"ದರ್ಶನ್‌ ಅವ್ರದ್ದು ಶ್ರೇಷ್ಠ ವ್ಯಕ್ತಿತ್ವ: ನಾನು ಕೂಡ ಅವ್ರ ಅಭಿಮಾನಿ": ಡಾ. ಡಿ ವೀರೇಂದ್ರ ಹೆಗ್ಗಡೆ

ನಟ ದರ್ಶನ್ ನಿನ್ನೆ(ಮೇ 3) ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಅಷ್ಟೇ ಅಲ್ಲ, ಅಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲೂ ಭಾಗಿ ಆಗಿ ನವ ಜೋಡಿಗಳಿಗೆ ಶುಭ ಹಾರೈಸಿದರು. ಧರ್ಮಸ್ಥಳ ಕ್ಷೇತ್ರದ ಮಹಿಮೆ ಹಾಗೂ ಧರ್ಮಾಧಿಕಾರಿಗಳ ಹಿತವಚನದಿಂದ ತಮ್ಮ ಜೀವನದಲ್ಲಾದ ಬದಲಾವಣೆಯನ್ನು ನಟ ದರ್ಶನ್ ವಿವರಿಸಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ಬರೀ ಸಿನಿಮಾ ಮಾತ್ರವಲ್ಲ ಅವರ ಸರಳ, ಸಜ್ಜನ ಗುಣ. ಪ್ರಾಣಿ ಪಕ್ಷಿ ಪ್ರೀತಿ, ಸಹಾಯ ಮಾಡುವ ಮನೋಭಾವ ಅವರನ್ನು ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗುವಂತೆ ಮಾಡಿದೆ. 'ಕ್ರಾಂತಿ' ನಂತರ ದರ್ಶನ್ ಸದ್ಯ 'ಕಾಟೇರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣದಿಂದ ಬ್ರೇಕ್ ಪಡೆದು ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ತಮ್ಮ ಆಪ್ತರ ಪರವಾಗಿ ವಿವಿಧ ಕ್ಷೇತ್ರಗಳಲ್ಲಿ ಕಳೆದ ಕೆಲ ದಿನಗಳಿಂದ ಮತಬೇಟೆ ನಡೆಸುತ್ತಿದ್ದಾರೆ.

Dharmasthala Dharmadhikari Veerendra Heggade showers praise on Darshan For his Humility

ಇನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ದರ್ಶನ್ ಅವರ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಅವರು "ನಟ ದರ್ಶನ್ ಖ್ಯಾತ ನಟ. ಅವರ ಅಭಿಮಾನಿಗಳು ಇಲ್ಲಿ ಇದ್ದೀರಾ. ನೀವು ಮಾತ್ರವಲ್ಲ, ನಾನು ಕೂಡ ಅವರ ಅಭಿಮಾನಿ. ದರ್ಶನ್ ಅವರು ಪ್ರಕೃತಿ, ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಸಾಕಷ್ಟು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕಿ ಸಲಹುತ್ತಾರೆ. ಕಾಡಿಗೆ ಹೋಗಿ ವೈಲ್ಡ್‌ ಲೈಫ್ ಫೋಟೋಗ್ರಫಿ ಮಾಡುತ್ತಾರೆ. ಇಂತಹ ಸಾಕಷ್ಟು ಒಳ್ಳೆಯ ವಿಷಯಗಳಿವೆ"

"ನಟನೆಯ ಜೊತೆಗೆ ಅವರು ಮಾನವೀಯ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಸಿನಿಮಾಗಳನ್ನು ನಿರ್ದೇಶಕರು ಹೇಳಿದಂತೆ ಕೇಳುವುದು ಬೇರೆ. ಆದರೆ ಮನಸ್ಸಿನಿಂದ ಇದನ್ನೆಲ್ಲಾ ಮಾಡುತ್ತಿದ್ದಾರೆ. ನಿರ್ದೇಶಕರು ಹೇಳದ್ದನ್ನು ನಿಜ ಜೀವನದಲ್ಲಿ ಮಾಡುವಂತಹ ವ್ಯಕ್ತಿತ್ವ ಅವರದ್ದು. ಹೇಳಿ ಮಾಡುವುದು ನಟನೆ, ಆದರೆ ನಿಜ ಜೀವನದಲ್ಲಿ ಶ್ರೇಷ್ಟವಾದ ವ್ಯಕ್ತಿತ್ವವನ್ನು ಅವರು ಹೊಂದಿದ್ದಾರೆ."

