Don't Miss!
- News
ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್ನಿಂದ ಗುಣಮುಖ: ಜಿಲ್ಲಾ ಪ್ರವಾಸ ಆರಂಭ
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಕೋಮಲ್ ಕುಮಾರ್ '2020' ಚಿತ್ರಕ್ಕೆ ಧನ್ಯಾ ಬಾಲಕೃಷ್ಣ ನಾಯಕಿ!
ಕೆಂಪೇಗೌಡ-2 ಚಿತ್ರದ ಬಳಿಕ ಕನ್ನಡ ನಟ ಕೋಮಲ್ ಕುಮಾರ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು, ಈ ಚಿತ್ರ ಔಟ್ ಅಂಡ್ ಔಟ್ ಕಾಮಿಡಿ ಕಥೆ ಹೊಂದಿದೆ. ಸಂಭಾಷಣೆಕಾರ ಕೆಎಲ್ ರಾಜಶೇಖರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ '2020' ಎಂದು ಹೆಸರ ಸಹ ಇಡಲಾಗಿದೆ.
ನಿನ್ನೆಯಷ್ಟೇ 2020 ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಮಕ್, ಅಯೋಗ್ಯ ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ 'ಕ್ರಿಸ್ಟಲ್ ಪಾರ್ಕ್ ಸಿನೆಮಾಸ್' ಬ್ಯಾನರ್ ಅಡಿ ಟಿಆರ್ ಚಂದ್ರಶೇಖರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಟೈಟಲ್ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರ ಈಗ ನಾಯಕಿ ವಿಚಾರಕ್ಕೆ ಗಮನ ಸೆಳೆಯುತ್ತಿದೆ. ಮುಂದೆ ಓದಿ...

ಕೋಮಲ್ ನಾಯಕಿ ಧನ್ಯಾ ಬಾಲಕೃಷ್ಣ
ಟ್ವೆಂಟಿ ಟ್ವೆಂಟಿ (2020) ಚಿತ್ರದಲ್ಲಿ ಕೋಮಲ್ ಕುಮಾರ್ ಗೆ ನಾಯಕಿಯಾಗಿ ಧನ್ಯ ಬಾಲಕೃಷ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಧನ್ಯ, ಕೋಮಲ್ ಜೊತೆ ತೆರೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದೆಯಂತೆ.
ಕೋಮಲ್
ಕುಮಾರ್
ಮುಂದಿನ
ಚಿತ್ರದ
ಹೆಸರು
ಬಹಿರಂಗ

ಧನ್ಯಾಗೆ ಇದು ಎರಡನೇ ಕನ್ನಡ ಚಿತ್ರ
ಒಂದು ವೇಳೆ ಕೋಮಲ್ ಚಿತ್ರಕ್ಕೆ ಧನ್ಯಾ ಬಾಲಕೃಷ್ಣ ನಾಯಕಿಯಾದ್ರೆ, ಇದು ಎರಡನೇ ಕನ್ನಡ ಸಿನಿಮಾ ಆಗಲಿದೆ. ಇದಕ್ಕೂ ಮುಂಚೆ ರಿಷಿ ನಟಿಸಿದ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾದಲ್ಲಿ ಧನ್ಯ ಅಭಿನಯಿಸಿದ್ದರು. ಇದು ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರ.

ತಮಿಳಿನಲ್ಲಿ ಒಂದು ಸಿನಿಮಾ
ಪ್ರಸ್ತುತ ಧನ್ಯಾ ಬಾಲಕೃಷ್ಣ ಇನ್ನು ಹೆಸರಿಡ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಬಿಟ್ಟರೆ ಸದ್ಯಕ್ಕೆ ಬೇರೆ ಯಾವ ಪ್ರಾಜೆಕ್ಟ್ ಸಹ ಅಧಿಕೃತವಾಗಿಲ್ಲ. ಈ ಮಧ್ಯೆ ಕನ್ನಡದ 2020 ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ದೀಪಾವಳಿಗೆ ಆರಂಭ!
2020 ಚಿತ್ರದ ದೀಪಾವಳಿ ಪ್ರಯುಕ್ತ ಚಿತ್ರದ ಮುಹೂರ್ತ ಮಾಡಿಕೊಳ್ಳುವ ತಯಾರಿಯಲ್ಲಿದೆ. ಕೋಮಲ್, ಧನ್ಯ ಜೊತೆ ಕುರಿ ಪ್ರತಾಪ್, ತಬಲ ನಾಣಿ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ನಟಿಸಲಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಲಿದ್ದಾರೆ.