twitter
    For Quick Alerts
    ALLOW NOTIFICATIONS  
    For Daily Alerts

    ಧನ್ವೀರ್ 'ಕೈವ' ಪೋಸ್ಟರ್ ರಿಲೀಸ್: ಆ ಘಟನೆಯ ಸುತ್ತಾ ಜಯತೀರ್ಥ ದೃಶ್ಯಕಾವ್ಯ!

    |

    'ಬಜಾರ್' ಹಾಗೂ 'ಬೈ ಟು ಲವ್' ಸಿನಿಮಾಗಳ ನಂತರ ನಟ ಧನ್ವೀರ್ ಗೌಡ 'ಕೈವ' ಚಿತ್ರದಲ್ಲಿ ನಟಿಸ್ತಿದ್ದಾರೆ. ಧನ್ವೀರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಅಭುವನಸ್​ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ರವೀಂದ್ರ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದಭಿರುಚಿ ಸಿನಿಮಾಗಳ ಸರದಾರ ಜಯತೀರ್ಥ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿಯಾಗಿ 'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

    1983 ಸೆಪ್ಟೆಂಬರ್ 12ರ ಮಧ್ಯಾಹ್ನ 3.20 ದುರಂತ ಒಂದು ನಡೆದಿತ್ತು. ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಆದರೆ ಅವಳು ಕಾದಿದ್ದಳು.. ಕೈವ ಬಂದೇ ಬರುತ್ತಾನೆ ಎಂದು. ಸತ್ಯಘಟನೆ.. ಪ್ರೇಮಕತೆ..ಮಾಸಿಗೆ ಮಾಸ್... ಕ್ಲಾಸಿಗೆ ಕ್ಲಾಸ್... ಮೊದಲ ಪೋಸ್ಟರ್, ಎಂದು ನಿರ್ದೇಶಕ ಜಯತೀರ್ಥ ಸೋಶಿಯಲ್ ಮೀಡಿಯಾದಲ್ಲಿ ಬರೆದು 'ಕೈವ' ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಕರಗ ಉತ್ಸವದ ವೀರ ಕುಮಾರನ ವೇಷದಲ್ಲಿ ಧನ್ವೀರ್ ಗೌಡ ಕಾಣಿಸಿಕೊಂಡಿದ್ದಾರೆ.

    ನಿರ್ದೇಶಕನಾಗ್ತಿದ್ದಾರೆ ಸೃಜನ್ ಲೋಕೇಶ್; ಯಾವ ರೀತಿಯ ಸಿನಿಮಾ ಎಂಬ ಮಾಹಿತಿ ಬಿಚ್ಚಿಟ್ಟ ಸೃಜಾನಿರ್ದೇಶಕನಾಗ್ತಿದ್ದಾರೆ ಸೃಜನ್ ಲೋಕೇಶ್; ಯಾವ ರೀತಿಯ ಸಿನಿಮಾ ಎಂಬ ಮಾಹಿತಿ ಬಿಚ್ಚಿಟ್ಟ ಸೃಜಾ

    ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ 'ಕೈವ' ಸಿನಿಮಾ ಪ್ರಚಾರಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಕಂಠೀರವ ಸ್ಟುಡಿಯೋ‌ದಲ್ಲಿರುವ ಡಾ. ರಾಜ್‌ಕುಮಾರ್ ಮತ್ತು ಡಾ. ಪುನೀತ್ ರಾಜ್‌ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಯೇ ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ.

    'ಕೈವ' ಚಿತ್ರದ ಕಥೆಯೇನು?

    'ಕೈವ' ಚಿತ್ರದ ಕಥೆಯೇನು?

    80ರ ದಶಕದಲ್ಲಿ ತಿಗಳರ ಪೇಟೆ ಸುತ್ತಾಮುತ್ತಾ ನಡೆದ ಒಂದಷ್ಟು ಘಟನೆಗಳ ಸುತ್ತಾಮುತ್ತಾ 'ಕೈವ' ಕಥೆಯನ್ನು ಹೆಣೆಯಲಾಗಿದೆ. ಅದೊಂದು ಪ್ರೇಮಕಥೆ 'ಕೈವ' ಚಿತ್ರದ ಕೇಂದ್ರ ಬಿಂದು. 70,80ರ ದಶಕದಲ್ಲಿ ಕಲಾಸಿಪಾಳ್ಯ ಸುತ್ತಾಮುತ್ತಾ ಇದ್ದ ಪೇಟೆಗಳಲ್ಲಿ ರೌಡಿಗಳ ಅಟ್ಟಹಾಸ ಜೋರಾಗಿತ್ತು. ಜೈರಾಜ್, ಕೊತ್ವಾಲನಂತಹ ಭೂಗತ ಪಾತಕಿಗಳು ಅಡ್ಡಾಡಿದ ಜಾಗ ಅದು. ಇಂತಹ ರೌಡಿಗಳ ಅಟ್ಟಹಾಸದ ನಡುವೆ ನಲುಗಿದ ಮುಗ್ಧ ಪ್ರೇಮಿಗಳ ಮನಮಿಡಿಯುವ ಕಥೆ ಸಿನಿಮಾದಲ್ಲಿದೆ. ಜೈರಾಜ್, ಕೊತ್ವಾಲ, ಗರುಡಾಚಾರ್ ಪಾತ್ರಗಳು ಸಣ್ಣದಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ.

