ಸುದೀಪ್ 'ಮ್ಯಾಕ್ಸ್'ಗೆ ಧ್ರುವ ಸರ್ಜಾ ಬೆಂಬಲ: ತಮ್ಮ ಫ್ಯಾನ್ಸ್‌ಗೆ ಕಿಚ್ಚನ ಸಿನಿಮಾ ನೋಡಲು ಹೇಳಿದ ವಿಡಿಯೋ ವೈರಲ್!

By ಫಿಲ್ಮಿಬೀಟ್ ಡೆಸ್ಕ್

ಯಾವುದೇ ಚಿತ್ರರಂಗಕ್ಕೆ ಹೋದರೂ ನಟರ ನಡುವೆ ಕಾಂಪಿಟೇಷನ್ ಇದ್ದೇ ಇರುತ್ತೆ. ಕೆಲವರು ಆರೋಗ್ಯಕರವಾಗಿ ಪೈಪೋಟಿ ಮಾಡುತ್ತಿರುತ್ತಾರೆ. ಅದೇ ಮತ್ತೆ ಕೆಲವರು ಯುದ್ಧಕ್ಕೆ ಇಳಿದು ಬಿಡುತ್ತಾರೆ. ಇನ್ನು ಕೆಲವರು ದ್ವೇಷದಿಂದಲೇ ಸ್ಪರ್ಧೆಗೆ ಇಳಿದು ಬಿಡುತ್ತಾರೆ. ಇದು ಭಾರತದ ಯಾವುದೇ ಚಿತ್ರರಂಗಕ್ಕೆ ಹೋದರೂ ಅಲ್ಲಿ ಈ ಪೈಪೋಟಿ ಅನ್ನೋದು ಕಾಮನ್.

ಸ್ಯಾಂಡಲ್‌ವುಡ್‌ನಲ್ಲೇನು ಇಲ್ಲ ಅಂತಲ್ಲ. ಹೀರೋ- ಹೀರೋಗಳ ನಡುವೆ, ಹೀರೋಯಿನ್‌ಗಳ ನಡುವೆ ತೆರೆ ಮರೆಯಲ್ಲಿ ಪ್ರತಿಷ್ಠೆಗಾಗಿ, ಯಶಸ್ಸಿಗಾಗಿ ಪೈಪೋಟಿ ನಡೆಯುತ್ತಲೇ ಇರುತ್ತೆ. ಕೆಲವೊಮ್ಮೆ ಕೆಲವು ಬೆಳಕಿಗೆ ಬರುತ್ತವೆ. ಮತ್ತೆ ಕೆಲವು ಒಳಗೊಳಗೆ ನಡೆಯುತ್ತಿರುತ್ತವೆ. ಇಂತಹ ಸಾಕಷ್ಟು ಸನ್ನಿವೇಶಗಳು ಕನ್ನಡ ಚಿತ್ರರಂಗದಲ್ಲೂ ಎದುರಾಗಿವೆ. ಆದ್ರೀಗ ಕಾಲ ಬದಲಾದಂತೆ ಕಾಣುತ್ತಿದೆ.

Dhruva Sarja asked his fans to watch Kichcha Sudeep film Max video is trending

ಸ್ಟಾರ್‌ಗಳ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಹಿಂದೆ ಮುಂದೆ ಸಿನಿಮಾಗಳು ರಿಲೀಸ್ ಆದರೆ, ದೊಡ್ಡ ವಿವಾದವೇ ಹುಟ್ಟಿಕೊಳ್ಳುತ್ತಿತ್ತು. ಆದ್ರೀಗ ಅಂತಹದ್ದು ಏನೂ ನಡೆಯುತ್ತಿರಲ್ಲ. ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಬೆಂಬಲ ಕೊಡುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ನಡೆದ ಎರಡು ಸನ್ನಿವೇಶಗಳು ಉದಾಹರಣೆಯಾಗಿವೆ. ಅದರಲ್ಲೊಂದು ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಹೇಳುತ್ತಿರುವ ವಿಡಿಯೋ.

