ಇದು ತಲೆಗಳಿಗಾಗಿ ನಡೆಯುವ ಯುದ್ಧ; 'ಹಯಗ್ರೀವ' ಆಗಿ ಧನ್ವೀರ್ ಗೌಡ ಖದರ್

ಹೀರೊ ಧನ್ವೀರ್ ಸಿನಿಮಾ ಮಾಡುವ ಸ್ಪೀಡ್ ಹೆಚ್ಚಿಸಿದ್ದಾರೆ. ಕಳೆದ ವರ್ಷ 'ಕೈವ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ಧನ್ವೀರ್ ಸದ್ಯ ಮತ್ತೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ವಾಮನ' ಸಿನಿಮಾ ಚಿತ್ರೀಕರಣ ಮುಗಿದಿದೆ. 'ಹಯಗ್ರೀವ' ಸಿನಿಮಾ ಸೆಟ್ಟೇರಿದೆ.

ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಮೃದ್ಧಿ ಮಂಜುನಾಥ್ ನಿರ್ಮಾಣದ ಸಿನಿಮಾ 'ಹಯಗ್ರೀವ'. ರಘುಕುಮಾರ್ ನಿರ್ದೇಶನದಲ್ಲಿ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮುಹೂರ್ತ ಇತ್ತೀಚೆಗೆ ನೆರವೇರಿದೆ. ಚಿತ್ರದ ಮುಹೂರ್ತ ಸಮಾರಂಭ ನಾಡದೇವತೆ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆಯಿತು. ಚಿತ್ರತಂಡದ ಜೊತೆ ಸಾಕಷ್ಟಿ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿ ಶುಭ ಕೋರಿದರು.

Dhanveer Gowdas new film Hayagrriva begins with pooja ceremony

ಮುಹೂರ್ತ ಸಮಾರಂಭದ ಬಳಿಕ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದೆ. ನಿರ್ಮಾಪಕರು ಸಿನಿಮಾ ಮಾಡಿಕೊಡಲು ಕೇಳಿದರು. ನನ್ನ ಬಳಿ ಒಂದು ಕಥೆ ಇತ್ತು. ಅದನ್ನು ಹೇಳಿದಾಗ ಇಷ್ಟಪಟ್ಟು ಈ ಚಿತ್ರ ಶುರುವಾಯಿತು. ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್‍ ಈ ಚಿತ್ರದಲ್ಲಿದೆ. ಲವ್, ಸೆಂಟಿಮೆಂಟ್, ಸಸ್ಪೆನ್ಸ್ ಸೇರಿದಂತೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು 'ಹಯಗ್ರೀವ' ಕಥೆಯಲ್ಲಿದೆ. ಕನ್ನಡದಲ್ಲಿ ಇದುವರೆಗೂ ಯಾರೂ ಮಾಡದ ಪ್ರಯತ್ನ ಇದು ಎಂದು ನಿರ್ದೇಶಕ ರಘುಕುಮಾರ್ ಹೇಳಿದ್ದಾರೆ.

ರಘುಕುಮಾರ್ ಮಾಡಿದ್ದ 'ದಿ ಬೆಲ್‍' ಶಾರ್ಟ್ ಫಿಲ್ಮ್ ಇಷ್ಟವಾಗಿ ನಿರ್ದೇಶಕರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾಗಿ ನಿರ್ಮಾಪಕರು ಹೇಳಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‍ ಚಿತ್ರ. ಕನ್ನಡದಲ್ಲಿ ಇಲ್ಲಿಯವರೆಗೂ ಈ ತರಹದ ಚಿತ್ರ ಬಂದಿಲ್ಲ ಎಂದು ಹೇಳಬಹುದು. ಧನ್ವೀರ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ನಾಯಕ ನಟಿಸುತ್ತಿದ್ದು, ಅದ್ಯಾರು ಎನ್ನುವುದು ಸಿನಿಮಾ ಬಿಡುಗಡೆವರೆಗೂ ಸೀಕ್ರೆಟ್ ಎಂದಿದ್ದಾರೆ.

'ಹಯಗ್ರೀವ' ನನ್ನ 5ನೇ ಸಿನಿಮಾ ಎಂದು ಮಾತು ಆರಂಭಿಸಿದ ಧನ್ವೀರ್, "ಒಳ್ಳೆಯ ತಂಡ ಮತ್ತು ಒಳ್ಳೆಯ ಶೀರ್ಷಿಕೆ ಸಿಕ್ಕಿದೆ. ಬಹಳ ದಿನಗಳಿಂದ ಪ್ಲಾನ್‍ ಮಾಡಿ, ಒಂದೊಳ್ಳೆಯ ಕಥೆ ಮಾಡಿ ಈ ಚಿತ್ರ ಮಾಡುತ್ತಿದ್ದೇವೆ. ಅಭಿಮಾನಿಗಳಿಗೆ ಖುಷಿಯಾಗುವಂತಹ ಕಥೆ ಇದೆ. 'ಬಜಾರ್' ನಂತರ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್‌ ಮಾಡಿಕೊಳ್ಳುತ್ತಿದ್ದೇನೆ" ಎಂದರು.

Dhanveer Gowdas new film Hayagrriva begins with pooja ceremony

ನಟಿ ಸಂಜನಾ ಆನಂದ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ಒಳ್ಳೆ ಬ್ರೇಕ್ ಸಿಕ್ಕಿಲ್ಲ. 'ಹಯಗ್ರೀವ' ಚಿತ್ರದಲ್ಲಿ ಧನ್ವೀರ್ ಜೋಡಿಯಾಗಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಹಾಗೂ ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ನಿರ್ಮಾಪಕ ಹಾಗೂ ವಿತರಕ ಗುರು ದೇಶಪಾಂಡೆ, ಯೋಗಾನಂದ್ ಮುಂತಾದವರು ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಇನ್ನು 'ಹಯಗ್ರೀವ' ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿ ವೈರಲ್ ಆಗುತ್ತಿದೆ. ಆರ್ಮುಗ ರವಿಶಂಕರ್ ಖಡಕ್ ಧ್ವನಿಯ ಹಿನ್ನೆಲೆಯಲ್ಲಿ ಮೋಷನ್ ಪೋಸ್ಟರ್ ಡಿಸೈನ್ ಮಾಡಲಾಗಿದೆ.

More from Filmibeat

English summary
Hayagrriva movie Title First Look Motion Poster goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X