ತಾತ ಡಾ.ರಾಜ್ ಅಂತೆ 'ದಾರಿ ತಪ್ಪಿದ ಮಗ'ನಾದ ಮೊಮ್ಮಗ ಧೀರೇನ್.!
ಡಾ.ರಾಜ್ ಕುಮಾರ್ ಅವರ ಮೊಮ್ಮಗ... ನಟ ರಾಮ್ ಕುಮಾರ್ ಹಾಗೂ ಪೂರ್ಣಿಮ ಅವರ ಪುತ್ರ ಧೀರೇನ್ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಲೇ ಇದೆ.
ಧೀರೇನ್ ಚೊಚ್ಚಲ ಚಿತ್ರದ ಬಗ್ಗೆ ಆಗಾಗ ಸದ್ದು-ಸುದ್ದಿ ಆಗುತ್ತಲೇ ಇದೆ. ಬಣ್ಣದ ಪ್ರಪಂಚಕ್ಕೆ ಪದಾರ್ಪಣೆ ಮಾಡಲು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ ಧೀರೇನ್.
ಚಿಕ್ಕಂದಿನಿಂದಲೂ ಸಿನಿಮಾ ಆಸಕ್ತಿ ಹೊಂದಿರುವ ಧೀರೇನ್ ನ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಲು ನಿರ್ಮಾಪಕ ಜಯಣ್ಣ ಸಿದ್ಧರಾಗಿದ್ದಾರೆ. ಧೀರೇನ್ ಗಾಗಿ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಇದೀಗ ಧೀರೇನ್ ಅಭಿನಯದ ಚೊಚ್ಚಲ ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ಶೀರ್ಷಿಕೆ ಏನು ಗೊತ್ತಾ.? 'ದಾರಿ ತಪ್ಪಿದ ಮಗ'.! ಮುಂದೆ ಓದಿರಿ...

'ದಾರಿ ತಪ್ಪಿದ ಮಗ'
'ದಾರಿ ತಪ್ಪಿದ ಮಗ'... 1975 ರಲ್ಲಿ ಬಿಡುಗಡೆಗೊಂಡ ಸಿನಿಮಾ. ಪಿಕೆಟಿ ಶಿವರಾಮ್ ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಡಬಲ್ ಆಕ್ಟಿಂಗ್ ಮಾಡಿದ್ದರು. ಅಂದಿಗೆ ಈ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಇದೀಗ ಇದೇ ಹೆಸರಿನ ಮತ್ತೊಂದು ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬರಲು ಸಜ್ಜಾಗಿದೆ.

ತಾತನಂತೆ 'ದಾರಿ ತಪ್ಪಿದ ಮಗ'ನಾದ ಮೊಮ್ಮಗ
ಡಾ.ರಾಜ್ ಕುಮಾರ್ ಮೊಮ್ಮಗ ಧೀರೇನ್ ಅಭಿನಯದ ಚೊಚ್ಚಲ ಚಿತ್ರಕ್ಕೆ 'ದಾರಿ ತಪ್ಪಿದ ಮಗ' ಎಂಬ ಶೀರ್ಷಿಕೆ ಫಿಕ್ಸ್ ಆಗಿದೆ. ಈ ಚಿತ್ರದ ಸ್ಕ್ರಿಪ್ಟಿಂಗ್ ವರ್ಕ್ ಗೆ ಸದ್ಯ ಚಾಲನೆ ಕೊಡಲಾಗಿದೆ. ತಾತನಂತೆ ಮೊಮ್ಮಗ ಕೂಡ ನೆಗೆಟಿವ್ ಹಾಗೂ ಪಾಸಿಟಿವ್ ಪಾತ್ರದಲ್ಲಿ ಮಿನುಗಲಿದ್ದಾರೆ.

ಅನಿಲ್ ಕುಮಾರ್ ನಿರ್ದೇಶನದ ಚಿತ್ರ
ಧೀರೇನ್ ಅಭಿನಯದ 'ದಾರಿ ತಪ್ಪಿದ ಮಗ' ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. 'Rambo-2' ಚಿತ್ರದಿಂದ ಗುರುತಿಸಿಕೊಂಡಿರುವ ಡೈರೆಕ್ಟರ್ ಅನಿಲ್ ಕುಮಾರ್ ಸದ್ಯ ರಾಕಿಂಗ್ ಸ್ಟಾರ್ ಯಶ್ ಗಾಗಿ 'ಮೈ ನೇಮ್ ಈಸ್ ಕಿರಾತಕ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಅದು ಮುಗಿದ ಬಳಿಕ 'ದಾರಿ ತಪ್ಪಿದ ಮಗ' ಸೆಟ್ಟೇರಲಿದೆ.

ಬಂಡವಾಳ ಹಾಕಲು ಜಯಣ್ಣ ರೆಡಿ
ಡಾ.ರಾಜ್ ಕುಟುಂಬದ ಕುಡಿಯನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ನಿರ್ಮಾಪಕ ಜಯಣ್ಣ ರೆಡಿಯಿದ್ದಾರೆ. 'ದಾರಿ ತಪ್ಪಿದ ಮಗ' ಚಿತ್ರಕ್ಕೆ ಬಂಡವಾಳ ಹಾಕಲು ಜಯಣ್ಣ ಮುಂದೆ ಬಂದಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಮುಂದಿನ ವರ್ಷಾರಂಭದ ಹೊತ್ತಿಗೆ ಚಿತ್ರ ಸೆಟ್ಟೇರಲಿದೆ.


Click it and Unblock the Notifications











