ತಂಗಿ ಎಂದು ಕರೆದು ನಮ್ಮ ಮಗಳನ್ನು 'ಮುಕಳೆಪ್ಪ' ಮದ್ವೆಯಾದ, ಆಮೇಲೆ ಒದ್ದು ಒಳಗೆ ಹಾಕಿಸ್ತೀನಿ ಅಂದ-ಹೆಣ್ಣೆತ್ತವರ ಸಂಕಟ
ಧಾರವಾಡ ; ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್ ಹಾವಳಿ ಹೆಚ್ಚಾಗಿದೆ. ಉತ್ತಮವಾದ ಕಂಟೆಂಟ್‌ಗಳನ್ನು ಕೊಡುವ ಮೂಲಕ ಅನೇಕರು ಬಳಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಿಜಕ್ಕೂ ಗೆಲುವನ್ನು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಎನ್ನುವುದನ್ನು ಕೂಡ ಸಾಬೀತು ಮಾಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕರುನಾಡಿನಲ್ಲಿಯೇ ಹಲವಾರು ಜನ ಈ ಯೂಟ್ಯೂಬ್ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ.
ಆ ಪೈಕಿ ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ಕರುನಾಡಿನೆಲ್ಲೆಡೆ ತಮ್ಮ ವಿಡಿಯೋಗಳ ಮೂಲಕ ಜನ ಮನ ಗೆದ್ದು, 24ಲಕ್ಷ ಹಿಂಬಾಲಕರನ್ನು ಹೊಂದಿರುವ ಮುಕಳೆಪ್ಪ ಸುತ್ತ ಈಗ ವಿವಾದದ ಹುತ್ತ ಬೆಳೆದಿದೆ. ಮುಕಳೆಪ್ಪ ಅಲಿಯಾಸ್ ''ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್'' ವಿರುದ್ದ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.

ಇಷ್ಟೇ ಅಲ್ಲದೇ ಹುಡುಗಿಯ ತಾಯಿ ತಮ್ಮ ಮಗಳ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದು ನನ್ನ ಮಗಳಿಗೆ ಮುಕಳೆಪ್ಪ ಮೋಸ ಮಾಡಿದ್ದಾನೆ ಎಂದು ಆರೋಪವನ್ನು ಕೂಡ ಮಾಡಿದ್ದಾರೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯತ್ರಿ ಅವರ ತಂದೆ ತಾಯಿ ಮತ್ತೆ ಆರೋಪವನ್ನು ಮಾಡಿದ್ದು ಇದೀಗ ಹುಡುಗಿ ಗಾಯತ್ರಿಯ ಹೆತ್ತವರು ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ. ತಂಗಿ ಎಂದು ಕರೆದು ಮದುವೆಯಾದ ಈಗ ನಮಗೆ ಧಮ್ಕಿ ಹಾಕುತ್ತಿದ್ದಾನೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಗಾಯತ್ರಿ ಅವರ ತಾಯಿ ಶಿವಕ್ಕ ಜಾಲಿಹಾಳ ಈ ವರ್ಷದ ಮೇ ತಿಂಗಳಿನಲ್ಲಿಯೇ ಅವರು ಮದುವೆಯಾಗಿದ್ದಾರೆ. ಅದಲ್ಲದೇ ಮದುವೆ ನಂತರ ಮನೆಯಲ್ಲಿ 20 ದಿನ ಕೂಡ ಇದ್ದಳು..ಆದರೆ ಒಂದೇ ಒಂದು ಮಾತು ಕೂಡ ನಮಗೆ ಹೇಳಿಲ್ಲ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನಮ್ಮ ಜೊತೆ ರೀಲ್ಸ್ ಎಲ್ಲಾ ಮಾಡಿಕೊಂಡು ಇದ್ದಳು ಆದರೆ ಜೂನ್ 27ರಂದು ಕ್ವಾಜಾ ಹೊಸ ಬಸ್ ಸ್ಟ್ಯಾಂಡ್‌ದಿಂದ ನಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಹೇಳಿರುವ ಶಿವಕ್ಕ ಜಾಲಿಹಾಳ ಆ ನಂತರ ದೊಡ್ಡ ದೊಡ್ಡ ವ್ಯಕ್ತಿಗಳು ನನ್ನ ಬೆನ್ನ ಹಿಂದೆ ಇದ್ದಾರೆ, ಅವರ ಬೆಂಬಲ ನನಗೆ ಇದೆ, ಹೀಗಾಗಿ ನೀವು ಸುಮ್ಮನೆ ಇದ್ದರೆ ಒಳ್ಳೆಯದು ಇಲ್ಲಾ ಅಂದರೆ ನಿಮ್ಮನ್ನೆಲ್ಲ ಒದ್ದು ಒಳಗಡೆ ಹಾಕಿಸ್ತೀನಿ ಎಂದು ಬೆದರಿಕೆಯನ್ನು ನಮಗೆ ಹಾಕಿದ ಎಂದು ಹೇಳಿದ್ದಾರೆ.
ಮುಕಳೆಪ್ಪ ಅಂದು ನಮಗೆ ಬೆದರಿಕೆ ಹಾಕಿದ ಹಿನ್ನೆಲೆ ನಮಗೆ ದಿಕ್ಕು ತೋಚದಂತಾಗಿ ನಾವು ಸುಮ್ಮನೆ ಕುಳಿತೆವು ಎಂದು ಹೇಳಿರುವ ಗಾಯತ್ರಿ ಅವರ ತಾಯಿ ನಾವು ತುಂಬಾನೇ ಹೆದರಿಕೊಂಡಿದ್ವಿ ಈ ಕಾರಣಕ್ಕೆ ಇಷ್ಟು ದಿನವಾದರೂ ನಾವು ಎಲ್ಲಿಯೂ ಈ ವಿಚಾರದ ಕುರಿತು ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿರುವ ಹೆಣ್ಣಿನ ತಂದೆ ಮೂರು ವರ್ಷದಿಂದ ಮುಕಳೆಪ್ಪ ಜೊತೆ ನಮ್ಮ ಮಗಳು ರೀಲ್ಸ್ ಮಾಡ್ತಿದ್ಳು, ನಮ್ಮ ಮಗಳು ಬೆಳೆಯಲಿ ಎಂದು ನಾವು ಕೂಡ ಕೈ ಬಿಟ್ಟಿದೀವಿ ಎಂದು ಹೇಳಿದ್ದಾರೆ. ಅವನು ಕೂಡ ನಮ್ಮ ಮಗಾನೇ ಎಂದು ನಾನು ಅಂದುಕೊಂಡಿದ್ದೇ ಅವನು ಕೂಡ ನನ್ನ ಮಗಳನ್ನು ಅಕ್ಕ ತಂಗಿ ಎಂದೆಲ್ಲಾ ಕರೆಯುತ್ತಿದ್ದ ಎಂದು ಹೇಳಿರುವ ಗಾಯತ್ರಿ ಅವರ ತಂದೆ ನನ್ನ ಮಗಳು ನನಗಿಂತ ಜಾಣೆಯಾಗಿದ್ದಾಳೆ ಎಂದುಕೊಂಡು ಸುಮ್ಮನಾಗಿದ್ದೇ ಆದರೆ ಅವನು ಈ ರೀತಿ ನಮಗೆ ಮೋಸ ಮಾಡಿದ್ದಾನೆ ಎಂದು ತಮ್ಮ ಮನದ ನೋವನ್ನು ಮಾಧ್ಯಮದವರ ಎದುರು ಹಂಚಿಕೊಂಡಿದ್ದಾರೆ.


Click it and Unblock the Notifications











