For Quick Alerts
  ALLOW NOTIFICATIONS  
  For Daily Alerts

  ಅಪ್ಪನ ಜೊತೆಗೆ ಅಭಿನಯಿಸಿದರು ಧರ್ಮ ಕೀರ್ತಿರಾಜ್

  By Naveen
  |

  ಅಪ್ಪನ ರೀತಿ ಮಗ ಕೂಡ ಚಿತ್ರರಂಗಕ್ಕೆ ಬರುವುದು ಸಾಮಾನ್ಯ. ಆದರೆ, ಅದರಲ್ಲಿ ಕೆಲವೇ ಕೆಲವರು ಜನರಿಗೆ ಮಾತ್ರ ಅಪ್ಪನ ಜೊತೆ ನಟಿಸುವ ಅವಕಾಶ ಸಿಗುತ್ತದೆ. ಈಗ ಅಂತಹ ಅವಕಾಶವನ್ನು ಪಡೆದುಕೊಂಡಿರುವುದು ನಟ ಧರ್ಮ ಕೀರ್ತಿರಾಜ್.

  ಖ್ಯಾತ ಖಳ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕೀರ್ತಿರಾಜ್ ಈಗ ತಮ್ಮ ಮಗನ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. 'ವಿವಿಕ್ತಾ' ಎನ್ನುವ ಹೊಸ ಕನ್ನಡ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಮತ್ತು ಕೀರ್ತಿರಾಜ್ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ.

  ಈ ಹಿಂದೆ ಧರ್ಮ ಕೀರ್ತಿರಾಜ್ ಅವರ ಒಂದು ಸಿನಿಮಾದಲ್ಲಿ ಕೀರ್ತಿರಾಜ್ ನಟಿಸಿದ್ದರು. ಆದರೆ ಆ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯಗಳು ಇರಲಿಲ್ಲ. ಸೋ, ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಅಪ್ಪ ಮಗ ಜೋಡಿ ತೆರೆ ಮೇಲೆ ಒಂದಾಗಿದೆ. ಇನ್ನು ಈ ಚಿತ್ರದಲ್ಲಿ ಕೀರ್ತಿರಾಜ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, 'ಜಿಗರ್ ಥಂಡ' ಚಿತ್ರದ ಕೋ ಡೈರೆಕ್ಟರ್ ಆಗಿದ್ದ ವಿಜ್ಞೇಶ್ 'ವಿವಿಕ್ತಾ' ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

  'ವಿವಿಕ್ತಾ' ಸಿನಿಮಾದ ಜೊತೆಗೆ 'ಜಾಸ್ತಿ ಪ್ರೀತಿ' ಎಂಬ ಸಿನಿಮಾವನ್ನು ಸಹ ಧರ್ಮ ಕೀರ್ತಿರಾಜ್ ಮಾಡುತ್ತಿದ್ದಾರೆ. ಉಳಿದಂತೆ ನಾಲ್ಕು ಬೇರೆ ಬೇರೆ ಸಿನಿಮಾದಲ್ಲಿ ಅವರು ಬಿಜಿ ಇದ್ದಾರಂತೆ.

  English summary
  Kannada actor Dharma Keerthi Raj share screen space with his father Keerthi Raj in 'Viviktha' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X