For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್: ರೊಮ್ಯಾಂಟಿಕ್ ಮೂಡ್ ನಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪತ್ನಿ ಪ್ರೇರಣಾ ಜೊತೆ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಧ್ರುವ ಪೊಗರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸಿನಿಮಾ ರಿಲೀಸ್ ಆಗಿ ಯಶಸ್ಸು ಕಾಣುತ್ತಿದ್ದಂತೆ ಬಿಡುವು ಮಾಡಿಕೊಂಡು ಪತ್ನಿ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ.

  ವೈರಲ್ ಆಯ್ತು ಧ್ರುವ ಸರ್ಜಾ, ಪ್ರೇರಣಾ ರೊಮ್ಯಾಂಟಿಕ್ ಫೋಟೊ | Dhruva Sarja & Prerana On Vaccation

  ಇತ್ತೀಚಿಗೆ ಸಿನಿ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಕಡೆ ಪಯಣ ಬೆಳೆಸುತ್ತಿದ್ದಾರೆ. ಮಾಲ್ಡೀವ್ಸ್ ಸಿನಿಮಾ ತಾರೆಯರ ಸ್ವರ್ಗ ಎಂದೇ ಪ್ರಸಿದ್ಧಿಯಾಗಿದೆ. ಆದರೆ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಜಾಲಿ ಟ್ರಿಪ್ ಗೆ ಆಯ್ಕೆಮಾಡಿಕೊಂಡ ಸ್ಥಳ ಗೋವಾ. ಸುಮಾರು ನಾಲ್ಕು ವರ್ಷಗಳಿಂದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಧ್ರುವ ಸದ್ಯ ಸ್ವಲ್ಪ ವಿರಾಮ ಪಡೆದು ಪತ್ನಿ ಜೊತೆ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.

  'ಪೊಗರು' ಸಿನಿಮಾದ ವಿವಾದ: ಬೇಷರತ್ ಕ್ಷಮೆ ಕೇಳಿದ ನಟ ಧ್ರುವ ಸರ್ಜಾ'ಪೊಗರು' ಸಿನಿಮಾದ ವಿವಾದ: ಬೇಷರತ್ ಕ್ಷಮೆ ಕೇಳಿದ ನಟ ಧ್ರುವ ಸರ್ಜಾ

  ಗೋವಾದ ಸುಂದರ ಸಂಜೆಯಲ್ಲಿ ಪತ್ನಿ ಜೊತೆ ರೊಮ್ಯಾಂಟಿಕ್ ಮೂಡ್ ನಲ್ಲಿರುವ ಧ್ರುವ ಸರ್ಜಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ನಿ ಪ್ರೇರಣಾ ಮಡಿಲಲ್ಲಿ ಧ್ರುವ ತಲೆ ಇಟ್ಟು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂದಹಾಗೆ ಈ ಸುಂದರ ಫೋಟೋವನ್ನು ಪ್ರೇರಣಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಧ್ರುವ ಸರ್ಜಾ ದಂಪತಿಯ ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ. ಧ್ರುವ ಸರ್ಜಾ ದಂಪತಿ ಜೊತೆ ಧ್ರುವ ಗೆಳೆಯ ಅಲ್ಲು ರಘು ಕೂಡ ಗೋವಾ ಪ್ರವಾಸ ಕೈಗೊಂಡಿದ್ದಾರೆ.

  ಪೊಗರು ಧ್ರುವ ಸರ್ಜಾ ಅಭಿನಯದ 4ನೇ ಸಿನಿಮಾವಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಧ್ರುವ ಪೊಗರು ಬಳಿಕ ದುಬಾರಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಪೂಜೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.

  English summary
  Actor Dhruva Sarja and his wife Prerana Enjoying Vacation in Goa, Pics Inside.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X