    ಅಪ್ಪು ಫೇವರಿಟ್ ಚಿತ್ರಮಂದಿರ ನರ್ತಕಿ ರೀ-ಓಪನ್: ಪುನೀತ್ ಫೋಟೊ ಇಟ್ಟು ಪೂಜೆ!ಅಪ್ಪು ಫೇವರಿಟ್ ಚಿತ್ರಮಂದಿರ ನರ್ತಕಿ ರೀ-ಓಪನ್: ಪುನೀತ್ ಫೋಟೊ ಇಟ್ಟು ಪೂಜೆ!

    'ಕೈವ' ಚಿತ್ರದಲ್ಲಿ ಕರಗ ಉತ್ಸವದ ವೈಭವ

    'ಕೈವ' ಚಿತ್ರದಲ್ಲಿ ಕರಗ ಉತ್ಸವದ ವೈಭವ

    ತಿಗಳರ ಪೇಟೆ ಅಂದಾಕ್ಷಣ ಬೆಂಗಳೂರಿನ ಪ್ರಸಿದ್ಧ 'ಕರಗ' ಉತ್ಸವ ನೆನಪಾಗುತ್ತದೆ. ಚಿತ್ರದಲ್ಲಿ ಕರಗ ಉತ್ಸವವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಬೆಂಗಳೂರಿನ ಕರಗ ಉತ್ಸವಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ಚಿಕ್ಕಪೇಟೆಯ ಮಸ್ತಾನ್ ಸಾಬ್ ದರ್ಗಾಕ್ಕೂ ಕರಗ ಭೇಟಿ ಕೊಟ್ಟು ಆಶಿರ್ವಾದ ನೀಡುತ್ತದೆ. ಇದೆಲ್ಲದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ನಿರ್ದೇಶಕ ಜಯತೀರ್ಥ ಸಿನಿಮಾ ಕಥೆ ಹೇಳುತ್ತಿದ್ದಾರೆ. 80ರ ದಶಕದ ಕಥೆ ಆಗಿರುವುದರಿಂದ ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸಿದೆ. ಚಿತ್ರಕ್ಕಾಗಿ 'ಕರಗ'ದ ವಿಷ್ಯುವಲ್ಸ್ ಕೂಡ ಬಳಸಿಕೊಳ್ಳಲಾಗುತ್ತಿದೆ ಎಂದು ನಿರ್ದೇಶಕ ಜಯತೀರ್ಥ ಮಾಹಿತಿ ನೀಡಿದ್ದಾರೆ.

    ಗಂಗಾರಾಮ್ ಕಟ್ಟಡ ಕುಸಿತಕ್ಕೂ ಈ ಕಥೆಗೂ ನಂಟು

    ಗಂಗಾರಾಮ್ ಕಟ್ಟಡ ಕುಸಿತಕ್ಕೂ ಈ ಕಥೆಗೂ ನಂಟು

    ನಿರ್ದೇಶಕರು ಸುಳಿವು ಕೊಟ್ಟಿರುವಂತೆ 1983 ಸೆಪ್ಟೆಂಬರ್ 12ರಂದು ನಡೆದ ಘಟನೆ ಎಂದರೆ ಅದು ಗಾಂಧಿನಗರದ ಗಂಗಾರಾಮ್ ಕಟ್ಟಡ ಕುಸಿತ ದುರಂತ ಪ್ರಕರಣ. ಆ ದಿನ ಕಪಾಲಿ ಚಿತ್ರಮಂದಿರದ ಪಕ್ಕ ಇದ್ದ ಏಳು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. 123 ಜನರನ್ನು ಬಲಿ ತೆಗೆದುಕೊಂಡ ಆ ಕಟ್ಟಡದ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು 34 ದಿನಗಳು ಬೇಕಾದವು. ಆ ದುರಂತಕ್ಕೂ 'ಕೈವ'ನ ಕಥೆಗೂ ನಂಟು ಇದೆ.

    ಶೀಘ್ರದಲ್ಲೇ 'ಕೈವ' ಸಿನಿಮಾ ರಿಲೀಸ್

    ಶೀಘ್ರದಲ್ಲೇ 'ಕೈವ' ಸಿನಿಮಾ ರಿಲೀಸ್

    'ಕೈವ' ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಐದಾರು ದಿನ ಶೂಟಿಂಗ್ ಮುಗಿದರೆ ಕುಂಬಳಕಾಯಿ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದ್ದು, ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಒಟ್ಟಿನಲ್ಲಿ ನೈಜ ಘಟನೆಗಳನ್ನು ಆಧರಿಸಿರುವ 'ಕೈವ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

    English summary
    Dhanveer Gowda Starrer Kaiva First Look Poster Goes Viral. Know More.
    Friday, September 9, 2022, 9:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X