»   » ಬಿಡುಗಡೆಗೆ ಕಾದಿಹಳು ‘ಧರ್ಮದೇವತೆ’

ಬಿಡುಗಡೆಗೆ ಕಾದಿಹಳು ‘ಧರ್ಮದೇವತೆ’

Posted By: Staff
Subscribe to Filmibeat Kannada

ಮೂರು ದಶಗಳ ಹಿಂದೆ ನಡೆದ ಘಟನೆಯನ್ನು ಆಧರಿಸಿ, ಶ್ರೀ ಭೀಮಾಂಬಿಕಾ ಸಿನಿ ಕಂಬೈನ್ಸ್‌ (ಗದಗ) ಲಾಂಛನದಲ್ಲಿ ರವಿ ಬಿ. ದಂಡಿನ ಹಾಗೂ ಜೆ.ಎಸ್‌. ಮಾರುತಿ ನಿರ್ಮಿಸುತ್ತಿರುವ 'ಧರ್ಮದೇವತೆ" ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ನಲ್ಲಿ ಚಿತ್ರ ತೆರೆಕಾಣಲಿದೆ.

ದೇವರಾಜ್‌ ಜೊತೆಯಲ್ಲಿ ಅಭಿನಯಿಸಿರುವ ನವವಿವಾಹಿತೆ ಶಿಲ್ಪ ಈ ಚಿತ್ರದಲ್ಲಿ ದೊಡ್ಡ ಅಂಚಿನ ಇಳಕಲ್‌ ಸೀರೆ ಉಟ್ಟು, ಹಣೆಯ ಮೇಲೆ ವಿಭೂತಿ ಧರಿಸಿ, ಮಧ್ಯದಲ್ಲೊಂದು ರುಪಾಯಿ ಅಗಲದ ಕುಂಕುಮ ಕಾಸ್ಟ್ಯೂಮ್‌ನಲ್ಲಿ ಧಾರವಾಡ ಕಡೆಯ ಪಕ್ಕಾ ಗರತಿಯಂತೆ ಕಾಣ್ತಾರಂತೆ. ಕುಂದಗೋಳದಲ್ಲಿ ಈ ಚಿತ್ರದ ಷೂಟಿಂಗ್‌ ನೋಡಿದ ಮಂದಿ ಭೀಮವ್ವನೇ ಮತ್ತೆ ಹುಟ್ಟಿ ಬಂದವ್ಳೆ ಎಂದು ಭ್ರಮಿಸಿದರು ಅಂತಾರೆ ನಿರ್ಮಾಪಕರು.

ನಾಗೇಂದ್ರ ಮಾಗಡಿ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಹಣದ ಹೊಣೆಯನ್ನು ಅಣಜಿ ನಾಗರಾಜ್‌ ಹೊತ್ತಿದ್ದಾರೆ. ಶ್ಯಾಂ ಸಂಕಲನ, ಟೈಗರ್‌ ಮಧು ಸಾಹಸ, ತ್ರಿಭುವನ್‌ ನೃತ್ಯ, ಉಪೇಂದ್ರ ಕುಮಾರ್‌ ಸಂಗೀತ, ತಾಡೂರು ಕೇಶವರ ಸಂಭಾಷಣೆ ಚಿತ್ರಕ್ಕಿದೆ.

ತಾರಾಗಣದಲ್ಲಿ ದೇವರಾಜ್‌, ಶಿಲ್ಪ, ಜಯಂತಿ, ರಾಗಸುಧಾ, ಸತ್ಯಜಿತ್‌, ಬ್ಯಾಂಕ್‌ ಜನಾರ್ದನ್‌, ಕರಿಬಸವಯ್ಯ, ಬ್ರಹ್ಮಾವರ್‌ ಮೊದಲಾದವರಿದ್ದಾರೆ.

English summary
Dharmadevate is waiting for release
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada