For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾದ 'ಅದ್ದೂರಿ' ಜೋಡಿ: 'ದುಬಾರಿ'ಗೂ ಮೊದಲು ಮತ್ತೊಂದು ಸಿನಿಮಾಗೆ ಸಜ್ಜಾದ ಧ್ರುವ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಪೊಗರು' ಸಿನಿಮಾ ಬಳಿಕ 'ದುಬಾರಿ'ಯಾಗಲು ರೆಡಿಯಾಗಿದ್ದರು. ಆದರೆ ಕಾರಣಾಂತರಗಳಿಂದ 'ದುಬಾರಿ' ಸಿನಿಮಾ ಬದಿಗಿಟ್ಟು ಮತ್ತೊಂದು ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ. ನಂದಕಿಶೋರ್ ಜೊತೆ ಹೊಸ ಸಿನಿಮಾ ಮಾಡಬೇಕಿದ್ದ ಧ್ರುವ ಸರ್ಜಾ ಇದೀಗ ನಿರ್ದೇಶಕ ಎ.ಪಿ ಅರ್ಜುನ್ ಜೊತೆ ಮತ್ತೆ ಕೈ ಜೋಡಿಸಿದ್ದಾರೆ.

  'ಅದ್ದೂರಿ' ಸೂಪರ್ ಹಿಟ್ ಬಳಿಕ ಮತ್ತೆ ಧ್ರುವ ಸರ್ಜಾ ಮತ್ತು ಪಿ.ಪಿ ಅರ್ಜುನ್ ಒಂದಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಅದ್ದೂರಿ ಧ್ರುವ ನಟನೆಯ ಚೊಚ್ಚಲ ಸಿನಿಮಾ. ಅರ್ಜುನ್ ನಿರ್ದೇಶನದ ಸಿನಿಮಾ ಮೂಲಕ ಧ್ರುವ ಸರ್ಜಾ ಅದ್ದೂರಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದ್ದರು.

  'ದುಬಾರಿ' ಸಿನಿಮಾದಿಂದ ನಂದ ಕಿಶೋರ್ ಔಟ್: ನಿರ್ಮಾಪಕ ಸ್ಪಷ್ಟನೆ'ದುಬಾರಿ' ಸಿನಿಮಾದಿಂದ ನಂದ ಕಿಶೋರ್ ಔಟ್: ನಿರ್ಮಾಪಕ ಸ್ಪಷ್ಟನೆ

  2012ರಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿತ್ತು. ಮೊದಲ ಸಿನಿಮಾದಲ್ಲೇ ಧ್ರುವ ಸ್ಟಾರ್ ಆಗಿ ಹೊರಹೊಮ್ಮಿದ್ರು. ಧ್ರುವ ಸರ್ಜಾ ಜೊತೆ ನಾಯಕಿಯಾಗಿ ರಾಧಿಕಾ ಪಂಡಿತ್ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯಗೆದ್ದಿತ್ತು.

  ಇದೀಗ ಮತ್ತೆ ಅನೇಕ ವರ್ಷಗಳ ನಂತರ ಹಿಟ್ ಕಾಂಬಿನೇಷನ್ ಒಂದಾಗಿದೆ. ನಿರ್ಮಾಪಕ ಉದಯ್ ಮೆಹ್ತಾ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ವಿಶೇಷ ಎಂದರೆ ಹೊಸ ಸಿನಿಮಾ ಜುಲೈ 7ರಂದು ಮುಹೂರ್ತ ನೆರವೇರಲಿದ್ದು, ಶೀಘ್ರದಲ್ಲೇ ಸಿನಿಮಾತಂಡ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

  ಅಂದಹಾಗೆ ಎಪಿ ಅರ್ಜುನ್ ಕೊನೆಯದಾಗಿ ಕಿಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಳಿಕ ಅದ್ದೂರಿ ಲವರ್ ಅನೌನ್ಸ್ ಮಾಡಿದ್ದರು. ಕೊರೊನಾ ಕಾರಣದಿಂದ ಈ ಸಿನಿಮಾ ತಡವಾಗಿದೆ. ಇದೀಗ ಧ್ರುವ ಸರ್ಜಾ ಜೊತೆ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

  ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಶಿವ ರಾಜ್ ಕುಮಾರ್ ಕೊಟ್ಟ ಗಿಫ್ಟ್ ನೋಡಿ | Filmibeat Kannada

  ಅಂದಹಾಗೆ ಹೊಸ ಸಿನಿಮಾಗೆ ಶೀರ್ಷಿಕೆ ಏನು? ಧ್ರುವ ಸರ್ಜಾಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದ್ದು ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ಬ್ಯುಸಿಯಾಗಿದ್ದು, ಆಗಸ್ಟ್ ತಿಂಗಳಿಂದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Actor Dhruva Sarja and AP Arjun collaborating for the second time for new movie; muhurat on July 7.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X