ಪ್ರತಿ ಭಾನುವಾರ ಧ್ರುವ ಸರ್ಜಾ ಸರ್ಜಾರನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ಮನೆಯ ಬಳಿ ಬರುತ್ತಾರೆ. ಅವರೊಂದಿಗೆ ಕೆಲವು ಸಮಯ ಕಳೆದು, ಮಾತಾಡಿಸಿ, ಸೆಲ್ಫಿ ಕೊಟ್ಟು ಕಳುಹಿಸುತ್ತಾರೆ. ಕೆಲವೇ ದಿನಗಳ ಹಿಂದಷ್ಟೇ ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಅವರೊಂದಿಗೆ ಮಾತಾಡುವಾಗ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ನೋಡುವಂತೆ ಮನವಿ ಮಾಡಿಕೊಂಡಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈಗ ಎಲ್ಲೆಡೆ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ "ಕೇಳಿಸಿಕೊಳ್ರಿ.. 25ನೇ ತಾರೀಕು ಮ್ಯಾಕ್ಸ್ ಸಿನಿಮಾ ನೋಡಬೇಕು. ಸುಮ್ನೆ ನೋಡುವುದಲ್ಲ. ಟಿಕೆಟ್ ತಗೊಂಡು ಟ್ಯಾಗ್ ಮಾಡಬೇಕು." ಎಂದು ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಹೇಳಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧ್ರುವ ಸರ್ಜಾ ಈ ನಡೆಗೆ ನೆಟ್ಟಿಗರಷ್ಟೇ ಅಲ್ಲ, ಕಿಚ್ಚನ ಫ್ಯಾನ್ಸ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಕಡೆ 'ಯುಐ' ಹಾಗೂ 'ಮ್ಯಾಕ್ಸ್' ಹೆಚ್ಚು ಕಡಿಮೆ ಐದು ದಿನಗಳ ಅಂತರದಲ್ಲಿ ರಿಲೀಸ್ ಆಗಿದೆ. ಇಂತಹ ಸನ್ನಿವೇಶಗಳು ಈ ಹಿಂದೆ ಕೂಡ ಬಂದಿದೆ. ಆ ವೇಳೆ ಸ್ಟಾರ್‌ಗಳೇ ಥಿಯೇಟರ್‌ಗಳಿಗಾಗಿ ಕಿತ್ತಾಡಿದ್ದೂ ಇದೆ. ಆದರೆ, 'ಯುಐ' ಸಿನಿಮಾದ ಪ್ರೀಮಿಯರ್‌ಗೆ ಕಿಚ್ಚ ಸುದೀಪ್‌ಗೆ ಉಪೇಂದ್ರ ಮತ್ತವರ ತಂಡ ಆಹ್ವಾನ ನೀಡಿತ್ತು. ಆ ಮೇರೆಗೆ ಕಿಚ್ಚ ಸುದೀಪ್ ಬಂದು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕನ್ನಡ ಸೂಪರ್‌ಸ್ಟಾರ್‌ಗಳು ಮತ್ತೊಬ್ಬ ಸೂಪರ್‌ಸ್ಟಾರ್ ಸಿನಿಮಾಗೆ ಶುಭ ಕೋರುತ್ತಿದ್ದಾರೆ. ಕೇವಲ ಹೊಸಬರಷ್ಟೇ ಅಲ್ಲ. ಎಲ್ಲಾ ನಟರಿಗೂ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾದ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಹೋಗಿ ಬರುತ್ತಾರೆ. ಇತ್ತೀಚೆಗೆ 'ಯುಐ' ಇವೆಂಟ್‌ನಲ್ಲಿಯೂ ಭಾಗವಹಿಸಿ ಉಪ್ಪಿಗೆ ಶುಭ ಕೋರಿದ್ದರು. ಈಗ ಧ್ರುವ ಸರ್ಜಾ 'ಮ್ಯಾಕ್ಸ್' ಸಿನಿಮಾ ನೋಡುವಂತೆ ಹೇಳಿದ ವಿಡಿಯೋಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

More from Filmibeat

English summary
Dhruva Sarja asked his fans to watch Kichcha Sudeep film Max video is trending
Read more about: sudeep dhruva sarja fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X