ಧ್ರುವ ಸರ್ಜಾ - ಚೇತನ್ ನಡುವೆ ವಾರ್ : ಆಕ್ಷನ್ ಪ್ರಿನ್ಸ್ ಪ್ರಶ್ನೆಗಳ ಸುರಿಮಳೆ!
Recommended Video

ನಟಿ ಶೃತಿ ಹರಿಹರನ್ ಮಾಡಿರುವ ಆರೋಪದಿಂದ ಇಡೀ ಸರ್ಜಾ ಕುಟುಂಬ ಆಕ್ರೋಶಗೊಂಡಿದೆ. ಈಗಾಗಲೇ ಈ ಘಟನೆಯ ಬಗ್ಗೆ ಅರ್ಜುನ್ ಸರ್ಜಾ ಪತ್ನಿ, ಮಗಳು, ತಾಯಿ, ಮಾವ ಹೀಗೆ ಇಡೀ ಕುಟುಂಬ ಮಾತನಾಡಿದ್ದಾರೆ.
ಅಂದಹಾಗೆ, ಈ ಪ್ರಕರಣಕ್ಕೆ ಹೊಸ ಹೊಸ ತಿರುವುಗಳು ಸಿಗುತ್ತದೆ. ಇದು ಪ್ಲಾನ್ ಮಾಡಿ ಮಾಡಿರುವ ಕೆಲಸ ಎಂದು ಸರ್ಜಾ ಫ್ಯಾಮಿಲಿ ಆರೋಪ ಮಾಡಿದೆ. ನಟ ಚೇತನ್ 'ಪ್ರೇಮ ಬರಹ' ಚಿತ್ರದಲ್ಲಿ ನಟಿಸಲು ಸಾಧ್ಯವಾಗದೆ ಇದ್ದು, ಈ ಸಿಟ್ಟನ್ನು ಈ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ.
ಚೇತನ್ ಅವರ FIRE ಸಂಸ್ಥೆ ಮೂಲಕ ಶೃತಿ ಹರಿಹರನ್ ಹೋರಾಟಕ್ಕೆ ಮುಂದಾಗಿದ್ದಾರೆ. ಇದು ಸರ್ಜಾ ಕುಟುಂಬದ ಕೋಪಕ್ಕೆ ಕಾರಣವಾಗಿದೆ. ಹೀಗಿರುವಾಗ, ನಟ ಧ್ರುವ ಸರ್ಜಾ ಪ್ರಕರಣದ ಬಗ್ಗೆ ಚೇತನ್ ಅವರಿಗೆ ಕೆಲ ಪ್ರಶ್ನೆಗಳನ್ನು ಮಾಡಿದ್ದಾರೆ. ಮುಂದೆ ಓದಿ...

ಎಂಟು ತಿಂಗಳ ಹಿಂದೆಯೇ ಏಕೆ?
''ಚೇತನ್ ಒಂದು ವರ್ಷದ ಹಿಂದೆ FIRE ಸಂಸ್ಥೆ ಶುರು ಮಾಡಿದ್ದಾರೆ. 8 ತಿಂಗಳ ಹಿಂದೆ ಶೃತಿ ಹರಿಹರನ್ ಅದಕ್ಕೆ ಸದಸ್ಯೆಯಾಗಿದ್ದರೆ. ಅನ್ಯಾಯ ಆಗಿದ್ದವರು ಆ ಸಂಸ್ಥೆಯ ಸದಸ್ಯರಾಗಬೇಕು. ಹಾಗಿದ್ದ ಮೇಲೆ ಎಂಟು ತಿಂಗಳಿನಿಂದ ಏನು ಮಾಡುತ್ತಿದ್ರೀ.'' - ಧ್ರುವ ಸರ್ಜಾ, ನಟ

ಇಲ್ಲದಿರುವ ವಿಷಯಗಳನ್ನು ಸೃಷ್ಟಿ ಮಾಡುತ್ತಿದ್ದೀರಿ
''ನೀನು ಫಾರಿನ್ ನಿಂದ ಇಳಿದಿದ್ದೇನೆ ಎಂದುಕೊಳ್ಳಬೇಡ. ನಿನ್ನ ಸಂಸ್ಥೆ ಕೂಡ ಕಾನೂನಿನ ಆಡಿಯಲ್ಲಿ ಬರುತ್ತದೆ. ಅದರಲ್ಲಿ ಹೆಣ್ಣು ಮಕ್ಕಳಿದ್ದಾರೆ ಎನ್ನುವ ಕಾರಣಕ್ಕೆ ಗೌರವ ನೀಡುತ್ತೇನೆ. ಇಲ್ಲದೆ ಇರುವ ವಿಷಯಗಳನ್ನು ಬೇಕು ಅಂತ ಸೃಷ್ಟಿ ಮಾಡುತ್ತಿದ್ದೀರಿ ಇದು ಇಡೀ ಕರ್ನಾಟಕಕ್ಕೆ ಗೊತ್ತಿದೆ.'' - ಧ್ರುವ ಸರ್ಜಾ, ನಟ

