For Quick Alerts
  ALLOW NOTIFICATIONS  
  For Daily Alerts

  ಕರಿ ಚಿರತೆ ದತ್ತು ಪಡೆದ 'ಬಜಾರ್' ನಟ ಧನ್ವೀರ್

  |

  'ಬಜಾರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಪ್ರವೇಶಿಸಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ನಟ ಧನ್ವೀರ್, ಕರಿ ಚಿರತೆಯನ್ನು ದತ್ತು ಪಡೆದುಕೊಂಡಿದ್ದಾರೆ.

  35 ಸಾವಿರ ರೂಪಾಯಿ ನೀಡಿ ಒಂದು ವರ್ಷದ ಅವಧಿಗೆ ಕರಿ ಚಿರತೆಯನ್ನು ದತ್ತು ಪಡೆದಿದ್ದಾರೆ. ಸೆಪ್ಟೆಂಬರ್ 8 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಟ ಧನ್ವೀರ್ ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದರು.

  ಶಿವರಾಜ್ ಕುಮಾರ್ ಹೆಜ್ಜೆಯನ್ನು ಹಿಂಬಾಲಿಸಿದ ಅಭಿಮಾನಿಗಳು ಶಿವರಾಜ್ ಕುಮಾರ್ ಹೆಜ್ಜೆಯನ್ನು ಹಿಂಬಾಲಿಸಿದ ಅಭಿಮಾನಿಗಳು

  ಹುಟ್ಟುಹಬ್ಬ ಹಿನ್ನೆಲೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ ಯುವ ನಟನಿಗೆ ಸ್ನೇಹಿತರು ಮತ್ತು ಅಭಿಮಾನಿಗಳು ಸಾಥ್ ನೀಡಿದರು. ಈ ವೇಳೆ ಮೃಗಾಲಯ ಸಿಬ್ಬಂದಿಯಿಂದ ಪ್ರಮಾಣ ಪತ್ರ ಸ್ವೀಕಾರ ಮಾಡಿದರು. ಹಾಗಯೇ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದರು. ಧನ್ವೀರ್ ಪಾರಿವಾಳ ಹಾರಿಸಿದ್ದು ವಿಶೇಷವಾಗಿತ್ತು.

  ಇದಕ್ಕೂ ಮುಂಚೆ ನಟ ಶಿವರಾಜ್ ಕುಮಾರ್ ಮೈಸೂರು ಮೃಗಾಲಯದಿಂದ ಪಾರ್ವತಿ ಎಂಬ ಆನೆ ಮರಿಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದರು. ನಂತರ ಶಿವರಾಜ್ ಕುಮಾರ್ ಅಭಿಮಾನಿ ಸಂಘ ಸುಮಾರು 35 ಪ್ರಾಣಿಗಳು ದತ್ತು ಪಡೆದಿದ್ದರು.

  ಅಭಿಮಾನಿಗಳ ಪ್ರೀತಿ ನೋಡಿ ಶಾಕ್ ಆಯ್ತು | Filmibeat Kannada

  ಇನ್ನುಳಿದಂತೆ 'ಬಂಪರ್' ಚಿತ್ರದಲ್ಲಿ ಧನ್ವೀರ್ ನಟಿಸುತ್ತಿದ್ದು, ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಈ ಚಿತ್ರವನ್ನು ಹರಿ ಸಂತು ನಿರ್ದೇಶನ ಮಾಡುತ್ತಿದ್ದಾರೆ.

  English summary
  Kannada actor Dhanveerah has adopted black panther of mysuru zoo for one year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X