For Quick Alerts
  ALLOW NOTIFICATIONS  
  For Daily Alerts

  ಗಣೇಶ ಹಬ್ಬಕ್ಕೆ 'ಶಿವ'ನ ಲವ್ ಸ್ಟೋರಿ: ಅಂಜನಾದ್ರಿ ಬೆಟ್ಟ ಏರಿದ ಧೀರೇನ್!

  |

  ಈ ಬಾರಿ ಗಣೇಶ ಹಬ್ಬದ ಸಂಭ್ರಮಕ್ಕೆ ನಾಲ್ಕು ದಿನ ಮೊದಲೇ ಥಿಯೇಟರ್‌ಗಳಲ್ಲಿ 'ಶಿವ 143' ಸಿನಿಮಾ ಬಿಡುಗಡೆಯಾಗ್ತಿದೆ. ಡಾ. ರಾಜ್‌ಕುಮಾರ್ ಮೊಮ್ಮಗ ಧೀರೇನ್ ರಾಮ್‌ಕುಮಾರ್ ಹೀರೊ ಆಗಿ ನಟಿಸಿರೋ ಚೊಚ್ಚಲ ಸಿನಿಮಾ ಇದು. ಚಿತ್ರದಲ್ಲಿ ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದು, ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ.

  ಡಾ. ರಾಜ್‌ ಪುತ್ರಿ ಪೂರ್ಣಿಮಾ ಹಾಗೂ ನಟ ರಾಮ್‌ಕುಮಾರ್ ಪುತ್ರ ಧೀರೇನ್ ರಾಮ್‌ಕುಮಾರ್. ಬಹಳ ಹಿಂದೆ ಶುರುವಾದ 'ಶಿವ 143' ಸಿನಿಮಾ ಕಾರಣಾಂತರಗಳಿಂದ ತೆರೆಗೆ ಬರುವುದು ತಡವಾಗಿತ್ತು. ಅಂತೂ ಇಂತೂ ಸಿನಿಮಾ ಬಿಡುಗಡೆಗೆ ಈಗ ಹೊಸ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆ ಸುತ್ತಿ ಧೀರೇನ್ ರಾಮ್‌ಕುಮಾರ್ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಜಯಣ್ಣ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರಗಡ್ ಹುಡುಗನಾಗಿ ಧೀರೇನ್ ಮಿಂಚಿದ್ದು, ಇದೊಂದು ಪಕ್ಕಾ ರೊಮ್ಯಾಂಟಿಕ್ ಸಿನಿಮಾ ಅನ್ನಬಹುದು.

  ಕೇಕ್ ಕಟ್ ಮಾಡಿ ಕಿಕ್ ಕೊಟ್ಟ ದಾಸ: 'D56' ಸೆಟ್ಟಲ್ಲಿ ಹೊಸ ರೂಲ್ಸ್!ಕೇಕ್ ಕಟ್ ಮಾಡಿ ಕಿಕ್ ಕೊಟ್ಟ ದಾಸ: 'D56' ಸೆಟ್ಟಲ್ಲಿ ಹೊಸ ರೂಲ್ಸ್!

  ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಶಿವ 143' ಚಿತ್ರದ ಹೀರೊ ಇಂಟ್ರಡಕ್ಷನ್ ಟೀಸರ್ ರಿಲೀಸ್ ಮಾಡಿ ಮೆಚ್ಚುಗೆ ಸೂಚಿಸಿದ್ದರು. ಇದೀಗ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ. ಸಿನಿಮಾದಲ್ಲಿ ಶಿವಣ್ಣನ ಸೂಪರ್ ಹಿಟ್ 'ಓಂ' ಸಿನಿಮಾ ರೆಫರೆನ್ಸ್ ತಗೊಂಡಿರುವುದು ಗೊತ್ತಾಗುತ್ತಿದೆ. ಸಿನಿಮಾ ಡೈಲಾಗ್‌ಗಳು ಸಖತ್ ಕಿಕ್ ಕೊಡ್ತಿದೆ. ಚರಣ್ ರಾಜ್, ಸಾಧುಕೋಕಿಲ, ಚಿಕ್ಕಣ್ಣ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.

   ಗಣೇಶ ಹಬ್ಬಕ್ಕೆ 'ಶಿವ 143' ತೆರೆಗೆ

  ಗಣೇಶ ಹಬ್ಬಕ್ಕೆ 'ಶಿವ 143' ತೆರೆಗೆ

  ಆಗಸ್ಟ್‌ 31ರಂದು ಗಣೇಶ ಹಬ್ಬದ ಸಂಭ್ರಮ. ಆದರೆ ಅದಕ್ಕೂ ಮೊದಲೇ ಆಗಸ್ಟ್ 26ರಂದು 'ಶಿವ 143' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಅಣ್ಣಾವ್ರ ಮೊಮ್ಮಗನ ಸಿನಿಮಾ ಅನ್ನುವ ಕಾರಣಕ್ಕೆ ಭಾರೀ ನಿರೀಕ್ಷೆ ಮೂಡಿಸಿದೆ. ಪುನೀತ್ ರಾಜ್‌ಕುಮಾರ್ ಕೂಡ ಚಿತ್ರದ ಆಕ್ಷನ್ ಸೀಕ್ವೆನ್ಸ್‌ ವಿಡಿಯೋವನ್ನು ನೋಡಿದ್ದರಂತೆ. "ಧೀರೇನ್ ಕಣ್ಣು ನೋಡಿ ಎಷ್ಟು ಚೆನ್ನಾಗಿದೆ. ನಮ್ಮ ಕುಟುಂಬದಿಂದ ಒಳ್ಳೆ ಹೀರೊ ಬರುತ್ತಿದ್ದಾನೆ" ಎಂದು ಸ್ನೇಹಿತರ ಬಳಿ ಅಪ್ಪು ಹೇಳಿಕೊಂಡಿದ್ದರಂತೆ.

