ಸರಿಗಮಪ ಹನುಮಂತನ ಪಾತ್ರದಲ್ಲಿ ನಟ ಧರ್ಮಣ್ಣ: ನಿಜವೇನು?

ಸರಿಗಮಪ ನಿಂದಾಗಿ ಬಹಳ ಖ್ಯಾತರಾಗಿರುವ ಗಾಯಕ ಹನುಮಂತು ಜೀವನ ಸಿನಿಮಾ ಆಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೀಗೊಂದು ಸುದ್ದಿ ಹರಿದಾಡಲು ಕಾರಣ ನಟ ಧರ್ಮಣ್ಣ ಮತ್ತು ನಿರ್ದೇಶಕ ಸಿಂಪಲ್ ಸುನಿ. ಪ್ರತಿಭಾವಂತ ನಟ ಧರ್ಮಣ್ಣ ಅವರ ಹುಟ್ಟುಹಬ್ಬದಂದು ನಿರ್ದೇಶಕ ಸಿಂಪಲ್ ಸುನಿ ಧರ್ಮಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆ ಚಿತ್ರದಿಂದಾಗಿ ಧರ್ಮಣ್ಣ, ರಿಯಾಲಿಟಿ ಶೋ ಸ್ಟಾರ್ ಹನುಮಂತು ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುವಂತಾಯಿತು.

ಸಿಂಪಲ್ ಸುನಿ ಹಂಚಿಕೊಂಡಿದ್ದ ಆ ಚಿತ್ರದಲ್ಲಿ ಧರ್ಮಣ್ಣ, ಹನುಮಂತು ನಂತೆ ಟವೆಲ್ ಹಾಕಿಕೊಂಡು ಹಾಡುತ್ತಿದ್ದಾರೆ. ಧರ್ಮಣ್ಣ ಅವರ ಉಡುಪು, ಹಾವ-ಭಾವ ತುಸು ಹನುಮಂತನನ್ನು ಹೋಲುವಂತೆಯೇ ಇದೆ.

Dharmanna Not Acting As Singer Hanumanthu: Simple Suni

ಆದರೆ ಹನುಮಂತು ಬಗ್ಗೆ ಯಾವುದೇ ಸಿನಿಮಾ ನಿರ್ಮಾಣ ಮಾಡಲಾಗುತ್ತಿಲ್ಲ. ನಟ ಧರ್ಮಣ್ಣ ಸಹ ಹನುಮಂತು ಪಾತ್ರದಲ್ಲಿ ನಟಿಸುತ್ತಿಲ್ಲ. ಸಿಂಪಲ್ ಸುನಿ ನಿರ್ದೇಶನದ 'ಸಖತ್' ಸಿನಿಮಾದಲ್ಲಿ ನಟ ಧರ್ಮಣ್ಣ ನಟಿಸುತ್ತಿದ್ದಾರೆ. ಅದೇ ಸಿನಿಮಾದ ಚಿತ್ರವೊಂದನ್ನು ಸಿಂಪಲ್ ಸುನಿ ಹಂಚಿಕೊಂಡಿದ್ದರು ಅಷ್ಟೆ.

Recommended Video

ಮದುವೆಯ ಖುಷಿ ಎಷ್ಟಿದೆ ಅನ್ನೋದನ್ನ ಹಂಚಿಕೊಂಡ ಮಿಲನಾ ನಾಗರಾಜ್ | Filmibeat Kannada

ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ಸಿಂಪಲ್ ಸುನಿ. ನಮ್ಮ ಸಿನಿಮಾದಲ್ಲಿ ರಿಯಾಲಿಟಿ ಶೋ ಬಗೆಗೆ ಸಂಬಂಧಿಸಿದಂತೆ ಹಲವು ದೃಶ್ಯಗಳು ಇವೆ. ಆದರೆ ಹನುಮಂತು ಪಾತ್ರ ನಮ್ಮ ಸಿನಿಮಾದಲ್ಲಿ ಇಲ್ಲ. ಧರ್ಮಣ್ಣ ರಿಯಾಲಿಟಿ ಶೋ ಸ್ಪರ್ಧಿಯ ಪಾತ್ರದಲ್ಲಿ ನಟಿಸಿದ್ದಾರೆ ಆದರೆ ಅದಕ್ಕೂ ಹನುಮಂತುಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ ಸಿಂಪಲ್ ಸುನಿ.

More from Filmibeat

English summary
Director Simple Suni said Dharmanna not acting as singer Hanumanthu in his Sakath movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X