ಹುಬ್ಬಳ್ಳಿಯಲ್ಲಿ ಧನ್ವೀರ್ ಗೌಡ ಮೇಲೆ ಮುಗಿಬಿದ್ದ ಅಭಿಮಾನಿಗಳು

ಧನ್ವೀರ್ ಗೌಡ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಬೈ ಟು ಲವ್' ಸಿನಿಮಾ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಆದರೆ ಈ ಸಂಭ್ರಮವನ್ನು ಆಚರಿಸಿಕೊಳ್ಳುವ ಸನ್ನಿವೇಶದಲ್ಲಿ ನಟ ಧನ್ವೀರ್ ಗೌಡ ಇಲ್ಲ.

ಧನ್ವೀರ್ ಗೌಡ ಅವರು ಅಭಿಮಾನಿಯೋರ್ವನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು ಈ ಬಗ್ಗೆ ದೂರು ಸಹ ದಾಖಲಾಗಿದೆ. ಅಷ್ಟೇ ಅಲ್ಲದೆ ಸಿನಿಮಾ ಪ್ರಚಾರಕ್ಕಾಗಿ ರಾಜ್ಯ ಪ್ರವಾಸದಲ್ಲಿರುವ ಧನ್ವೀರ್ ಅವರನ್ನು ಈ ಬಗ್ಗೆ ಅಭಿಮಾನಿಗಳೇ ಪ್ರಶ್ನೆ ಮಾಡಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.

'ಬೈ ಟು ಲವ್' ಸಿನಿಮಾದ ಪ್ರಚಾರಕ್ಕೆ ನಟ ಧನ್ವೀರ್ ಗೌಡ ನಿನ್ನೆಯಷ್ಟೆ ಹುಬ್ಬಳ್ಳಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಧನ್ವೀರ್ ಅನ್ನು ಮುತ್ತಿಕೊಂಡ ಅಭಿಮಾನಿಗಳು ಹಲ್ಲೆ ವಿಷಯದ ಬಗ್ಗೆ ಪ್ರಶ್ನೆ ಮಾಡಿದರು.

Dhanveer Gowda Questioned By Few Fans In Hubli About Hitting A Fan In Bengaluru

ಈ ಬಗ್ಗೆ ವಿಡಿಯೋ ಒಂದು ಹರಿದಾಡುತ್ತಿದ್ದು, ವಿಡಿಯೋದಲ್ಲಿ ಧನ್ವೀರ್ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿರುವುದು ಕಾಣುತ್ತಿದೆ. ಜೊತೆಗೆ ಒಬ್ಬ ವ್ಯಕ್ತಿ ಧನ್ವೀರ್ ಪರವಾಗಿ ನಿಂತು ಮತ್ತೊಬ್ಬ ವ್ಯಕ್ತಿಗೆ ಎಚ್ಚರಿಕೆ ನೀಡುತ್ತಿರುವ ದೃಶ್ಯ ಕಾಣುತ್ತಿದೆ.

ವಿಡಿಯೋದಲ್ಲಿ ಕಾಣುತ್ತಿರುವಂತೆ ಧನ್ವೀರ್ ಗೌಡ ತಮ್ಮ ಪರವಾಗಿ ಮಾತನಾಡುತ್ತಿರುವ ವ್ಯಕ್ತಿಯನ್ನು ಸಾವಧಾನವಾಗಿರುವಂತೆ ಹೇಳಿ ಆತನನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಲು ಯತ್ನಿಸುತ್ತಿದ್ದಾರೆ.

ನಿನ್ನೆ ಧನ್ವೀರ್ ಗೌಡ-ಶ್ರೀಲೀಲಾ ಇತರೆ ಚಿತ್ರತಂಡ ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡಿತು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧನ್ವೀರ್ ಗೌಡ, ''ಕೆಲವು ಕಿಡಿಗೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ನಾನು ಸಾಕ್ಷ್ಯ ಕಲೆ ಹಾಕುತ್ತಿದ್ದೇನೆ. ಬೆಂಗಳೂರಿನಲ್ಲಿ ಶೀಘ್ರದಲ್ಲಿ ಸುದ್ದಿಗೋಷ್ಠಿ ಕಲೆ ಹಾಕಿ ಇದರ ಬಗ್ಗೆ ಮಾತನಾಡುತ್ತೇನೆ'' ಎಂದಿದ್ದಾರೆ.

ಘಟನೆ ಏನು?

ಧನ್ವೀರ್ ಗೌಡ ಮಾಧ್ಯಮಗಳಿಗೆ ಹೇಳಿರುವಂತೆ, ''ಗುರುವಾರ ರಾತ್ರಿ ಧನ್ವೀರ್ ಗೌಡ ಅವರು ಅನುಪಮಾ ಚಿತ್ರಮಂದಿರದ ಬಳಿ ಚಿತ್ರತಂಡದೊಂದಿಗೆ ಇದ್ದಾಗ ಅಲ್ಲಿಗೆ ಬಂದ ಚಂದ್ರಶೇಖರ್ ಎಂಬ ಅಭಿಮಾನಿ ಸೆಲ್ಫಿ ಕೇಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಫೋಟೊ ನೀಡುತ್ತೇನೆಂದು ಧನ್ವೀರ್ ಹೇಳಿದಾಗ ಆ ವ್ಯಕ್ತಿ ಅಸಭ್ಯವಾಗಿ ಮಾತನಾಡಲು ಆರಂಭಿಸಿದ್ದಾನೆ. ಹೆಣ್ಣು ಮಗಳ ಬಗ್ಗೆ ತೀರ ಕೆಟ್ಟದಾಗಿ ಮಾತನಾಡಿದಾಗ ಧನ್ವೀರ್ ಆತನಿಗೆ ಬುದ್ಧಿ ಮಾತು ಹೇಳಿದರಂತೆ. ಧನ್ವೀರ್ ಅಲ್ಲಿಂದ ಹೊರಟ ಬಳಿಕ ಚಿತ್ರಮಂದಿರದ ಬಳಿ ಇದ್ದ ಕೆಲವರು ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಟ ಧನ್ವೀರ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಯಾರೋ ಹಿಂದೆ ನಿಂತು ಇದನ್ನೆಲ್ಲ ಮಾಡಿಸುತ್ತಿದ್ದಾರೆ ಎನಿಸುತ್ತಿದೆ. ಘಟನೆ ನಡೆದಿದ್ದು ಗುರುವಾರ ರಾತ್ರಿ ಅಂದು ದೂರು ದಾಖಲಾಗುವುದಿಲ್ಲ. ಸಿನಿಮಾ ಬಿಡುಗಡೆ ಆಗಿ ಒಂದು ಶೋ ಆದ ಬಳಿಕ ದೂರು ದಾಖಲಾಗುತ್ತದೆ. ದೂರು ದಾಖಲಿಸಿದ ವ್ಯಕ್ತಿ ರಾತ್ರಿಯೆಲ್ಲ ಆರಾಮವಾಗಿರುತ್ತಾನೆ, ಪೊಲೀಸ್ ಠಾಣೆಯಲ್ಲಿಯೂ ಆರಾಮವಾಗಿರುತ್ತಾನೆ. ಶುಕ್ರವಾರ ಮಧ್ಯಾಹ್ನದ ವೇಳೆ ತಾನೇ ಹೋಗಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ ಇದನ್ನೆಲ್ಲ ನಂಬಲು ಸಾಧ್ಯವೇ? ಎಂದು ಧನ್ವೀರ್ ಪ್ರಶ್ನೆ ಮಾಡಿದ್ದರು.

ಆದರೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಚಂದ್ರಶೇಖರ್, ಅನುಪಮಾ ಚಿತ್ರಮಂದಿರದ ಬಳಿ ಸೆಲ್ಫಿ ಕೇಳಿದ್ದಕ್ಕೆ ಧನ್ವೀರ್ ಹಾಗೂ ಅವನ ಬಾಡಿಗಾರ್ಡ್‌ಗಳು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಧನ್ವೀರ್-ಶ್ರೀಲೀಲ ನಟನೆಯ 'ಬೈ ಟು ಲವ್' ಸಿನಿಮಾ ಶುಕ್ರವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದರ ನಡುವೆ ಧನ್ವೀರ್ ವಿರುದ್ಧ ಹಲ್ಲೆಯಂಥಹಾ ಗಂಭೀರ ಆರೋಪ ಕೇಳಿ ಬಂದಿದ್ದು, ಇದರಿಂದ ಸಿನಿಮಾಕ್ಕೆ ಅಲ್ಪ ಹಿನ್ನಡೆ ಆಗುತ್ತಿದೆ.

More from Filmibeat

English summary
Actor Dhanveer Gowda questioned by few fans in Hubli about allegation about hitting a fan in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X