ರಾಜ್ ಮೊಮ್ಮಗಳ ಮೊದಲ ಸಿನಿಮಾದ ಫಸ್ಟ್ ಲುಕ್ ರಿಲೀಸ್
'ನಿನ್ನ ಸನಿಹಕೆ' ನಟಿ ಧನ್ಯಾ ರಾಮ್ ಕುಮಾರ್ ನಟನೆಯ ಮೊದಲ ಸಿನಿಮಾ. ಈ ಚಿತ್ರದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ. ಚಿತ್ರದ ಮೊದಲ ಪೋಸ್ಟರ್ ಅನ್ನು ಧನ್ಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಜ್ ಕುಮಾರ್ ಮೊಮ್ಮಕ್ಕಳು ಧನ್ಯಾ ಚಿತ್ರರಂಗಕ್ಕೆ ಬಂದಿದ್ದಾರೆ. ಅವರ ಮೊದಲ ಸಿನಿಮಾಗೆ 'ನಿನ್ನ ಸನಿಹಕೆ' ಎಂಬ ಹೆಸರನ್ನು ಇಡಲಾಗಿದೆ. ಧನ್ಯಾ ರಾಮ್ ಕುಮಾರ್, ರಾಜ್ ಪುತ್ರಿ ಪೂರ್ಣಿಮಾ ಹಾಗೂ ನಟ ರಾಮ್ ಕುಮಾರ್ ಅವರ ಪುತ್ರಿ .
ಧನ್ಯಾ ರಾಮ್ ಕುಮಾರ್ ಮೊದಲ ಸಿನಿಮಾಗೆ ನಾಯಕನಾಗಿ ಸೂರಜ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಮದುವೆಯ ಮಮತೆಯ ಕರೆಯೋಲೆ', 'ಸಿಲಿಕಾನ್ ಸಿಟಿ' ಹಾಗೂ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರಗಳಲ್ಲಿ ಸೂರಜ್ ನಾಯಕನಾಗಿದ್ದರು.

ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಗಮನಿಸಿದಾಗಲೇ ಇದೊಂದು ಲವ್ ಸ್ಟೋರಿ ಸಿನಿಮಾ ಎಂಬುದು ತಿಳಿಯುತ್ತದೆ. ಧನ್ಯಾ ಹಾಗು ಸೂರಜ್ ಜೋಡಿ ಪೋಸ್ಟರ್ ನಲ್ಲಿ ಮುದ್ದಾಗಿ ಕಾಣುತ್ತಿದೆ. ವೈಟ್ ಅಂಡ್ ಗ್ರೇ ಮೀಡಿಯಾ ಸಂಸ್ಥೆ ಈ ಸಿನಿಮಾಗೆ ಬಂಡವಾಳ ಹಾಕಿದೆ.
ಈ ಹಿಂದೆ 'ಸಿಲಿಕಾನ್ ಸಿಟಿ' ಹಾಗೂ 'ಉತ್ತಮ ವಿಲನ್' ಸಿನಿಮಾಗಳಲ್ಲಿ ಕೆಲಸ ಮಾಡಿದ್ದ, ಸುಮನ್ ಜಾದುಗರ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಧನ್ಯಾರನ್ನು ಲಾಂಚ್ ಮಾಡುತ್ತಿದ್ದಾರೆ.
ವಿಶೇಷ ಎಂದರೆ, ನಾಯಕ ಸೂರಜ್ ಗೌಡ ಅವರೇ ಈ ಚಿತ್ರದ ಕಥೆ ಬರೆದಿದ್ದಾರೆ. ರಘು ದೀಕ್ಷಿತ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











