ದರ್ಶನ್ ಫೋಟೊ ಹಿಡ್ದು ಝೈದ್ ಖಾನ್‌ಗೆ ಧನ್ವೀರ್ ಟಾಂಗ್? 'ಮೀಟರ್ ಬೇಕು ಮೀಟರ್' ಎಂದು ಮತ್ತೆ ಕೌಂಟರ್

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ಕೆಲವರು ಅವರಿಂದ ದೂರಾಗಿದ್ದಾರೆ. ಮೇಲ್ನೋಟಕ್ಕೆ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಧನ್ವೀರ್ ಮಾತ್ರ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಝೈದ್ ಖಾನ್ ಮೊದಲಿನಿಂದ ದರ್ಶನ್ ಕ್ಯಾಂಪ್‌ನಲ್ಲಿ ಕಾಣಿಸಿಕೊಂಡವರು. ಆದರೆ ಇದ್ದಕ್ಕಿಂದಂತೆ ಇವರಿಬ್ಬರ ನಡುವೆ ಶೀತಲ ಸಮರ ಶುರುವಾಗಿದೆ.

ಧನ್ವೀರ್ ಹಾಗೂ ಝೈದ್ ಖಾನ್ ಇಬ್ಬರೂ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ಕೊಡುವ ಕೆಲಸ ಮಾಡುವಂತೆ ಕಾಣ್ತಿದೆ. ಇತ್ತೀಚೆಗೆ ಚಾಮರಾಜನಗರದಲ್ಲಿ ಧನ್ವೀರ್ ನಟನೆಯ 'ಹಯಗ್ರೀವ' ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮ ನಡೀತು. ಈ ವೇಳೆ ವೇದಿಕೆ ಮೇಲೆ ನಿಂತು ದರ್ಶನ್ ಫೋಟೊ ಹಿಡಿದು ಧನ್ವೀರ್ ಸವಾಲು ಹಾಕಿದ್ದಾರೆ. ಗಂಡಸ್ತನದ ಮಾತು ಆಡಿದ್ದಾರೆ. ಝೈನ್ ಖಾನ್‌ಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

Dhanveer Zaid Khan counter Heats Up Meter War Erupts in Darshan Camp Ahead of Hayagriva

ದರ್ಶನ್ ಸಂಕಷ್ಟಕ್ಕೆ ಸಿಲುಕಿದ ಸಮಯದಿಂದ ಧನ್ವೀರ್ ಬೆಂಬಲಕ್ಕೆ ನಿಂತಿದ್ದಾರೆ. ಬಳ್ಳಾರಿ ಜೈಲಿನಿಂದ ಬಿಡುಗಡೆಯಾದಾಗ ಸ್ವತಃ ದರ್ಶನ್ ಕಾರ್ ಚಲಾಯಿಸಿಕೊಂಡು ಕರೆದುಕೊಂಡು ಬಂದಿದ್ದರು. ಆ ಬಳಿಕ ವಿಜಯಲಕ್ಷ್ಮಿ ದರ್ಶನ್ ಜೊತೆ ನಿಂತಿದ್ದಾರೆ. ಇದೆಲ್ಲ ಪ್ರಚಾರಕ್ಕಾಗಿ ಎಂದು ಕೆಲವರು ಕುಹಕವಾಡಿದರೂ ಧನ್ವೀರ್ ತಲೆ ಕೆಡಿಸಿಕೊಳ್ಳಲಿಲ್ಲ. ಏನೇ ಆದ್ರೂ ದರ್ಶನ್ ಜೊತೆ ನಿಲ್ತೀನಿ ಎಂದಿದ್ದರು.

ದರ್ಶನ್ ಅಭಿಮಾನಿಗಳು ಕೂಡ ಈಗ ಧನ್ವೀರ್ ಪರ ನಿಂತಿದ್ದಾರೆ. ಆದರೆ ಧನ್ವೀರ್ ಬಿಟ್ಟು ದರ್ಶನ್ ಸಹಾಯಕ್ಕೆ ಯಾರು ಬರಲಿಲ್ಲ ಎನ್ನುವ ಮಾತಿಗೆ ಝೈದ್ ಖಾನ್ ಟಾಂಗ್ ಕೊಟ್ಟಿದ್ದರು. "ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ನಿಂತೆ, ನನ್ನ ಟಿಆರ್‌ಪಿ, ನಾನು ನಿಜವಾದ ತಮ್ಮ ಎನ್ನುವುದೆಲ್ಲಾ ಬೇಡ, ಬಲಗೈಲಿ ಮಾಡುವುದು ಎಡಗೈಗೆ ಗೊತ್ತಾಗಬಾರ್ದು" ಎಂದಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಚಾಮರಾಜನಗರದಲ್ಲಿ ಧನ್ವೀರ್ ತಿರುಗೇಟು ಕೊಟ್ಟಿರುವಂತೆ ಕಾಣ್ತಿದೆ.

