For Quick Alerts
  ALLOW NOTIFICATIONS  
  For Daily Alerts

  ವಿಶ್ವವಿಖ್ಯಾತ ಅರ್ನಾಲ್ಡ್ ಜತೆ ವೇದಿಕೆ ಹಂಚಿಕೊಂಡಿದ್ರು ಅಪ್ಪು; ಹೆಮ್ಮೆ ಚಿತ್ರಗಳನ್ನು ಹಂಚಿಕೊಂಡ ಧೀರೇನ್

  |

  ಪುನೀತ್ ರಾಜ್ ಕುಮಾರ್ ಕರ್ನಾಟಕ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿಯೂ ಜನಪ್ರಿಯತೆಯನ್ನು ಹೊಂದಿದ್ದರು. ಅಲ್ಲಿನ ಹಲವು ಕಾರ್ಯಕ್ರಮಗಳಿಗೆ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ತೆರಳಿದ ಹಲವಾರು ಉದಾಹರಣೆಗಳಿವೆ. ಅದೇ ರೀತಿ ಶಂಕರ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್ ನಟನೆಯ 'ಐ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೂ ಸಹ ಕನ್ನಡ ಚಲನಚಿತ್ರ ರಂಗದಿಂದ ತೆರಳಿದ್ದ ಏಕೈಕ ನಟನೆಂದರೆ ಅದು ಪುನೀತ್ ರಾಜ್ ಕುಮಾರ್.

  ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಪುನೀತ್ ರಾಜ್ ಕುಮಾರ್ ಅವರನ್ನು ಈ ಕಾರ್ಯಕ್ರಮಕ್ಕೆ ಅತಿಥಿಗಳನ್ನಾಗಿ ಕರೆಸಲಾಗಿತ್ತು. ಹಾಗೂ ಇದೇ ಕಾರ್ಯಕ್ರಮಕ್ಕೆ ನಟ, ರಾಜಕಾರಣಿ ಹಾಗೂ ಬಾಡಿ ಬಿಲ್ಡರ್ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಕೂಡ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ರಜನಿಕಾಂತ್ ಹಾಗೂ ಪುನೀತ್ ರಾಜ್ ಕುಮಾರ್ ಅವರನ್ನು ವಿಶೇಷವಾಗಿ ಭೇಟಿ ಮಾಡಿದ್ದ ಅರ್ನಾಲ್ಡ್ ಅಪ್ಪು ಅವರ ಕೈ ಕುಲುಕಿ ಮಾತನಾಡಿಸಿದ್ದರು ಮತ್ತು ಇಬ್ಬರು ಸಹ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರು. ಇದು ಅಪ್ಪು ಅವರಿಗೆ ಇದ್ದ ನೇಮ್ & ಫೇಮ್‍ಗೆ ಹಿಡಿದ ಕೈಗನ್ನಡಿಯಾಗಿತ್ತು.

  ಹೀಗೆ ಅರ್ನಾಲ್ಡ್ ಮತ್ತು ಪುನೀತ್ ರಾಜ್ ಕುಮಾರ್ ಭೇಟಿಯಾಗಿದ್ದ ಸಂದರ್ಭದ ಚಿತ್ರಗಳನ್ನು ಇದೀಗ ಧೀರೇನ್ ರಾಮ್ ಕುಮಾರ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇತ್ತೀಚಿಗಷ್ಟೆ ಪೊನ್ನಿಯನ್ ಸೆಲ್ವನ್ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾಗ ಚಿತ್ರದ ನಟ ಚಿಯಾನ್ ವಿಕ್ರಂ ಕೂಡ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದರು. ತಮ್ಮ ಐ ಚಿತ್ರದ ಆಡಿಯೋ ಬಿಡುಗಡೆಗೆ ಪುನೀತ್ ರಾಜ್ ಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದ ವಿಕ್ರಂ ಎಂಥ ಅದ್ಬುತ ವ್ಯಕ್ತಿ ಎಂದು ಅಪ್ಪು ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದರು.

  English summary
  Dheeren Ramkumar shared Puneeth Rajkumar and Arnold Schwarzenegger pics of I movie audio launch. Read on
  Friday, September 30, 2022, 17:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X