»   » ತೆಲುಗು 'ಬಹದ್ದೂರ್' ಆಗಲಿದ್ದಾರಾ ರಾಮ್ ಚರಣ್?

ತೆಲುಗು 'ಬಹದ್ದೂರ್' ಆಗಲಿದ್ದಾರಾ ರಾಮ್ ಚರಣ್?

Posted By:
Subscribe to Filmibeat Kannada

ಹತ್ತು ಹಲವು ವಿಶೇಷಗಳ ಸಂಗಮವಾಗಿರುವ 'ಬಹದ್ದೂರ್‍' ಚಿತ್ರ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಜೋಡಿಯ ಚಿತ್ರ ಭರ್ಜರಿ 38ನೇ ದಿನ ಪೂರೈಸಿ ಅರ್ಧ ಶತಕದತ್ತ ಮುನ್ನುಗ್ಗುತ್ತಿದೆ.

ಇದೇ ಸಂದರ್ಭದಲ್ಲಿ ಚಿತ್ರದ ರೀಮೇಕ್ ರೈಟ್ಸ್ ಗೆ ಭಾರಿ ಬೇಡಿಕೆ ಬಂದಿದೆ. ಈ ಚಿತ್ರ ಟಾಲಿವುಡ್ ಗಮನಸೆಳೆದಿದ್ದು ತೆಲುಗಿನಲ್ಲಿ ರೀಮೇಕ್ ಮಾಡುಲು ಮುಂದಾಗಿದೆ. ಒಂದು ವೇಳೆಗೆ ತೆಲುಗು ಭಾಷೆಗೆ ರೀಮೇಕ್ ಆದರೆ ಹೀರೋ ಯಾರಾಗಲಿದ್ದಾರೆ ಎಂಬ ಬಗ್ಗೆಯೂ ಈಗಾಗಲೆ ಕುತೂಹಲ ಮೂಡಿದೆ. [ಬಹದ್ದೂರ್ ಚಿತ್ರ ವಿಮರ್ಶೆ]

A Still from movie Bahaddur

ಮೂಲಗಳ ಪ್ರಕಾರ ತೆಲುಗು ನಟ ಅಲ್ಲು ಅರ್ಜುನ್ ಅಥವಾ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ನಾಯಕರಾಗುವ ಸಾಧ್ಯತೆಗಳಿವೆ. ಚಿತ್ರದಲ್ಲಿನ ಮಾಸ್ ಎಲಿಮೆಂಟ್ಸ್ ಟಾಲಿವುಡ್ ಚಿತ್ರಕ್ಕೆ ಹೇಳಿಮಾಡಿಸಿದಂತಿದ್ದು ಭರ್ಜರಿ ಹಿಟ್ ದಾಖಲಿಸುವುದರಲ್ಲಿ ಅನುಮಾನವೇ ಇಲ್ಲ ಎಂಬ ಅಖಂಡ ವಿಶ್ವಾಸ ನಿರ್ಮಾಪಕರದ್ದು.

ಅತ್ಯುತ್ತಮ ಸೌಂಡ್ ಡಿಸೈನ್ ಟೆಕ್ನಾಲಜಿಯನ್ನ ಕನ್ನಡದಲ್ಲೇ ಮೊದಲ ಬಾರಿಗೆ ಬಳಸಿಕೊಂಡಿದೆ 'ಬಹದ್ದೂರ್' ಚಿತ್ರತಂಡ. ಬಾಲಿವುಡ್ ನಲ್ಲಿ ಬಳಸಿಕೊಂಡಿರೋ ಈ ಮುಂದುವರಿದ ತಂತ್ರಜ್ಞಾನದಿಂದ ಚಿತ್ರದ ಸೌಂಡ್ ಕ್ವಾಲಿಟಿ ಪ್ರೇಕ್ಷಕರನ್ನ ಥ್ರಿಲ್ಲಾಗಿಸಿದೆ. ಭೂಮಿಯಾಗ ಬೆಳೆ ಐತೆ, ಬಂದೂಕ್ ನಾಗ ಬುಲೆಟ್ ಐತೆ, ನನ್ ಮೈಯಾಗ ಪೊಗರೈತೇ ಎಂಬ ಡೈಲಾಗ್ ಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. (ಫಿಲ್ಮಿಬೀಟ್ ಕನ್ನಡ)

English summary
Dhruva Sarja and Radhika Pandit pair Kannada movie Bahaddur to be remade in Telugu. Sources says, either Allu Arjun or Ram Charan Teja will be acting in the Telugu remake of the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada