For Quick Alerts
  ALLOW NOTIFICATIONS  
  For Daily Alerts

  9 ವರ್ಷದ ಬಳಿಕ ಒಂದಾಗುತ್ತಿದ್ದಾರೆ ಧ್ರುವ ಸರ್ಜಾ-ಅರ್ಜುನ್?

  |

  ಧ್ರುವ ಸರ್ಜಾ ಸ್ಯಾಂಡಲ್‌ವುಡ್‌ನ ಪಕ್ಕಾ ಪೈಸಾ ವಸೂಲ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಭಿನ್ನ ಮ್ಯಾನರಿಸಂ, ಆಕ್ಷನ್‌ಗಳಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಸಂಪಾದಿಸಿಕೊಂಡಿದ್ದಾರೆ.

  ಧ್ರುವ ಸರ್ಜಾರನ್ನು ನಾಯಕ ನಟನನ್ನಾಗಿ ಲಾಂಚ್ ಮಾಡಿದ್ದು ನಿರ್ದೇಶಕ ಎ.ಪಿ.ಅರ್ಜುನ್. ಇವರೇ ನಿರ್ದೇಶಿಸಿದ್ದ 'ಅದ್ಧೂರಿ' ಸಿನಿಮಾದ ಮೂಲಕ ಧ್ರುವ ಸರ್ಜಾ ಸಿನಿಮಾ ನಟನೆಗೆ ಕಾಲಿಟ್ಟರು.

  'ಅದ್ಧೂರಿ' ಸಿನಿಮಾ ಬಿಡುಗಡೆ ಆಗಿ ಇದೀಗ 9 ವರ್ಷಗಳಾಗಿವೆ. ಇಷ್ಟು ವರ್ಷದಲ್ಲಿ ಧ್ರುವ ಸರ್ಜಾ ಸ್ಟಾರ್ ಆಗಿದ್ದಾರೆ. ಹಲವಾರು ಮಂದಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಮತ್ತೆ ಎ.ಪಿ.ಅರ್ಜುನ್ ಮತ್ತು ಧ್ರುವ ಸರ್ಜಾ ಒಂದಾಗುತ್ತಿದ್ದಾರೆ.

  'ಪೊಗರು' ಮುಗಿದ ಕೂಡಲೇ ನಂದ ಕಿಶೋರ್ ನಿರ್ದೇಶನದ 'ದುಬಾರಿ' ಸಿನಿಮಾ ಸೆಟ್ಟೇರಿತು. ಆದರೆ ಅನಿವಾರ್ಯ ಕಾರಣಗಳಿಂದ ಆ ಸಿನಿಮಾಕ್ಕೆ ಬ್ರೇಕ್ ಬಿದ್ದಿದೆ. ಈ ನಡುವೆ ಧ್ರುವ ಸರ್ಜಾ, ಎ.ಪಿ.ಅರ್ಜುನ್ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  'ದುಬಾರಿ'ಗಾಗಿ ನಿಗದಿಯಾಗಿದ್ದ ತಂಡವನ್ನೇ ಇಟ್ಟುಕೊಂಡು ಎ.ಪಿ.ಅರ್ಜುನ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿವೆ. 'ದುಬಾರಿ' ಸಿನಿಮಾಕ್ಕೆ ಆಯ್ಕೆ ಆಗಿದ್ದ ನಾಯಕಿ ಶ್ರೀಲೀಲಾ, ನಿರ್ಮಾಪಕ ಉದಯ್ ಕೆ ಮೆಹ್ತಾ ಸಹ ಎಲ್ಲರೂ ಹಾಗೆಯೇ ಇರಲಿದ್ದಾರೆ. ಆದರೆ ನಿರ್ದೇಶನ ಮಾತ್ರ ನಂದ ಕಿಶೋರ್ ಬದಲಿಗೆ ಎ.ಪಿ.ಅರ್ಜುನ್ ಹೆಗಲಿಗೆ ಹೋಗಿದೆಯಂತೆ.

  ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು | Filmibeat Kannada

  ಎ.ಪಿ.ಅರ್ಜುನ್ ಸಾರಥ್ಯವಹಿಸಿದ ಮೇಲೆ ಕತೆಯಲ್ಲಿ ಬದಲಾವಣೆ ಮಾಡಲಾಗಿದೆ ಮತ್ತು ಹೆಸರು ಸಹ ಬದಲಾವಣೆ ಮಾಡಲಾಗುತ್ತದೆ.

  English summary
  Dhruva Sarja and AP Arjun to pair up once again after 9 years. Dhruva Sarja's first movie was directed by AP Arjun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X