For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಚೊಚ್ಚಲ ಚಿತ್ರ ಅದ್ದೂರಿ ಸೂಪರ್ ಹಿಟ್

  By Rajendra
  |

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸೋದರಳಿಯ ಧ್ರುವ ಸರ್ಜಾ ಅಭಿನಯದ ಚೊಚ್ಚಲ ಚಿತ್ರ 'ಅದ್ದೂರಿ' ಸೂಪರ್ ಹಿಟ್ ಆಗಿದೆ! ಹಾಗಂತ ಸಾರಿ ಸಾರಿ ಹೇಳುತ್ತಿವೆ ಚಿತ್ರದ ಪೋಸ್ಟರ್‌ಗಳು. ಬೆಂಗಳೂರಿನಲ್ಲಿ ರಾರಾಜಿಸುತ್ತಿರುವ ಪೋಸ್ಟರ್‌ಗಳೇನೋ ಚಿತ್ರ ಸೂಪರ್ ಹಿಟ್ ಎನ್ನುತ್ತಿವೆ. ಅದರೆ 'ಅದ್ದೂರಿ' ನಿಜಕ್ಕೂ ಹಿಟ್ ಚಿತ್ರವೇ? ಎಂಬ ಪ್ರಶ್ನೆ ಉದ್ಭವಿಸಿದೆ.

  ಈ ಪ್ರಶ್ನೆಗೆ ನಿರ್ಮಾಪಕರಾದ ಕೀರ್ತಿ ಸ್ವಾಮಿ ಹಾಗೂ ಶಂಕರ್ ರೆಡ್ಡಿ ಅವರ ಬಳಿಯಾಗಲಿ ನಿರ್ದೇಶಕ ಎಪಿ ಅರ್ಜುನ್ ಅವರ ಬಳಿಯಾಗಲಿ ಸದ್ಯಕ್ಕೆ ಉತ್ತರವಿಲ್ಲ. ಚಿತ್ರ ಬಾಕ್ಸಾಫೀಸಲ್ಲಿ ಎಷ್ಟು ದುಡ್ಡು ಬಾಚಿದೆ. ನಿರ್ಮಾಪಕರ ಕಿಸೆ ಎಷ್ಟು ಭರ್ತಿ ಮಾಡಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೂ ಚಿತ್ರ ಹಿಟ್ ಎಂದು ಬಿಡುಗಡೆಯಾದ ಒಂದೇ ವಾರಕ್ಕೆ ಘೋಷಣೆಯಾಗಿರುವುದು ವಿಶೇಷ.

  ಚಿತ್ರ ವಿತರಕರಾದ ಭಾಷಾ ಅವರ ಪ್ರಕಾರ ಚಿತ್ರ ಅದ್ದೂರಿಯಾಗಿಯೇ ಕಲೆಕ್ಷನ್ ಮಾಡಿದೆಯಂತೆ. ಮೈಸೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಕೇಂದ್ರಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನುತ್ತಾರೆ ಅವರು.

  ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಬಗ್ಗೆ ಚಿತ್ರತಂಡ ಗ್ರೀನ್ ಹೌಸ್ ರಾಜ್ ಮಿಲನದಲ್ಲಿ ಔತಣಕೂಟವನ್ನು ಏರ್ಪಡಿಸಿ ಸಂಭ್ರಮಿಸಿದೆ. ತಮ್ಮ ಚೊಚ್ಚಲ 'ಅಂಬಾರಿ' ಚಿತ್ರಕ್ಕಿಂತಲೂ 'ಅದ್ದೂರಿ'ಗೆ ಸಿಕ್ಕ ಓಪನಿಂಗ್ ಅದ್ಭುತ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಪಿ ಅರ್ಜುನ್.

  ಮೊದಲ ವಾರದಲ್ಲಿ ಪ್ರತಿದಿನ 464 ಪ್ರದರ್ಶನಗಳನ್ನು 'ಅದ್ದೂರಿ' ಕಂಡಿದ್ದು, ಎರಡನೇ ವಾರದಲ್ಲಿ 18 ಹೆಚ್ಚು ಚಿತ್ರಮಂದಿರಗಳು ಸೇರ್ಪಡೆಯಾಗಿವೆ. ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ 28 ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ. ಮೈಸೂರಿನಲ್ಲಿ 'ಅದ್ದೂರಿ' ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಅರ್ಜುನ್.

  ಚಿತ್ರಕ್ಕೆ ಈ ಪಾಟಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದು ಊಹಿಸಿರಲಿಲ್ಲ. ಅರ್ಜುನ್ ಮಾಮ ಜೊತೆ ಚಿತ್ರವನ್ನು ನೋಡಿ ಅವರು ಸಲಹೆಗಳನ್ನು ತೆಗೆದುಕೊಂಡಿದ್ದೇನೆ. ನಾನು ನನ್ನ ಮಾಮನಿಂದ ನಟನಾ ಕೌಶಲ್ಯಗಳನ್ನು ಕಲಿಯಬೇಕೆಂದಿದ್ದೇನೆ. ನನ್ನದೇ ಆದಂತಹ ಶೈಲಿಯನ್ನು ಅಳವಡಿಸಿಕೊಳ್ಳುತ್ತೆನೆ. ಆದರೆ ಅವರನ್ನು ಅನುಕರಿಸಲು ಹೋಗುತ್ತಿಲ್ಲ ಎಂದಿದ್ದಾರೆ ಧ್ರುವ್.

  ಕಾರಣಾಂತರಗಳಿಂದ ಚಿತ್ರ ತೆರೆಗೆ ಬರಲು ಸಾಕಷ್ಟು ಸಮಯ ಹಿಡಿಸಿತು. ತಡವಾಗಿ ಬಿಡುಗಡೆಯಾದರೂ ಚಿತ್ರಕ್ಕೆ ವಕ್ತವಾದ ಪ್ರತಿಕ್ರಿಯೆ ನಮ್ಮ ಎಲ್ಲ ನೋವನ್ನು ಮರೆಸಿದೆ ಎಂದಿದ್ದಾರೆ ಚಿತ್ರದ ನಾಯಕಿ ರಾಧಿಕಾ ಪಂಡಿತ್. (ಏಜೆನ್ಸೀಸ್)

  English summary
  Actro Dhruv Sarja and Radhika Pandit lead Kannada movie Addhuri declares as hit! the success meet was held on Thursday night at Green House Raj Milan. The film is becoming increasingly popular says director AP Arjun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X