ಏನೇ ಹೇಳಿ.....ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ತುಂಬಾ ಅದೃಷ್ಟ 'ರಿ'!

ನಿರ್ದೇಶಕ ನಂದ ಕಿಶೋರ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎರಡು ವರ್ಷದಿಂದ ಕುತುಹೂಲ ಮೂಡಿಸಿರುವ ಈ ಚಿತ್ರ ರಿಲೀಸ್‌ಗೂ ಮುಂಚೆ ಸಖತ್ ಸದ್ದು ಮಾಡಿದೆ. ವಿಶೇಷ ಅಂದ್ರೆ ಪೊಗರು ಬಿಡುಗಡೆಗೆ ಮುಂಚೆಯೇ ಧ್ರುವ ಸರ್ಜಾ ಅವರ ಐದನೇ ಚಿತ್ರ ಸೆಟ್ಟೇರಿದೆ.

Recommended Video

ಹೊಸ ಚಿತ್ರ ಘೋಷಿಸಿ ಮಾಧ್ಯಮಗಳಿಗೆ ಖಡಕ್ ಸಂದೇಶ ಕೊಟ್ಟ ಧ್ರುವ ಸರ್ಜಾ | Dhruva Sarja | Dubari | Nanda Kishore

'ಪೊಗರು' ಖ್ಯಾತಿಯ ನಂದ ಕಿಶೋರ್ ಅವರೇ ಈ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದು, 'ದುಬಾರಿ' ಎಂದು ಹೆಸರಿಡಲಾಗಿದೆ. ಇಂದು ಸಂಪ್ರದಾಯವಾಗಿ ಚಿತ್ರದ ಮುಹೂರ್ತ ನಡೆದಿದ್ದು, ಟೈಟಲ್ ಅನಾವರಣ ಆಗಿದೆ. ಧ್ರುವ ಸರ್ಜಾ ಅಭಿನಯದ ಎಲ್ಲ ಚಿತ್ರದ ಟೈಟಲ್‌ನಲ್ಲಿ ಒಂದು ಸಾಮ್ಯತೆ ಕಾಣುತ್ತಿದೆ. ಏನದು?

ಮೊದಲ ಚಿತ್ರದ ಅದ್ಧೂ'ರಿ'

ಮೊದಲ ಚಿತ್ರದ ಅದ್ಧೂ'ರಿ'

ಧ್ರುವ ಸರ್ಜಾ ನಟಿಸಿದ ಮೊದಲ ಚಿತ್ರ ಅದ್ಧೂರಿ. ಎಪಿ ಅರ್ಜುನ್ ನಿರ್ದೇಶಿಸಿದ್ದ ಈ ಚಿತ್ರ ದೊಡ್ಡ ಹಿಟ್ ಆಗಿತ್ತು. ಧ್ರುವ ಎಂಟ್ರಿಗೆ ತಕ್ಕ ಸಿನಿಮಾ ಇದಾಗಿತ್ತು. ಮೂರು ಅಕ್ಷರಗಳ ಟೈಟಲ್‌ ಇದಾಗಿತ್ತು. ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದರು.

ಚೇತನ್ ಜೊತೆ ಭರ್ಜ'ರಿ'

ಚೇತನ್ ಜೊತೆ ಭರ್ಜ'ರಿ'

ಅದ್ಧೂರಿ ಹಿಟ್ ಆದ ಬಳಿಕ ಚೇತನ್ ಕುಮಾರ್ ಜೊತೆ ಬಹದ್ದೂರ್ ಎಂಬ ಸಿನಿಮಾ ಮಾಡಿದರು. ಅದು ಸೂಪರ್ ಹಿಟ್ ಆಯ್ತು. ಅದಾದ ಬಳಿಕ ಭರ್ಜರಿ ಸಿನಿಮಾ ಮಾಡಿದರು. ಈ ಚಿತ್ರದ ಹೆಸರಿನಲ್ಲೂ ಮೂರೇ ಅಕ್ಷರ ಇತ್ತು. ಜೊತೆಗೆ ಕೊನೆಯ ಅಕ್ಷರ 'ರಿ' ಆಗಿತ್ತು. ಇದಕ್ಕೂ ಮುಂಚೆ ಅದ್ಧೂರಿ, ಆಮೇಲೆ ಭರ್ಜರಿ. ಈ ಎರಡು ಚಿತ್ರಗಳಲ್ಲೂ 'ರಿ' ಸಾಮಾನ್ಯವಾಗಿತ್ತು.

ಪೊಗರು ನಂತರ ದುಬಾ'ರಿ'

ಪೊಗರು ನಂತರ ದುಬಾ'ರಿ'

ನಂದ ಕಿಶೋರ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಪೊಗರು ಸಿನಿಮಾ ತಯಾರಾಗಿದೆ. ಈ ಸಿನಿಮಾ ಆದ್ಮೇಲೆ ಧ್ರುವ ಕೈಗೆತ್ತಿಕೊಂಡಿರುವ ಚಿತ್ರ 'ದುಬಾರಿ'. ವಿಶೇಷ ಅಂದ್ರೆ ಈ ಚಿತ್ರದ ಹೆಸರಿನಲ್ಲಿ ಮೂರೇ ಅಕ್ಷರ. ಕೊನೆಯ ಅಕ್ಷರ 'ರಿ'. ಧ್ರುವ ಅವರ ಐದು ಚಿತ್ರಗಳ ಪೈಕಿ ಮೂರು ಚಿತ್ರಗಳ ಶೀರ್ಷಿಕೆಯಲ್ಲಿ ಸಾಮ್ಯತೆ ಇದೆ. ಇದು ಒಂದು ರೀತಿ ಆಕ್ಷನ್ ಪ್ರಿನ್ಸ್‌ಗೆ ಅದೃಷ್ಟ ಇರಬಹುದು.

ಉದಯ್ ಮೆಹ್ತಾ ಜೊತೆ ದುಬಾರಿ

ಉದಯ್ ಮೆಹ್ತಾ ಜೊತೆ ದುಬಾರಿ

ಸುದೀಪ್ ಜೊತೆ 'ಬಚ್ಚನ್' ಸಿನಿಮಾ ಮಾಡಿದ್ದ ಉದಯ್ ಮೆಹ್ತಾ ಹೊತೆ ಧ್ರುವ ತಮ್ಮ ಐದನೇ ಚಿತ್ರ ಮಾಡುತ್ತಿದ್ದಾರೆ. 'ದುಬಾರಿ' ಚಿತ್ರಕ್ಕೂ ನಂದ ಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ಪೂಜೆ ಮುಗಿಸಿ ಟೈಟಲ್ ಲಾಂಚ್ ಮಾಡಿ ಸಿನಿಮಾ ಆರಂಭಿಸಿರುವ ದುಬಾರಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

More from Filmibeat

English summary
Action Prince Dhruva sarja and nanda kishore combination new movie titled Dubari. Uday k mehta will produced the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X