ರಾಜಣ್ಣನನ್ನು ಬಿಟ್ಟು ಶಿವಣ್ಣನ ಮೊರೆ ಹೋದ 'ದಾರಿ ತಪ್ಪಿದ ಮಗ'

'ದಾರಿ ತಪ್ಪಿದ ಮಗ' ಡಾ ರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ. ಇದೇ ಟೈಟಲ್ ಅನ್ನು ಅವರ ಮೊಮ್ಮಗ ಧೀರನ್ ರಾಮ್‌ಕುಮಾರ್‌ ಮೊದಲ ಸಿನಿಮಾಗೆ ಬಳಸಿಕೊಳ್ಳಲಾಗಿತ್ತು. ಆದರೆ, ನಂತರ ಈ ಸಿನಿಮಾದ ಟೈಟಲ್ ಬದಲು ಮಾಡಲು ನಿರ್ಧಾರ ಮಾಡಲಾಗಿತ್ತು.

ಇದೀಗ ಈ ಸಿನಿಮಾಗೆ ಹೊಸ ಟೈಟಲ್ ಇಡಲಾಗಿದೆ. ಚಿತ್ರತಂಡ ರಾಜ್ ಕುಮಾರ್ ಬದಲು ಶಿವರಾಜ್ ಕುಮಾರ್ ಮೊರೆ ಹೋಗಿದೆ. ಸಿನಿಮಾಗೆ 'ಶಿವ 143' ಎಂಬ ಶೀರ್ಷಿಕೆ ಇಡಲಾಗಿದೆ. ಶಿವರಾಜ್ ಕುಮಾರ್ ಹೆಸರನ್ನು ಸಿನಿಮಾಗೆ ಫಿಕ್ಸ್ ಮಾಡಲಾಗಿದೆ. 'ಶಿವ' ಎಂಬ ಹೆಸರಿನಲ್ಲಿ ಶಿವಣ್ಣ ಈ ಹಿಂದೆ ಸಿನಿಮಾ ಮಾಡಿದ್ದರು.

Dheeren Ramkumar Movie Gets New Title As Shiva 143

ತೆಲುಗಿನ 'ಆರ್ ಎಕ್ಸ್ 100' ಸಿನಿಮಾದ ರಿಮೇಕ್ ಇದಾಗಿದೆ. 'ಶಿವ 143' ಚಿತ್ರದ ಹೊಸ ಹೆಸರಾಗಿದೆ. 143 ಎಂದರೆ ಎಲ್ಲರಿಗೂ ತಿಳಿದಿರುವ ಹಾಗೆ ಐ ಲವ್ ಯೂ ಎಂಬುದಾಗಿದೆ. ಹಳ್ಳಿಯ ಹಿನ್ನಲೆಯಲ್ಲಿ ನಡೆಯುವ ರೊಮ್ಯಾಂಟಿಕ್ ಲವ್ ಸ್ಟೋರಿ ಇದಾಗಿದೆ. ಸಿನಿಮಾದಲ್ಲಿ ಸಾಕಷ್ಟು ಹಾಟ್ ದೃಶ್ಯಗಳು ಇವೆ.

Dheeren Ramkumar Movie Gets New Title As Shiva 143

ಮಾನ್ವಿತಾ ಕಾಮತ್ ಸಿನಿಮಾದ ನಾಯಕಿಯಾಗಿದ್ದಾರೆ. 'ಶಿವ 143' ಮೂಲಕ ರಾಮ್ ಕುಮಾರ್ ಪುತ್ರ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. 'ರಾಂಬೋ 2' ನಿರ್ದೇಶಕ ಅನಿಲ್ ಕುಮಾರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಯಣ್ಣ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Actor Dheeren Ramkumar and Manvitha Kamath movie gets new title as 'Shiva 143'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X