  ಮನಸ್ಸಿಗೆ ನೋವುಂಟಾಗಿದೆ, ದೂರು ನೀಡುತ್ತೇನೆ: ದುನಿಯಾ ಸೂರಿಮನಸ್ಸಿಗೆ ನೋವುಂಟಾಗಿದೆ, ದೂರು ನೀಡುತ್ತೇನೆ: ದುನಿಯಾ ಸೂರಿ

   ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರ

  ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರ

  ಆಗಸ್ಟ್ 16ರಿಂದ ಉತ್ತರ ಕರ್ನಾಟಕದಲ್ಲಿ 'ಶಿವ 143' ಸಿನಿಮಾ ಪ್ರಚಾರ ನಡೀತಿದೆ. ಚಿತ್ರತಂಡ ಹೋದ ಕಡೆಯೆಲ್ಲಾ ಪ್ರೇಕ್ಷಕರಿಂದ ಭರ್ಜರಿ ಸ್ವಾಗತ ಸಿಗುತ್ತಿದೆ. ಗುಲ್ಬರ್ಗಾ, ಹೊಸಪೇಟೆ, ಗಂಗಾವತಿಯಲ್ಲಿ ಈಗಾಗಲೇ ಪ್ರಚಾರ ಮುಗಿಸಿರುವ ಧೀರೇನ್ ಹುಬ್ಬಳ್ಳಿ ಕಡೆ ಹೊರಟಿದ್ದಾರೆ. ಧೀರೇನ್‌ ರಾಮ್‌ಕುಮಾರ್‌ಗೆ ತಾಯಿ ಪೂರ್ಣಿಮಾ ಹಾಗೂ ಸಹೋದರಿ ಧನ್ಯಾ ರಾಮ್‌ಕುಮಾರ್ ಸಾಥ್ ನೀಡಿದ್ದಾರೆ. ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ತೆರೆದ ವಾಹನದಲ್ಲಿ ಪ್ರಚಾರ ನಡೀತಿದೆ.

   ಅಪ್ಪು ಹಾದಿಯಲ್ಲಿ ಧೀರೇನ್ ಅಂಜನಾದ್ರಿ ದರ್ಶನ

  ಅಪ್ಪು ಹಾದಿಯಲ್ಲಿ ಧೀರೇನ್ ಅಂಜನಾದ್ರಿ ದರ್ಶನ

  ಪುನೀತ್ ರಾಜ್‌ಕುಮಾರ್ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಬೆಟ್ಟ ಹತ್ತಿ ದೇವರ ದರ್ಶನ ಪಡೆಯುತ್ತಿದ್ದರು. 'ಶಿವ 143' ಸಿನಿಮಾ ಪ್ರಚಾರಕ್ಕಾಗಿ ಗಂಗಾವತಿಯಲ್ಲಿರುವ ಧೀರೇನ್ ಕೂಡ 575 ಮೆಟ್ಟಿಲುಗಳನ್ನು ಏರಿ ಹನುಮನ ದರ್ಶನ ಪಡೆದಿದ್ದಾರೆ. ತಾಯಿ ಹಾಗೂ ಸಹೋದರಿ ಜೊತೆ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಫೋಟೊಗಳಿರೋ ಶರ್ಟ್‌ನಲ್ಲಿ ಧೀರೇನ್ ಕಾಣಿಸಿಕೊಂಡಿರುವುದು ವಿಶೇಷ.

   'ಆರ್‌ಎಕ್ಸ್‌ 100' ರಿಮೇಕ್ 'ಶಿವ 143'

  'ಆರ್‌ಎಕ್ಸ್‌ 100' ರಿಮೇಕ್ 'ಶಿವ 143'

  ಇನ್ನು 'ಶಿವ 143' ಸಿನಿಮಾ ತೆಲುಗಿನ 'ಆರ್‌ಎಕ್ಸ್‌ 100' ರಿಮೇಕ್ ಎಂದು ಹೇಳಲಾಗುತ್ತಿದೆ. 4 ವರ್ಷಗಳ ಹಿಂದೆ ತೆಲುಗಿನಲ್ಲಿ ಈ ರಗಡ್ ಲವ್‌ಸ್ಟೋರಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ಕಥೆಯನ್ನು ಆಧರಿಸಿ ಅನಿಲ್ ಕುಮಾರ್ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ನೈಜ ಘಟನೆ ಆಧರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಆರಂಭದಲ್ಲಿ ಚಿತ್ರದಲ್ಲಿ 'ದಾರಿ ತಪ್ಪಿದ ಮಗ' ಅನ್ನುವ ಟೈಟಲ್ ಫೈನಲ್ ಇಟ್ಟಿತ್ತು ಚಿತ್ರತಂಡ. ನಂತರ 'ಶಿವ 143' ಎಂದು ಬದಲಿಸಲಾಗಿತ್ತು.

  Recommended Video

  Kranti | KGF2 | Vikrantrona | Top 5 ಪಟ್ಟಿಯಲ್ಲಿ ಸೇರುತ್ತಾ ಕ್ರಾಂತಿ | Filmibeat Kannada
  English summary
  Dheeren Ramkumar Starrer Shiva 143 Hit The Big Screens On The Occasion Of Ganesha Chaturthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X