For Quick Alerts
  ALLOW NOTIFICATIONS  
  For Daily Alerts

  'ಮನೆಗೊಬ್ಬ ಮಗ ಇದ್ದಾನೆ.. ಅಣ್ಣನ ಮಗನೇ ಮಗ'- ಧ್ರುವ ಸರ್ಜಾ !

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿ. ಒಂದ್ಕಡೆ 'ಮಾರ್ಟಿನ್' ಸಿನಿಮಾ ಶೂಟಿಂಗ್ ನಡೀತಿದ್ರೆ. ಇನ್ನೊಂದು ಕಡೆ ಜೋಗಿ ಪ್ರೇಮ್ ಸಿನಿಮಾ ಸೆಟ್ಟೇರುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

  ಅದ್ಧೂರಿ, ಬಹದ್ದೂರ್, ಭರ್ಜರಿ ಹಾಗೂ ಪೊಗರು ಬಳಿಕ ಎರಡು ಸಿನಿಮಾಗಳು ಬೇಜಾನ್ ಸದ್ದು ಮಾಡುತ್ತಿವೆ. ಅದರಲ್ಲೂ ಮೊದಲು 'ಮಾರ್ಟಿನ್' ಬಿಡುಗಡೆಗೆ ಧ್ರುವ ಫ್ಯಾನ್ಸ್ ಕಾದು ಕೂತಿದ್ದಾರೆ. ಈ ದು:ಖದಲ್ಲಿ ಮುಳುಗಿದ್ದ ಕುಟುಂಬಕ್ಕೆ ಶೀಘ್ರದಲ್ಲಿಯೇ ಖುಷಿ ವಿಷಯ ಸಿಗಲಿದೆ.

  ಈ ಎರಡು ಸಿನಿಮಾಗಳ ಸಂಭ್ರಮ ಒಂದು ಕಡೆಯಾದರೆ, ಇನ್ನೊಂದು ಕಡೆ ಇದೇ ದಸರಾ ಹಬ್ಬದಲ್ಲಿ ಧ್ರುವ ಸರ್ಜಾ ತಂದೆಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಎರಡೂ ಸಂಭ್ರಮಗಳ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪವರ್‌ ಟಿವಿ ಜೊತೆ ಭಾವನಾತ್ಮಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

   ದಸರಾ ವೇಳೆ ಮೊದಲ ಮಗುವಿನ ನಿರೀಕ್ಷೆ

  ದಸರಾ ವೇಳೆ ಮೊದಲ ಮಗುವಿನ ನಿರೀಕ್ಷೆ

  ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ವಿಷಯವನ್ನು ಸ್ವತ: ಧ್ರುವ ಸರ್ಜಾ ರಿವೀಲ್ ಮಾಡಿದ್ದರು. ಇತ್ತೀಚೆಗೆ ಸಿಂಪಲ್ ಆಗಿ ಸೀಮಂತ ಕಾರ್ಯವನ್ನೂ ಕೂಡ ನಡೆದಿತ್ತು. ದಸರಾ ಹಬ್ಬದ ಆಸು-ಪಾಸಿನಲ್ಲಿ ಡೇಟ್ ಕೊಟ್ಟಿದ್ದು, ಆಕ್ಷನ್ ಪ್ರಿನ್ಸ್ ಶೀಘ್ರದಲ್ಲಿ ತಂದೆಯಾಗಲಿದ್ದಾರೆ. ಈ ಖುಷಿ ಸರ್ಜಾ ಕುಟುಂಬದಲ್ಲಿ ಮನೆ ಮಾಡಿದೆ. ಇದೇ ವೇಳೆ ಅಣ್ಣ ಚಿರಂಜೀವಿ ಸರ್ಜಾ ಪುತ್ರನ ಬಗ್ಗೆ ಧ್ರುವ ಸರ್ಜಾ ಮಾತಾಡಿದ್ದಾರೆ.

