಿವು ನೀಡಿದೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಮುಂದೆ ಓದಿ....

  ಧನ್ವೀರ್ ಗೆ 'ಬಂಪರ್' ಗಿಫ್ಟ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ಧನ್ವೀರ್ ಗೆ 'ಬಂಪರ್' ಗಿಫ್ಟ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  'ಬೈ 2 ಲವ್‌'ನಲ್ಲಿ ಧನ್ವೀರ್

  'ಬೈ 2 ಲವ್‌'ನಲ್ಲಿ ಧನ್ವೀರ್

  'ಬಂಪರ್' ಸಿನಿಮಾಗೂ ಮುಂಚೆ ರೊಮ್ಯಾಂಟಿಕ್ ಚಿತ್ರವೊಂದು ಮಾಡಲು ತಯಾರಾಗಿದ್ದು, ಆ ಚಿತ್ರಕ್ಕೆ 'ಬೈ 2 ಲವ್' ಎಂದು ಹೆಸರು ಸಹ ಅಂತಿಮವಾಗಿದೆಯಂತೆ. ಈ ಚಿತ್ರವನ್ನು ಹರಿ ಸಂತೋಷ್ ಅವರೇ ನಿರ್ದೇಶನ ಮಾಡಲಿದ್ದಾರೆ.

  ಧನ್ವೀರ್‌ಗೆ ಶ್ರೀಲೀಲಾ ನಾಯಕಿ

  ಧನ್ವೀರ್‌ಗೆ ಶ್ರೀಲೀಲಾ ನಾಯಕಿ

  ಧನ್ವೀರ್‌ಗೆ ಈ ಚಿತ್ರದಲ್ಲಿ 'ಕಿಸ್' ಖ್ಯಾತಿಯ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಎಪಿ ಅರ್ಜುನ್ ನಿರ್ದೇಶಿಸಿದ್ದ 'ಕಿಸ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಟಿ ನಂತರ ಶ್ರೀಮುರಳಿ ಜೊತೆ 'ಭರಾಟೆ' ಮಾಡಿದರು. ಈಗ ಧನ್ವೀರ್ ಜೊತೆ 'ಬೈ 2 ಲವ್' ಮಾಡಲಿದ್ದಾರೆ.

  ಹರಿ ಸಂತೋಷ್ ಸಿನಿಮಾ

  ಹರಿ ಸಂತೋಷ್ ಸಿನಿಮಾ

  'ಅಲೆಮಾರಿ' ಸಂತು ಎಂದು ಖ್ಯಾತಿ ಗಳಿಸಿಕೊಂಡಿರುವ ಹರಿ ಸಂತೋಷ್ ಕಳೆದ ವರ್ಷ 'ಬಿಚ್ಚುಗತ್ತಿ' ಎಂಬ ಐತಿಹಾಸಿಕ ಚಿತ್ರವನ್ನು ನಿರ್ದೇಶಿಸಿದ್ದರು. ಅದಕ್ಕು ಮುಂಚೆ 'ಕಾಲೇಜು ಕುಮಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈಗ ಬಂಪರ್ ಘೋಷಿಸಿದ್ದರು. ಆ ಪ್ರಾಜೆಕ್ಟ್‌ಗೂ ಮೊದಲು 'ಬೈ 2 ಲವ್' ಕೈಗೆತ್ತಿಕೊಂಡಿದ್ದಾರೆ.

  ಶರಣ್ ಅಭಿನಯದ ಹೊಸ ಚಿತ್ರ ಘೋಷಣೆ | Saran | Tarun Sudhir | Filmibeat kannada
  ಸುಪ್ರೀತ್ ನಿರ್ಮಾಣದಲ್ಲಿ ಈ ಸಿನಿಮಾ

  ಸುಪ್ರೀತ್ ನಿರ್ಮಾಣದಲ್ಲಿ ಈ ಸಿನಿಮಾ

  ಬೈ 2 ಲವ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸ ಆರಂಭಿಸಿರುವ ಚಿತ್ರತಂಡ ಜನವರಿ 4ನೇ ತಾರೀಖಿನಿಂದ ಚಿತ್ರೀಕರಣ ಶುರು ಮಾಡಲು ನಿರ್ಧರಿಸಿದೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಮಹೇನ್ ಸಿಂಹ ಅವರ ಛಾಯಾಗ್ರಹಣವಿರಲಿದೆ.

  English summary
  Dhanveer and sreeleela to star in director Hari Santhosh next titled 'By2Love' Project to take off before Bumper Team to begin shooting from Jan 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X