"ಇಷ್ಟು ಒಳ್ಳೆ ಸಿನಿಮಾಗೆ ಪ್ರೇಕ್ಷಕರು ಯಾಕೆ ಬಂದಿಲ್ಲ ಅಂತ ಆಶ್ಚರ್ಯ ಆಗ್ತಿದೆ"; - ಧ್ರುವ ಸರ್ಜಾ

By ಫಿಲ್ಮಿಬೀಟ್ ಡೆಸ್ಕ್

ಕಳೆದ ವಾರ ಅಪ್ಪಟ ಮಲೆನಾಡಿನ ಭಾಗದ ಸಿನಿಮಾ 'ಕೆರೆಬೇಟೆ' ರಿಲೀಸ್ ಆಗಿದೆ. ಸಿನಿಮಾ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ, ಥಿಯೇಟರ್‌ಗೆ ಜನರು ಬರುತ್ತಿಲ್ಲ ಅಂತ ಅನ್ನೋ ಅಳಲು ಚಿತ್ರತಂಡದ್ದು. ಹೀಗಾಗಿ ಕನ್ನಡ ಚಿತ್ರರಂಗದ ತಾರೆಯರು 'ಕೆರೆಬೇಟೆ' ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.

ಇದೇ ಸಂದರ್ಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ 'ಕೆರೆಬೇಟೆ' ಸಿನಿಮಾವನ್ನು ಅಭಿಮಾನಿಗಳ ಜೊತೆ ಕೂತು ವೀಕ್ಷಿಸಿದ್ದಾರೆ. ಈ ವೇಳೆ 'ಕೆರೆಬೇಟೆ ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಉತ್ತಮವನ್ನು ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್‌ಗೆ ಬಾರದೇ ಇರುವುದಕ್ಕೆ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.

Dhruva Sarja appreciate new kannada movie Kerebete

'ಮಾರ್ಟಿನ್' ಸಿನಿಮಾದ ನಿರ್ದೇಶಕ ಎ ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಇಬ್ಬರೂ ಜೊತೆಯಾಗಿ ಸಿನಿಮಾವನ್ನು ನೋಡಿದ್ದಾರೆ. ಬಳಿಕ ಮಾಧ್ಯಮಗಳಿಗೆ 'ಕೆರೆಬೇಟೆ' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹಾಗೇ ಸಿನಿಮಾದ ನಾಯಕ ನಟ ಗೌರಿ ಶಂಕರ್ ಜೊತೆಗಿನ ತಮ್ಮ ನಂಟನ್ನು ರಿವೀಲ್ ಮಾಡಿದ್ದಾರೆ.

'ಕೆರೆಬೇಟೆ' ಸಿನಿಮಾದ ನಾಯಕ ಗೌರಿ ಶಂಕರ್ ಹಾಗೂ ಧ್ರುವ ಸರ್ಜಾ ಇಬ್ಬರದ್ದೂ ಹಳೇ ಪರಿಚಯ. ಸಿನಿಮಾಗಳಿಗೆ ಅವಕಾಶವನ್ನು ಹುಡುಕುತ್ತಿದ್ದ ದಿನದಿಂದ ಇಬ್ಬರ ನಂಟು ಇದೆ. ಅದನ್ನೇ ಸಿನಿಮಾ ನೋಡಿದ ಬಳಿಕ ಧ್ರುವ ಸರ್ಜಾ ನೆನಪಿಸಿಕೊಂಡಿದ್ದಾರೆ.

"ಕೆರೆಬೇಟೆ ಅನ್ನುವ ಸಿನಿಮಾವನ್ನು ಇವತ್ತು ನೋಡಿದೆ. ನಾನು ತುಂಬಾ ಪ್ರಾಕ್ಟಿಕಲ್ ಆಗಿ ಮಾತಾಡುತ್ತೇನೆ. ಒಬ್ಬ ನಟ ಹೀರೊ ಆಗುವುದಕ್ಕೆ ತುಂಬಾನೇ ಟ್ರೈ ಮಾಡಿ, ಅವಕಾಶಗಳು ಹುಡುಕಬೇಕಾದರೆ, ಒಂದು ಆಡಿಷನ್‌ಗೆ ಹೋಗಿ ಚಾನ್ಸ್ ಕೊಟ್ಟಿದ್ದು ಎಪಿ ಅರ್ಜುನ್ ಅವರು. ಅದ್ಧೂರಿಯಲ್ಲಿ ಹಾಗೇ ಚಾನ್ಸ್ ಸಿಕ್ಕಿದ್ದು. ಈ ಮಾತು ನಾನು ಏನಕ್ಕೆ ನೆನಪಿಸಿಕೊಳ್ಳುತ್ತಿದ್ದೇನೆ ಅಂದರೆ, ನನ್ನ ಜೊತೇನೆ ಟ್ರೈನ್ ಆಗಿದ್ದು ನಮ್ಮ ಗೌರಿಶಂಕರ್ ಅವರು. " ಎಂದು ಆರಂಭದ ದಿನಗಳನ್ನು ನೆನೆದಿದ್ದಾರೆ.