"ನಾನು ಟಿಆರ್‌ಪಿಗಾಗಿ ಬಂದು ಮಾತನಾಡ್ತಿಲ್ಲ. ಪ್ರಚಾರಕ್ಕಾಗಿ ಯಾರನ್ನೂ ಬಾಸ್ ಎಂದು ಕರೆಯುವ ಅಭ್ಯಾಸ ನನಗಿಲ್ಲ. ಹಿಂದೆಯೂ ಇವರೇ, ಮುಂದೆಯೂ ಇವರೇ ನಮ್ಮ ಬಾಸ್" ಎಂದು ವೇದಿಕೆಯಲ್ಲಿ ದರ್ಶನ್ ಫೋಟೊ ತೋರಿಸಿ ಧನ್ವೀರ್ ಹೇಳಿದ್ದಾರೆ. "ಕ್ಯಾಮರಾ ಮುಂದೆ ಬಂದು ಮಾತನಾಡುವ ಗಂಡಸರು ತುಂಬಾ ಜನ ಇದ್ದಾರೆ. ಅಖಾಡಕ್ಕೆ ಇಳಿದು ಮಾಡಲು ಮೀಟರ್ ಬೇಕು ಮೀಟರ್" ಎಂದು ಧನ್ವೀರ್ ಎಂದು ಟಾಂಗ್ ಕೊಟ್ಟಿದ್ದರು.

ಇದೀಗ ಮತ್ತೆ ಇನ್‌ಸ್ಟಾಗ್ರಾಮ್‌ನಲ್ಲಿ 'ಮೀಟರ್ ಬೇಕು' ಎಂದು ದರ್ಶನ್ ಫೋಟೊ ಹಿಡಿದುಕೊಂಡಿರುವ ಫೋಟೊವನ್ನು ಧನ್ವೀರ್ ಪೋಸ್ಟ್ ಮಾಡಿದ್ದಾರೆ. "ನಾನೇ ದೊಡ್ಡವನು ಅಂತ ಬಂದ್ರೆ ಸುಮ್ನೆ ಇರಲ್ಲ" ಎನ್ನುವ ಹಾಡನ್ನು ಹಿನ್ನೆಲೆಯಲ್ಲಿ ಹಾಕಿಕೊಂಡಿದ್ದಾರೆ. ಆ ಪೋಸ್ಟ್ ಸಖತ್ ವೈರಲ್ ಆಗ್ತಿದೆ. ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ಫೆಬ್ರವರಿ 27ರಂದು 'ಹಯಗ್ರೀವ' ಸಿನಿಮಾ ತೆರೆಗೆ ಬರಲಿದೆ. ಸದ್ಯ ಚಿತ್ರದ ಟೀಸರ್, ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನ್ವೀರ್ ಮಿಂಚಿದ್ದಾರೆ. ರಘು ಕುಮಾರ್ ಒ. ಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೆವೈಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ಮಂಜುನಾಥ್ ಚಿತ್ರ ನಿರ್ಮಾಣ ಮಾಡಿದ್ದಾರೆ.

ಧನ್ವೀರ್ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಾರಾ ಸೇರಿ ದೊಡ್ಡ ತಾರಾಗಣ 'ಹಯಗ್ರೀವ' ಚಿತ್ರದಲ್ಲಿದೆ. ಗಿರೀಶ್ ಗೌಡ ಛಾಯಾಗ್ರಹಣ, ಜುಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ಬಹಳ ಹಿಂದೆ ಶುರುವಾಗಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ಅಂತೂ ಇಂತೂ ತೆರೆಗೆ ಬರ್ತಿದೆ.

More from Filmibeat

Read more about: dhanveer darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X