For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆಯ ವಿಶೇಷತೆ ಏನು ಗೊತ್ತಾ?

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸಬಾಳಿನ ಹೊಸಿನಲ್ಲಿ ನಿಂತಿದ್ದಾರೆ. ಪೊಗರು ಹುಡುಗನ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಇದೇ ತಿಂಗಳು 24ರಂದು ಧ್ರುವ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬಾಲ್ಯದ ಗೆಳತಿ ಪ್ರೇರಣ ಶಂಕರ್ ಜೊತೆ ಧ್ರುವ ಹಸೆಮಣೆ ಏರುತ್ತಿದ್ದಾರೆ.

  ಈಗಾಗಲೆ ಧ್ರುವ ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದ ಗಣ್ಯರ ಮನೆಗೆ ಹೋಗಿ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ. ಪೊಗರು ಚಿತ್ರೀಕರಣದ ನಡುವೆಯೂ ಸಾಕಷ್ಟು ಗಣ್ಯರಿಗೆ ಮದುವೆಗೆ ಆಹ್ವಾನ ನೀಡಿದ್ದಾರೆ.

  ಆಮಂತ್ರಣ ಪತ್ರಿಕೆ ಬಹಿರಂಗ

  ಆಮಂತ್ರಣ ಪತ್ರಿಕೆ ಬಹಿರಂಗ

  ಧ್ರುವ ಸರ್ಜಾ ಆಮಂತ್ರಣ ಪತ್ರಿಕೆ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಆದರೀಗ ಆಮಂತ್ರಣ ಪತ್ರಿಕೆ ಬಹಿರಂಗವಾಗಿದೆ. ದ್ರುವ ಸರ್ಜಾ ಮದುವೆ ಪತ್ರಿಕೆ ಆಕರ್ಷಕವಾಗಿ, ವಿಭಿನ್ನವಾಗಿದೆ. ಧ್ರುವ ಮದುವೆ ಪತ್ರಿಕೆಯಲ್ಲಿ ಧ್ರುವ ನೆಚ್ಚಿನ ದೇವರಾದ ಆಂಜಯನೇಯ ರಾರಾಜಿಸುತ್ತಿದ್ದಾನೆ. ಆಂಜನೇಯನ ದರ್ಶನ ಮಾಡಿ ನಂತರ ಧ್ರುವ ಮದುವೆ ಪತ್ರಿಕೆ ಓದಬೇಕು.

  ಅದ್ದೂರಿ ಫೋಟೋಶೂಟ್

  ಅದ್ದೂರಿ ಫೋಟೋಶೂಟ್

  ಧ್ರುವ ಸರ್ಜಾ ಮದುವೆ ಪತ್ರಿಕೆಯಲ್ಲಿ ಧ್ರವ ಮತ್ತು ಪ್ರೇರಣ ಅದ್ದೂರಿ ಫೋಟೋಶೂಟ್ ಇದೆ. ಐತಿಹಾಸಿಕ ಸ್ಥಳದಲ್ಲಿ ಫೋಟೋಶೂಟ್ ಮಾಡಿಸಿರುವ ನವ ಜೋಡಿಯ ಫೋಟೋಗಳು ಆಮಂತ್ರಣ ಪತ್ರಿಕೆಯಲ್ಲಿ ಕಾಣಸಿಗುತ್ತೆ. ಇನ್ನು ವಿಶೇಷ ಅಂದರೆ ಧ್ರುವ ಮದುವೆ ಪತ್ರಿಕೆ ಹಂಚುವ ಜೊತೆಗೆ ಹನುಮನ ವಿಗ್ರಹವನ್ನು ನೀಡಿ ಮದುವೆಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ.

  ಶುಭ ವೃಶ್ಚಿಕ ಲಗ್ನದಲ್ಲಿ ಮದುವೆ

  ಶುಭ ವೃಶ್ಚಿಕ ಲಗ್ನದಲ್ಲಿ ಮದುವೆ

  ಧ್ರುವ ಸರ್ಜಾ ಮತ್ತು ಪ್ರೇರಣ ಮದುವೆ ಇದೆ ತಿಂಗಳು 24ರಂದು ನಡೆಯಲಿದೆ. ಇಬ್ಬರ ಮದುವೆಗೆ ಬೆಂಗಳೂರಿನ 'ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್' ಸಜ್ಜಾಗಿದೆ. ಭಾನುವಾರ ಬೆಳಗ್ಗೆ 7.15 ರಿಂದ 7.45ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಮತ್ತು ಪ್ರೇರಣ ಶಂಕರ್ ಪತಿ-ಪತ್ನಿಯರಾಗಲಿದ್ದಾರೆ.

  ಸಂಜೆ ಆರತಕ್ಷತೆ

  ಸಂಜೆ ಆರತಕ್ಷತೆ

  ಅದ್ದೂರಿ ವಿವಾಹ ಮಹೋತ್ಸವಕ್ಕೆ ಬೃಂದಾವನ ಹಾಲ್ ಸಜ್ಜಾಗುತ್ತಿದೆ. ಬೆಳಗ್ಗೆ 7.15 ರಿಂದ 7.45ರ ಸಂಯದಲ್ಲಿ ಮದುವೆ ನಡೆದರೆ, ಅದೆ ದಿನ ಸಂಜೆ 7.30ಕ್ಕೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ. ಅದ್ದೂರಿ ಆರತಕ್ಷತೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಭಾಗಿಯಾಗಿ ಧ್ರುವ ಮತ್ತು ಪ್ರೇರಣ ಜೋಡಿಗೆ ಆಶೀರ್ವಾದ ಮಾಡಲಿದ್ದಾರೆ.

  English summary
  Kannada actor Dhruva Sarja and Prerna wedding invitation special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X