ಮಾರ್ಕೆಟ್‌ನಲ್ಲಿ ಗಿಜಿ ಗಿಜಿ, ಬಸ್ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಏಕೆ?
ಫೆಬ್ರವರಿ 1 ರಿಂದ ದೇಶಾದ್ಯಂತ ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಆಸನ ಭರ್ತಿಯೊಂದಿಗೆ ಸಿನಿಮಾ ಪ್ರದರ್ಶಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜನವರಿ 31 ರಂದು ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳಿಗೆ ವಿನಾಯ್ತಿ ಘೋಷಣೆಯಾಗಿತ್ತು. ಇದರಿಂದ ಚಿತ್ರೋದ್ಯಮ ಮಂದಿ ಸಂತಸಗೊಂಡಿದ್ದರು.
Recommended Video
ಆದರೆ, ದೇವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಕೇಂದ್ರ ಸರ್ಕಾರದ ಆದೇಶವನ್ನು ರಾಜ್ಯ ಸರ್ಕಾರ ತಡೆದಿದೆ. ಕರ್ನಾಟಕದಲ್ಲಿ ಥಿಯೇಟರ್‌ಗಳಲ್ಲಿ 100 ರಷ್ಟು ಆಸನ ಭರ್ತಿ ಮಾಡಲು ಅವಕಾಶ ಇಲ್ಲ, ಈ ತಿಂಗಳ ಅಂತ್ಯದವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ತಿಳಿಸಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಬೇಸರಗೊಂಡಿದ್ದು, ಚಿತ್ರಮಂದಿರಕ್ಕೆ ಮಾತ್ರ ಏಕೆ ನಿರ್ಬಂಧ ಎಂದು ಪ್ರಶ್ನಿಸುತ್ತಿದ್ದಾರೆ? ಮುಂದೆ ಓದಿ...

ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಏಕೆ?
ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿದ್ದ ಜನರು ನಿಧಾನವಾಗಿ ಹಳೆಯ ಸ್ಥಿತಿಗೆ ಮರಳುತ್ತಿದ್ದಾರೆ. ಮೊದಲಿನಂತೆ ಜೀವನ ನಡೆಸಲು ಶುರು ಮಾಡಿದ್ದಾರೆ. ರಾಜಕೀಯ ಸಭೆ, ಹೋರಾಟ, ಪ್ರತಿಭಟನೆ, ಬಸ್, ಹಾಗೂ ಮಾರ್ಕೆಟ್‌ನಲ್ಲಿ ಜನರು ಗಿಜಿಗಿಜಿ ಅಂತಿದ್ದಾರೆ. ಆದರೆ, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಹೇರಲಾಗಿದೆ. ಈ ನಡೆಯನ್ನು ನಟ ಧ್ರುವ ಸರ್ಜಾ ಮತ್ತು ದುನಿಯಾ ವಿಜಯ್ ಟ್ವಿಟ್ಟರ್ ಮೂಲಕ ಪ್ರಶ್ನಿಸಿದ್ದಾರೆ.

ಬಸ್ ರಶ್, ಮಾರ್ಕೆಟ್ ಗಿಜಿಗಿಜಿ!
ಟ್ವಿಟ್ಟರ್‌ನಲ್ಲಿ ಫೋಟೋವೊಂದು ಹಂಚಿಕೊಂಡಿರುವ ಧ್ರುವ ಸರ್ಜಾ, ''ಬಸ್ ನಲ್ಲಿ ಫುಲ್ ರಶ್..! ಮಾರ್ಕೆಟ್ ನಲ್ಲಿ ಗಿಜಿ ಗಿಜಿ..! ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ?'' ಪ್ರಶ್ನಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಹಾಗೂ ಸಚಿವ ಡಾ ಸುಧಾಕರ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಧ್ರುವ ಸರ್ಜಾ ಅವರಂತೆ ನಟ ದುನಿಯಾ ವಿಜಯ್ ಅದೇ ಪೋಸ್ಟ್‌ನಲ್ಲಿ ಹಂಚಿಕೊಂಡು ಸರ್ಕಾರದ ನಿಲುವು ಪ್ರಶ್ನಿಸಿದ್ದಾರೆ.

ಫೆಬ್ರವರಿ 19ಕ್ಕೆ ಪೊಗರು ಬಿಡುಗಡೆ
ಫೆಬ್ರವರಿ 19 ರಂದು ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಪೊಗರು ರಿಲೀಸ್ ಆಗುತ್ತಿದೆ. ಕೇಂದ್ರ ಸರ್ಕಾರದ ಆದೇಶದ ಬಳಿಕ ಚಿತ್ರಮಂದಿರಕ್ಕೆ ನೂರರಷ್ಟು ಅನುಮತಿ ಸಿಕ್ತು ಎನ್ನುವ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ರಾಜ್ಯ ಸರ್ಕಾರದ ನಿರ್ಧಾರ ನಿರಾಸೆ ತಂದಿದೆ.

ಚಿತ್ರಪ್ರೇಮಿಗಳ ಪ್ರಶ್ನೆಯೂ ಇದೇ ಆಗಿದೆ?
ಸ್ಯಾಂಡಲ್‌ವುಡ್‌ನ ಅನೇಕರು ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಮಾತ್ರ ಕೊರೊನಾ ಬರುತ್ತಾ? ಬೇರೆ ಎಲ್ಲೂ ಕೊವಿಡ್ ಇಲ್ಲವಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿದ್ದಾರೆ. ಚಿತ್ರಮಂದಿರಕ್ಕೆ 100 ಪರ್ಸೆಂಟ್ ಆಸನ ಭರ್ತಿ ಮಾಡಲು ಅನುಮತಿ ಕೊಡಬೇಕು ಎಂಬ ವಾದಕ್ಕೆ ಸಾರ್ವಜನಿಕರು ಬೆಂಬಲ ಸೂಚಿಸಿದ್ದರು. ಆದರೆ, ಸರ್ಕಾರ ಮಾತ್ರ ಹಿಂದೇಟು ಹಾಕಿದೆ.


Click it and Unblock the Notifications










