ಕರಿ ಚಿರತೆ ದತ್ತು ಪಡೆದ 'ಬಜಾರ್' ನಟ ಧನ್ವೀರ್
'ಬಜಾರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಪ್ರವೇಶಿಸಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ನಟ ಧನ್ವೀರ್, ಕರಿ ಚಿರತೆಯನ್ನು ದತ್ತು ಪಡೆದುಕೊಂಡಿದ್ದಾರೆ.
35 ಸಾವಿರ ರೂಪಾಯಿ ನೀಡಿ ಒಂದು ವರ್ಷದ ಅವಧಿಗೆ ಕರಿ ಚಿರತೆಯನ್ನು ದತ್ತು ಪಡೆದಿದ್ದಾರೆ. ಸೆಪ್ಟೆಂಬರ್ 8 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಟ ಧನ್ವೀರ್ ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದರು.
ಹುಟ್ಟುಹಬ್ಬ ಹಿನ್ನೆಲೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ ಯುವ ನಟನಿಗೆ ಸ್ನೇಹಿತರು ಮತ್ತು ಅಭಿಮಾನಿಗಳು ಸಾಥ್ ನೀಡಿದರು. ಈ ವೇಳೆ ಮೃಗಾಲಯ ಸಿಬ್ಬಂದಿಯಿಂದ ಪ್ರಮಾಣ ಪತ್ರ ಸ್ವೀಕಾರ ಮಾಡಿದರು. ಹಾಗಯೇ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದರು. ಧನ್ವೀರ್ ಪಾರಿವಾಳ ಹಾರಿಸಿದ್ದು ವಿಶೇಷವಾಗಿತ್ತು.

ಇದಕ್ಕೂ ಮುಂಚೆ ನಟ ಶಿವರಾಜ್ ಕುಮಾರ್ ಮೈಸೂರು ಮೃಗಾಲಯದಿಂದ ಪಾರ್ವತಿ ಎಂಬ ಆನೆ ಮರಿಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದರು. ನಂತರ ಶಿವರಾಜ್ ಕುಮಾರ್ ಅಭಿಮಾನಿ ಸಂಘ ಸುಮಾರು 35 ಪ್ರಾಣಿಗಳು ದತ್ತು ಪಡೆದಿದ್ದರು.
ಇನ್ನುಳಿದಂತೆ 'ಬಂಪರ್' ಚಿತ್ರದಲ್ಲಿ ಧನ್ವೀರ್ ನಟಿಸುತ್ತಿದ್ದು, ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಈ ಚಿತ್ರವನ್ನು ಹರಿ ಸಂತು ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