Dharmasthala Dharmadhikari Veerendra Heggade showers praise on Darshan For his Humility

"ಸಾಮೂಹಿಕ ವಿವಾಹ ಎನ್ನುವುದು ಬಹಳ ಸರಳವಾಗಿದೆ. ಸರಳ ಅಂದ್ರೆ ಅಲ್ಪ ಎಂದು ಅಲ್ಲ. ಶ್ರೇಷ್ಟವಾದದ್ದು. ಇವತ್ತು ದರ್ಶನ್ ಅವರು ಇಲ್ಲಿ ಬಂದಿದ್ದಾರೆ. ಇದರ ಬಗ್ಗೆ ಅವರು ತಿಳಿದುಕೊಂಡಿದ್ದಾರೆ. ಸಾಮೂಹಿಕ ವಿವಾಹವನ್ನು ವೈಭವೀಕರಿಸಲು ಅವರನ್ನು ಇವತ್ತು ಆಹ್ವಾನಿದ್ದೇವೆ. ಈ ಕಾರ್ಯಕ್ರಮಕ್ಕೆ ಬಂದು ನಿಮಗೆ ಹಾರೈಸಿದ್ದಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ನಟ ದರ್ಶನ್ ಮಾತನಾಡಿ ಕ್ಷೇತ್ರದ ಮಹಿಮೆ ಹಾಗೂ ವೀರೇಂದ್ರ ಹೆಗ್ಗಡೆ ಅವರ ಹಿತವಚನದ ಬಗ್ಗೆ ವಿವರಿಸಿದರು. ತಮ್ಮ ಜೀವನದಲ್ಲಿ ಆದ ಬದಲಾಣೆಯನ್ನು ಹೇಳಿಕೊಂಡಿದ್ದಾರೆ. ತಂದೆ ತೂಗುದೀಪ ಶ್ರೀನಿವಾಸ್ ನಿಧನದ ನಂತರ ಕುಟುಂಬ ಆಧಾರಸ್ತಂಭವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ಅಂದು ಧರ್ಮಾಧಿಕಾರಿಗಳ ಹಿತವಚನದಿಂದ ಹೊಸ ಚೈತನ್ಯಾ ಬಂದಿತ್ತು. ಅಂದು ನಮ್ಮ ತಾಯಿ ನಾವು ಮಕ್ಕಳು ಮೂವರನ್ನು ನೀರಿ ತಳ್ಳಿ ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ವೀರೇಂದ್ರ ಹೆಗ್ಗಡೆ ಅವರ ಮಾತಿನಿಂದ ನಿರ್ಧಾರ ಬದಲಿಸಿಕೊಂಡಿದ್ದರು. ಅದರ ಪರಿಣಾಮ ನಾನು ಇಲ್ಲಿ ನಿಂತಿದ್ದೇನೆ" ಎಂದಿದ್ದರು.

"ನಾನು ಕೂಡ ಧರ್ಮಸ್ಥಳದಲ್ಲೇ ಮದುವೆ ಆಗಿದ್ದು. ಇಲ್ಲಿ ಮದುವೆ ಆಗುವುದು ಶ್ರೇಷ್ಠ. ಇಲ್ಲಿ ಮದುವೆ ಆಗುವುದರಿಂದ ಸಾಕಷ್ಟು ಅನುಕೂಲಗಳಿವೆ. ಜೊತೆಗೆ ದೇವರ ಆಶೀರ್ವಾದ ಸಿಗುತ್ತದೆ. ಜೀವನದಲ್ಲಿ ಏನೇ ಕಷ್ಟ ಇದ್ದರೂ ಇಲ್ಲಿ ಬನ್ನಿ, ವೀರೇಂದ್ರ ಹೆಗ್ಗಡೆ ಅವರ ಬಳಿ ಹೇಳಿಕೊಳ್ಳಿ" ಎಂದು ನವ ಜೋಡಿ ಜೋಡಿಗಳಿಗೆ ದರ್ಶನ್ ಹೇಳಿದ್ದರು.

More from Filmibeat

English summary
Dharmasthala Dharmadhikari Veerendra Heggade showers praise on Darshan For his Humility. He Said am also Big Fan of Darshan, Dharmadhikari Veerendra speech goes viral now. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X