ನಿಮಗೆ ನಾಚಿಕೆ ಆಗಬೇಕು
''ನಮ್ಮ ಅಜ್ಜಿ ಬಂದು ಟಿವಿಗಳಲ್ಲಿ ಮಾತನಾಡುತ್ತಿದ್ದಾರೆ. ಇದು ನಿಮಗೆ ನಾಚಿಕೆ ಆಗಬೇಕು. ಒಂದು ಹುಡುಗಿಯನ್ನು ಇಟ್ಟುಕೊಂಡು ಯಾಕೆ ಈ ರೀತಿ ಮಾಡುತ್ತಿದ್ದೀಯಾ. ನೀನು ಅಮೇರಿಕಾ ದಿಂದ ಬಂದು ಏನೋ ಸಾಧಿಸಿಬಿಡುತ್ತೇನೆ ಎಂದುಕೊಂಡಿದ್ದರೆ ಅದು ನಿನ್ನ ಭ್ರಮೆ ಮಾತ್ರ. ಅಮೇರಿಕಾ ದಿಂದ ಮೀ ಟೂ ತಂದಿದ್ದೀಯಾ.'' - ಧ್ರುವ ಸರ್ಜಾ, ನಟ

ನಾಯಿ, ನರಿ, ಕ್ರಿಮಿ, ಕೀಟ
''ಸಾರಾ ಗೋವಿಂದು ವಿರುದ್ಧ ನೀನೇನು ಮಾತಾಡುವುದು. ನಮ್ಮ ಅಂಕಲ್ ಮೇಲೆ ಯಾವುದೋ ನಾಯಿ, ನರಿ, ಕ್ರಿಮಿ, ಕೀಟ ಏನೇ ಹೇಳಿದರೂ ನಂಬುವುದಿಲ್ಲ. ನಾವೇನು ಅಂತ ನಮಗೆ ಗೊತ್ತಿದೆ. ನಿಮ್ಮ ಹಿಂದೆ ಯಾರಿದ್ದಾರೆ, ಆ ಎಲ್ಲ ಸಾಕ್ಷಿಗಳು ನಮ್ಮ ಬಳಿ ಇವೆ.'' - ಧ್ರುವ ಸರ್ಜಾ, ನಟ

ಟಿವಿಯಲ್ಲಿ ಕಾಣಿಸಿಕೊಳ್ಳುವ ಶೋಕಿ ಇಲ್ಲ
''ನಮಗೆ ಟಿವಿಯಲ್ಲಿ ಕಾಣಿಸಿಕೊಳ್ಳುವ ಶೋಕಿ ಇಲ್ಲ. ಆದರೆ, ನೀನು ಪ್ರಚಾರ ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದೀಯಾ. ನೀವು ಮಹಿಳೆಯ ಪರ ಎಂದು ನಿಮಗೆ ನೀವೆ ಬಿರುದು ತೆಗೆದುಕೊಳ್ಳಬೇಡಿ. ನಾಲ್ಕು ಜನ ಹುಡುಗಿಯರನ್ನು ಇಟ್ಟುಕೊಂಡು ಪ್ಲಾನ್ ಮಾಡಿ ಈ ಸಂಸ್ಥೆ ಕಟ್ಟಿದ್ದೀರಾ ಚೇತನ್ ?.'' - ಧ್ರುವ ಸರ್ಜಾ, ನಟ

ನಿನ್ನ ಬಗ್ಗೆ ಹೀಗೆ ಹೇಳಿದರೆ ನಂಬುತ್ತೀರಾ?
''ಯಾರೋ ಒಬ್ಬಳು ಮಹಿಳೆ ಫೋನ್ ಮಾಡಿ 'ನನಗೆ ಚೇತನ್ ಅವರಿಂದ ಹೀಗೆ ಆಗಿದೆ' ಎಂದರೆ ಅದನ್ನು ನಂಬುತ್ತೀರಾ. ನಿಮ್ಮ ಬಗ್ಗೆ ಬಂದರೆ ಮಾತ್ರ ಕಾನೂನು ರೀತಿ ಅದನ್ನು ನೋಡಬೇಕು ಎನ್ನುವವರು ಈಗಲೂ ಅದನ್ನೇ ಮಾಡಿ.'' - ಧ್ರುವ ಸರ್ಜಾ, ನಟ


Click it and Unblock the Notifications











