twitter
    For Quick Alerts
    ALLOW NOTIFICATIONS  
    For Daily Alerts

    Dr.Veerendra Heggade: ಯಶ್ ಬಳಿ ಮಕ್ಕಳಿಗೆ ವಯಸ್ಸೆಷ್ಟು ಎಂದು ಕೇಳಿದ ಡಾ. ಡಿ.ವೀರೇಂದ್ರ ಹೆಗ್ಗಡೆ

    By ಮಂಗಳೂರು ಪ್ರತಿನಿಧಿ
    |

    ವಿಶ್ವಾದ್ಯಾಂತ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಕೆ.ಜಿ.ಎಫ್-2 ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭ ವಾಗಿದೆ. ಈ ಹಿನ್ನಲೆಯಲ್ಲಿ ಚಿತ್ರ ನಟ ಯಶ್ ಮತ್ತು ಚಿತ್ರದ ನಿರ್ಮಾಪಕ ವಿಜಯ್ ಕಿಗಂದೂರು ಕರಾವಳಿಯಲ್ಲಿ ಟೆಂಪಲ್ ರನ್ ಮಾಡಿದ್ದಾರೆ. ಜಿಲ್ಲೆಯ ಅತೀ ಪ್ರಸಿದ್ಧ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ, ಉಜಿರೆಯ ಸೂರ್ಯ ದೇವಸ್ಥಾನಕ್ಕೆ ನಟ ಯಶ್ ಮತ್ತು ಚಿತ್ರ ನಿರ್ಮಾಪಕ ವಿಜಯ್ ಕಿರಂಗಂದೂರು ಭೇಟಿ ನೀಡಿದ್ದಾರೆ. ಚಿತ್ರ ಬಿಡುಗಡೆ ಹಿನ್ನಲೆ ದೇವಸ್ಥಾನದಲ್ಲಿ‌ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ

    Recommended Video

    Srinidhi Shetty | Kgf 2 | ಯಶ್ ಬಗ್ಗೆ ನಾಯಕಿ ಶ್ರೀನಿಧಿ ಶೆಟ್ಟಿ ಇಂಟ್ರಸ್ಟಿಂಗ್ ಮಾತು | Filmibeat Kannada

    ವಿಶೇಷ ಹೆಲಿಕಾಪ್ಟರ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಲಿಪ್ಯಾಡ್‌ಗೆ ಆಗಮಿಸಿದ‌‌ ನಟ ಯಶ್ ತಂಡ ಮೊದಲು ಭಕ್ತರು ಮಾಡಿರುವ ಅಲಿಖಿತ ನಿಯಮದಂತೆ ಮೊದಲು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

    Prashnath Neel: 8 ವರ್ಷದ ಬಳಿಕವೇ ಪ್ರಶಾಂತ್ ನೀಲ್ ಕನ್ನಡ ಚಿತ್ರ ಮಾಡೋದು, ಕಾರಣ ಇಲ್ಲಿದೆ!Prashnath Neel: 8 ವರ್ಷದ ಬಳಿಕವೇ ಪ್ರಶಾಂತ್ ನೀಲ್ ಕನ್ನಡ ಚಿತ್ರ ಮಾಡೋದು, ಕಾರಣ ಇಲ್ಲಿದೆ!

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿದ ಯಶ್ ತಂಡ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಯನ್ನು ಸಲ್ಲಿಸಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ ಸೇರಿದಂತೆ ಸದಸ್ಯರು ಯಶ್ ಮತ್ತು ಅವರ ತಂಡವನ್ನುಬರಮಾಡಿಕೊಂಡು ಸಕಲ ವ್ಯವಸ್ಥೆ ಯನ್ನು ಮಾಡಿದ್ದಾರೆ. ಈ ವೇಳೆ ಯಶ್ ಕುಟುಂಬದ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿಚಾರಿಸಿದ್ದಾರೆ.

    KGF 2 First Review: 'ಕೆಜಿಎಫ್ 2' ಕನ್ನಡ ಚಿತ್ರರಂಗದ ಕಿರೀಟ, ಮೊದಲ ವಿಮರ್ಶೆ ಇಲ್ಲಿದೆ!KGF 2 First Review: 'ಕೆಜಿಎಫ್ 2' ಕನ್ನಡ ಚಿತ್ರರಂಗದ ಕಿರೀಟ, ಮೊದಲ ವಿಮರ್ಶೆ ಇಲ್ಲಿದೆ!

    ಹೆಗ್ಗಡೆಯವರೊಂದಿಗೆ 10 ನಿಮಿಷ ಮಾತುಕತೆ

    ಹೆಗ್ಗಡೆಯವರೊಂದಿಗೆ 10 ನಿಮಿಷ ಮಾತುಕತೆ

    ಕುಕ್ಕೆ ಸುಬ್ರಹ್ಮಣ್ಯದ ಬಳಿಕ ನಟ ಯಶ್ ರಸ್ತೆ ಮಾರ್ಗ ಮೂಲಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನಕ್ಕೂ ಮೊದಲು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಬೇಡಿದ್ದಾರೆ. ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಕಾಲಿಗೆ ಬಿದ್ದು ನಮಸ್ಕರಿಸಿದ ಯಶ್, ವೀರೇಂದ್ರ ಹೆಗ್ಗಡೆಯವರ ಜೊತೆ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