   'ರಾಯನ್ ನನ್ನ ಮಗ'

  'ರಾಯನ್ ನನ್ನ ಮಗ'

  ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಧ್ರುವ ಸರ್ಜಾ ತಮ್ಮ ಆಸೆಯನ್ನು ಪವರ್ ಟಿವಿಯ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಣ್ಣ ಚಿರಂಜೀವಿ ಸರ್ಜಾ ಪುತ್ರ ರಾಯನ್ ಸರ್ಜಾ ನನ್ನ ಮಗ ಅಂದಿದ್ದಾರೆ. "ಮಗ ಹುಟ್ಟಿದ್ರೆ ನಿರಾಶೆಯಾಗುತ್ತೋ ಏನೋ ಗೊತ್ತಿಲ್ಲ. ಯಾಕಂದ್ರೆ ಮನೆಗೊಬ್ಬ ಮಗ ಇದ್ದಾನೆ. ನಮ್ಮ ಅಣ್ಣನ ಮಗ. ರಾಯನ್‌ ನನ್ನ ಮಗ. ನನಗೆ ಹಾಗೂ ನನ್ನ ಹೆಂಡ್ತಿಗೂ ಅಷ್ಟೇ. ಮಗಳಾಗಬೇಕು ಅಂತ ಆಸೆಯಿದೆ. ಮಕ್ಕಳಾಗುವುದೇ ಖುಷಿ. ಅಣ್ಣಾ ಬರ್ತಾನೋ..? ಅಜ್ಜಿ ಬರ್ತಾಳೋ ಗೊತ್ತಿಲ್ಲ." ಎಂದಿದ್ದಾರೆ.

   ಅಣ್ಣ-ಅಜ್ಜಿ ಇಲ್ಲ ಅನ್ನೋ ದು:ಖ

  ಅಣ್ಣ-ಅಜ್ಜಿ ಇಲ್ಲ ಅನ್ನೋ ದು:ಖ

  ಧ್ರುವ ಸರ್ಜಾ ಹಾಗೂ ಅವರ ಕುಟುಂಬ ಎರಡೆರಡು ದು:ಖ. ಒಂದ್ಕಡೆ ಅಣ್ಣನನ್ನು ಕಳೆದುಕೊಂಡ ದು:ಖ. ಇನ್ನೊಂದು ಕಡೆ ಅಜ್ಜಿ ಇಲ್ಲ ಅನ್ನೋ ಬೇಜಾರು. ಇಂತಹ ಖುಷಿಯ ಕ್ಷಣದಲ್ಲಿ ಇಬ್ಬರೂ ಇರಬೇಕಿತ್ತು ಅನ್ನೋ ಆಸೆವಿದೆ. ಅಜ್ಜಿ ಸರ್ಜಾ ಕುಟುಂಬ ಪಿಲ್ಲರ್ ಆಗಿದ್ದರು. ಅತ್ತ ಅಣ್ಣನೊಂದಿಗೆ ಧ್ರುವ ಸರ್ಜಾ ಉತ್ತಮ ಬಾಂಡಿಂಗ್ ಹೊಂದಿದ್ದರು. ಹೀಗಾಗಿ ಇಬ್ಬರನ್ನೂ ಕಳೆದುಕೊಂಡ ದು:ಖ ಇನ್ನೂ ಮಾಸಿಲ್ಲ.

   ಧ್ರುವ ವೃತ್ತಿ ಜೀವನ ಸಕ್ಸಸ್

  ಧ್ರುವ ವೃತ್ತಿ ಜೀವನ ಸಕ್ಸಸ್

  ಧ್ರುವ ಸರ್ಜಾ ವೃತ್ತಿ ಬದುಕು ಸಕ್ಸಸ್‌ಫುಲ್ ಆಗಿದೆ. ಒಂದರ ಹಿಂದೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಆಗಿವೆ. ಅವಕಾಶಗಳು ಧ್ರುವ ಸರ್ಜಾರನ್ನು ಹುಡುಕಿಕೊಂಡು ಬರುತ್ತಿವೆ. ಮುಂದಿನ ವರ್ಷ 'ಮಾರ್ಟಿನ್' ರಿಲೀಸ್ ಆಗುತ್ತಿದೆ. ಅದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಮೊದಲ ಸಿನಿಮಾ ನಿರ್ದೇಶಿಸಿದ್ದ ಎ ಪಿ ಅರ್ಜುನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

  English summary
  Dhruva Sarja About Raayan Sarja And Wife Prerana Delivery Date, Know More.
  Tuesday, September 27, 2022, 21:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X