ಚಿರು ಹುಟ್ಟುಹಬ್ಬದಂದು ಧ್ರುವ ಸರ್ಜಾ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆ

'ಪೊಗರು' ಸಿನಿಮಾ ಆದ್ಮೇಲೆ ಮತ್ತೊಮ್ಮೆ ನಿರ್ದೇಶಕ ನಂದಕಿಶೋರ್ ಜೊತೆ ಸಿನಿಮಾ ಮಾಡ್ತಿದ್ದಾರೆ ಧ್ರುವ ಸರ್ಜಾ. ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಇಂದು ನೆರವೇರಿದೆ.

ನಿರ್ಮಾಪಕ ಉದಯ್ ಮೆಹ್ತಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸರಳವಾಗಿ ನಡೆದ ಸ್ಕ್ರಿಪ್ಟ್ ಪೂಜೆ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ನಂದಕಿಶೋರ್ ಹಾಗೂ ಉದಯ್ ಮೆಹ್ತಾ ಭಾಗಿಯಾಗಿದ್ದರು.

ಇಂದು ಧ್ರುವ ಸರ್ಜಾ ಸಹೋದರ, ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಈ ವಿಶೇಷ ದಿನದಂದು ಧ್ರುವ ಸರ್ಜಾ ತಮ್ಮ ಮುಂದಿನ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

Dhruva Sarja and Uday K Mehtas new film kicksoff with a script pooja

ಈ ಹಿಂದೆ ಸುದೀಪ್ ನಟಿಸಿದ್ದ 'ಬಚ್ಚನ್' ಸಿನಿಮಾ ನಿರ್ಮಿಸಿದ್ದ ಉದಯ್ ಮೆಹ್ತಾ ಅವರು ಧ್ರುವ ಸರ್ಜಾ ಜೊತೆ ಹೊಸ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಸುಮಾರು ನಾಲ್ಕು ವರ್ಷದ ತಯಾರಿ ಹಾಗೂ ಮಾತುಕತೆಯ ಬಳಿಕ ಈಗ ಸಿನಿಮಾ ಆರಂಭವಾಗಿದೆ.

Dhruva Sarja and Uday K Mehtas new film kicksoff with a script pooja

ಸದ್ಯ, ನಂದ ಕಿಶೋರ್ ನಿರ್ದೇಶನದಲ್ಲಿ 'ಪೊಗರು' ಸಿನಿಮಾ ತಯಾರಾಗಿದೆ. ಮೊದಲ ಸಿನಿಮಾ ಬಿಡುಗಡೆಗೂ ಮುಂಚೆಯೇ ಧ್ರುವ ಜೊತೆ ಇನ್ನೊಂದು ಚಿತ್ರ ಒಪ್ಪಿಕೊಂಡಿದ್ದಾರೆ ನಿರ್ದೇಶಕ ನಂದ ಕಿಶೋರ್. ಚಿತ್ರೀಕರಣ ಯಾವಾಗ ಆರಂಭವಾಗುತ್ತೆ, ಕಲಾವಿದರ ಆಯ್ಕೆ ಹಾಗೂ ಇನ್ನಿತರ ಬೆಳವಣಿಗೆಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

Recommended Video

ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja

More from Filmibeat

English summary
Dhruva Sarja new film directed by Nanda kishore, produced by Uday K Mehta kicksoff with a script pooja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X