ಗೌರಿಶಂಕರ್ ನಟಿಸಿದ 'ಕೆರೆಬೇಟೆ' ಸಿನಿಮಾ ಅಪ್ಪಟ ದೇಸಿ ಸಿನಿಮಾ. ಮಲೆನಾಡಿನ ಭಾಗದ ಸುಂದರ ತಾಣಗಳ ಜೊತೆ ಮನಕಲುಕುವ ಕಥೆಯನ್ನು ಹೇಳಲಾಗಿದೆ. ಈ ಸಿನಿಮಾ ನೋಡಿ ಮೆಚ್ಚಿಕೊಂಡಿರೋ ಧ್ರುವ, ಪ್ರೇಕ್ಷಕರು ಥಿಯೇಟರ್‌ಗೆ ಬಾರದೇ ಇರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Dhruva Sarja appreciate new kannada movie Kerebete

"ಯಾವ ನಿರ್ಮಾಪಕರು ಇಲ್ಲ ಅಂತ ಹೇಳಿ ಮನೆ ದುಡ್ಡು ಹಾಕಿಕೊಂಡು ಅಂದರೆ, ಅವರೇ ಪ್ರಡ್ಯೂಸ್ ಮಾಡಿರುವಂತಹ ಸಿನಿಮಾವಿದು. ತುಂಬಾನೇ ಚೆನ್ನಾಗಿದೆ ಸಿನಿಮಾ. ಯಾಕೆ ನಮ್ಮ ಪ್ರೇಕ್ಷಕರು ಈ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಬರಲಿಲ್ಲ ಅನ್ನೋದು ತುಂಬಾನೇ ಆಶ್ಚರ್ಯ ಆಗುತ್ತಿದೆ. ಈ ಸಿನಿಮಾ ತುಂಬಾನೇ ಚೆನ್ನಾಗಿದೆ. ಅದರಲ್ಲೂ ಗೌರಿ ಶಂಕರ್ ಅವರ ಆಕ್ಟಿಂಗ್ ಇರಬಹುದು. ರಾಜ್‌ಗುರು ಅವರ ಡೈರೆಕ್ಷನ್ ಇರಬಹುದು. ಬಿಂದು ಮೇಡಂ ಅವರ ಆಕ್ಟಿಂಗ್ ಇರಬಹುದು ಎಲ್ಲವೂ ಚೆನ್ನಾಗಿದೆ." ಎಂದಿದ್ದಾರೆ.

ಹಾಗೇ, "ಈ ಸಿನಿಮಾ ಕನ್ನಡ ಕಲಾಭಿಮಾನಿಗಳು ಒಂದು ಪ್ರತಿಫಲ ಕೊಡಬೇಕು. ಯಾಕಂದ್ರೆ, ಸಿನಿಮಾ ತುಂಬಾನೇ ಚೆನ್ನಾಗಿದೆ. ಇದನ್ನು ಮಿಸ್ ಮಾಡಿದರೆ, ಎಷ್ಟೊ ಮಂದಿಗೆ ಉತ್ಸಾಹ ಕೊಡದೆ ಇರುವ ಹಾಗೆ ಆಗುತ್ತೆ. ಚೆನ್ನಾಗಿರುವ ಸಿನಿಮಾವನ್ನು ಗೆಲ್ಲಿಸುತ್ತೇವೆ ಅಂತ ನಾವು ಯಾವಾಗಲೂ ನಂಬಿದ್ದೀವಿ. ಇನ್ನೊಂದು ಆ ಎಗ್ಸಾಂಪಲ್ ಅನ್ನು ಸೆಟ್ ಮಾಡೋಣ." ಎಂದು ಕನ್ನಡದ ಪ್ರೇಕ್ಷಕರಿಗೆ ಕರೆ ನೀಡಿದ್ದಾರೆ.

More from Filmibeat

English summary
Dhruva Sarja appreciate new kannada movie Kerebete
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X