For Quick Alerts
  ALLOW NOTIFICATIONS  
  For Daily Alerts

  #MyGuru ಅಭಿಯಾನ: ನನ್ನ ಅಣ್ಣ ನನ್ನ ಗುರು ಎಂದು ಚಿರು ಸ್ಮರಿಸಿದ ಧ್ರುವ ಸರ್ಜಾ

  |

  ಪ್ರತಿಯೊಬ್ಬರ ಜೀವನದಲ್ಲು ಒಬ್ಬ ಗುರು ಇದ್ದೇ ಇರ್ತಾರೆ. ಸನ್ನಡತೆ, ಸನ್ಮಾರ್ಗ ಹಾಗೂ ಒಳ್ಳೆಯ ಪ್ರಜೆ ಅಥವಾ ವ್ಯಕ್ತಿಯಾಗಿ ರೂಪುಗೊಳ್ಳಲು ಆ ಗುರು ಸ್ಫೂರ್ತಿಯಾಗಿರುತ್ತಾರೆ. ಆ ಗುರುವನ್ನು ನೆನೆಯುವ ಒಂದು ವೇದಿಕೆ ಮಾಡಿಕೊಟ್ಟಿದೆ ಯುವರತ್ನ ಚಿತ್ರತಂಡ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿ 'ಪಾಠಶಾಲೆ' ಎಂಬ ಹಾಡು ಬಿಡುಗಡೆಯಾಗಿದೆ. ಈ ಹಾಡು ಗುರುವಿನ ಬಗ್ಗೆ ಮೂಡಿಬಂದಿದೆ. ಪ್ರತಿಯೊಬ್ಬರು ತಮ್ಮ ಗುರುವಿನ ಪಾತ್ರವನ್ನು ಮರೆಯಬಾರದು ಎಂದು ಸಂದೇಶ ನೀಡಿದೆ.

  ಶಿರಡಿ ಸಾಯಿಬಾಬಾ ಮತ್ತು ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನ ಪಡೆದ ಪುನೀತ್

  ಈ ಹಾಡಿನ ಹಿನ್ನೆಲೆ ಯುವರತ್ನ ಚಿತ್ರತಂಡ #MyGuru ಎಂಬ ವಿಶೇಷ ಅಭಿಯಾನ ಶುರು ಮಾಡಿದೆ. ತಮ್ಮ ಜೀವನದಲ್ಲಿ ಮರೆಯಲಾಗದ ಗುರು ಬಗ್ಗೆ ಒಂದೆರಡು ಮಾತುಗಳನ್ನು ಹಂಚಿಕೊಳ್ಳುವಂತಹ ಅಭಿಯಾನದಲ್ಲಿ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಸೇರಿದಂತೆ ಹಲವರು ತಮ್ಮ ಗುರುವಿನ ಪರಿಚಯ ಮಾಡಿದ್ದಾರೆ. ಮುಂದೆ ಓದಿ....

  ವಿಜಯಲಕ್ಷ್ಮಿ ಟೀಚರ್ ನನ್ನ ಗುರು

  ವಿಜಯಲಕ್ಷ್ಮಿ ಟೀಚರ್ ನನ್ನ ಗುರು

  #MyGuru ಅಭಿಯಾನದಲ್ಲಿ ಪಾಲ್ಗೊಂಡ ನಟ ಪುನೀತ್ ರಾಜ್ ಕುಮಾರ್ ತಮ್ಮ ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮಿ ಗುರುಗಳನ್ನು ಸ್ಮರಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅವರ ಜೊತೆಗಿರುವ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ನಂತರ ಈ ಅಭಿಯಾನವನ್ನು ರಕ್ಷಿತ್ ಶೆಟ್ಟಿ, ಶ್ರೀಮುರಳಿ, ಸಯೇಶಾ ಅವರನ್ನು ಮುಂದುವರಿಸಲು ಟ್ಯಾಗ್ ಮಾಡಿದ್ದಾರೆ.

  ನನ್ನ ಅಣ್ಣ ನನ್ನ ಗುರು

  ನನ್ನ ಅಣ್ಣ ನನ್ನ ಗುರು

  ''ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಫೂರ್ತಿಯ ಸೂರ್ಯನಾದೆ ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ ನನ್ನ ಗುರು'' ಎಂದು ಚಿರು ಸರ್ಜಾ ಅವರನ್ನು ಧ್ರುವ ಸ್ಮರಿಸಿಕೊಂಡಿದ್ದಾರೆ.

  ಲೆಕ್ಕ ಶಾಸ್ತ್ರ ಕಲಿಸಿದ ಗುರು

  ಲೆಕ್ಕ ಶಾಸ್ತ್ರ ಕಲಿಸಿದ ಗುರು

  ''ಲೆಕ್ಕ ಶಾಸ್ತ್ರ ಕಲಿಸಿದ ಗುರು, ಸತೀಶ್ ಸರ್. ನಾನು ನನ್ನ ಸಿನಿಮಾ ಯಾನ ಶುರು ಮಾಡುವುದಕ್ಕೆ ನನ್ನ ಪೋಷಕರನ್ನು ಒಪ್ಪಿಸಿದ್ರು. ನನ್ನ ಹೆಮ್ಮೆಯ ಗುರು'' ಎಂದು ನಿರ್ದೇಶಕ ಪವನ್ ಒಡೆಯರ್ ಫೋಟೋ ಹಂಚಿಕೊಂಡಿದ್ದಾರೆ.

  ನನ್ನ ಅಣ್ಣ ನನ್ನ ಗುರು

  ನನ್ನ ಅಣ್ಣ ನನ್ನ ಗುರು

  ''ಪ್ರತಿ ಹೆಜ್ಜೆಗೆ ನೆರಳಾಗಿ ಕತ್ತಲ ದಾರಿಯಲ್ಲಿ ಬೆಳಕಾಗಿ. ಪ್ರತಿ ನಡೆಯಲ್ಲೂ ಮುನ್ನಡೆಸಿ ಸಾಗುವ ನನ್ನ ಅಣ್ಣ ನನ್ನ ಗುರು'' ಎಂದು ವಿಜಯ್ ಕಿರಗಂದೂರ್ ಫೋಟೋ ಹಂಚಿಕೊಂಡಿದ್ದಾರೆ ಕಾರ್ತಿಕ್ ಗೌಡ.

  ತೆಲುಗಿನ ಖ್ಯಾತ ನಿರ್ಮಾಪಕರ ಪಾಲಾಯ್ತು ಯುವರತ್ನ ವಿತರಣೆ ಹಕ್ಕು

  ರಾಬರ್ಟ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಯಡಿಯೂರಪ್ಪ | Roberrt | Darshan | Filmibeat Kannada
  English summary
  After Puneeth Rajkumar, Dhruva Sarja Accepts My Guru Challenge and Posts Picture with his Brother Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X