    'ಕೆಜಿಎಫ್ 2' ಬಗ್ಗೆ ಮಾಹಿತಿ ಪಡೆದ ವೀರೇಂದ್ರ ಹೆಗ್ಗಡೆ

    'ಕೆಜಿಎಫ್ 2' ಬಗ್ಗೆ ಮಾಹಿತಿ ಪಡೆದ ವೀರೇಂದ್ರ ಹೆಗ್ಗಡೆ

    ಈ ವೇಳೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಕೆ.ಜಿ.ಎಫ್ ಚಿತ್ರದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಚಿತ್ರದ ಸ್ಯಾಟಲೈಟ್ ಹಕ್ಕು,ಶೂಟಿಂಗ್, ಚಿತ್ರ ಬಿಡುಗಡೆಯಾಗುತ್ತಿರುವ ಸ್ಥಳಗಳು, ಥಿಯೇಟರ್ ಪೂರೈಕೆಯ ಬಗ್ಗೆ ವೀರೇಂದ್ರ ಹೆಗ್ಗಡೆ ಯಶ್ ಜೊತೆ ಮಾಹಿತಿ ಪಡೆದಿದ್ದಾರೆ.

    ಮಕ್ಕಳ ವಯಸ್ಸು ಕೇಳಿದ ವೀರೇಂದ್ರ ಹೆಗ್ಗಡೆ

    ಮಕ್ಕಳ ವಯಸ್ಸು ಕೇಳಿದ ವೀರೇಂದ್ರ ಹೆಗ್ಗಡೆ

    ಈ ವೇಳೆ ಯಶ್ ಕುಟುಂಬದ ಬಗ್ಗೆಯೂ ವೀರೇಂದ್ರ ಹೆಗ್ಗಡೆ ವಿಚಾರಿಸಿದ್ದಾರೆ. ಮಗಳು ಮತ್ತು ಮಗನ ವಯಸ್ಸಿನ ಬಗ್ಗೆ ವಿಚಾರಿಸಿ ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆ ಬರುವಂತೆ ಹೇಳಿದ್ದಾರೆ. ಅಲ್ಲದೇ ಮದುವೆಯಾದ ವರ್ಷದಲ್ಲಿ ಯಶ್-ರಾಧಿಕಾ ಜೋಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರ ಬಗ್ಗೆಯೂ ನೆನಪು ಮೆಲುಕು ಹಾಕಿದ್ದಾರೆ. ಯಶ್ ಮುಂದಿನ ಚಿತ್ರ ಪ್ರವಾಸ ದ ಬಗ್ಗೆಯೂ ಮಾಹಿತಿ ಪಡೆದ ಹೆಗ್ಗಡೆ,ಧರ್ಮಸ್ಥಳ ದಿಂದ ಉಜಿರೆ ಸೂರ್ಯ ದೇವಸ್ಥಾನ ಕ್ಕೆ ಹೋಗೋದಾಗಿ ಯಶ್ ತಿಳಿಸಿದಾಗ,ಕ್ಷೇತ್ರ ದಲ್ಲಿ ದರ್ಶನ ಮುಗಿಸಿ ಊಟ ಮಾಡಿಯೇ ತೆರಳಬೇಕಾಗಿ ವಿನಂತಿ ಮಾಡಿದ್ದರು.

    ಯಶ್ ಪ್ರತಿಕ್ರಿಯೆ

    ಯಶ್ ಪ್ರತಿಕ್ರಿಯೆ

    ಬಳಿಕ ಭೇಟಿ ಬಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಟ ರಾಕಿಂಗ್ ಸ್ಟಾರ್ ಯಶ್, "ಸಿನಿಮಾ ರಿಲೀಸ್ ಹತ್ತಿರ ಬರ್ತಿದೆ. ಹಾಗಾಗಿ ದೇವಸ್ಥಾನ ಭೇಟಿ ನೀಡಿದ್ದೇವೆ. ‌ನಾನು ಮತ್ತು ನಿರ್ಮಾಪಕರು ಒಳ್ಳೆ ಕೆಲಸ ಶುರು ಮಾಡುವಾಗ ದೇವರ ದರ್ಶನ ಮಾಡುತ್ತೇವೆ‌. ನಾವು ಪಟ್ಟ ಶ್ರಮಕ್ಕೆ ದೇವರ ಅನುಗ್ರಹ ಇರಬೇಕಲ್ವಾ. ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹ ಪಡೆದಿದ್ದೇವೆ. ಹೆಗ್ಗಡೆಯವರ ಜೊತೆ ಮಾತನಾಡಿ ಅವರ ಆಶೀರ್ವಾದ ಪಡೆದಿದ್ದೇವೆ. ನಾನು ತುಂಬಾ ವರ್ಷದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದೇನೆ. ಹೆಗ್ಗಡೆಯವರು ನನ್ನೆಲ್ಲಾ ಬೆಳವಣಿಗೆ ನೋಡುತ್ತಾ ಬಂದವರು. ಇವತ್ತು ಅವರು ಖುಷಿ ಪಟ್ಟು ಆಶೀರ್ವಾದ ಮಾಡಿದ್ದಾರೆ. 'ಕೆಜಿಎಫ್ 2' ರಿಲೀಸ್ ಅಭಿಮಾನಿಗಳಿಗೊಂದು ಖುಷಿ ವಿಚಾರ ಆಗಿದೆ. ಚಿತ್ರದ ಟಿಕೆಟ್ ಓಪನ್ ಆಗಿದೆ, ಎಲ್ಲರೂ ನಮ್ಮನ್ನು ಆಶೀರ್ವದಿಸಿ" ಅಂತಾ ಯಶ್ ಹೇಳಿದ್ದಾರೆ.

    English summary
    Dharmasthala administrator Veerendra Hegde Asked Yash about His Kids Age. Know More.
    Monday, April 11, 2022, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X