ಧ್ರುವ ಸರ್ಜಾ ಹುಟ್ಟುಹಬ್ಬ: 'ಮಾರ್ಟಿನ್' ತಂಡದಿಂದ ವಿಶೇಷ ವಿಶ್

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಜಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಅವರಿಗೆ ಇಂದು (ಅಕ್ಟೋಬರ್ 06) ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷ ಧ್ರುವ ಸರ್ಜಾ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷ ಮತ್ತು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ಕಾರಣ ಮತ್ತು ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಧ್ರುವ ಸರ್ಜಾ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ.

ಅಂದಹಾಗೆ ಈ ಬಾರಿ ಸಹ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಧ್ರುವ ಸರ್ಜಾ ಈಗಾಗಲೇ ತಿಳಿಸಿದ್ದಾರೆ. ಆದರೂ ಸಾಮಾಜಿಕ ಜಾಲತಾಣದ ಮೂಲಕ ಧ್ರುವ ಸರ್ಜಾಗೆ ಶುಭಾಶಯಗಳ ಮಹಾಪೂರವೇ ಬರುತ್ತಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಪ್ರೀತಿಯ ವಿಶ್ ತಿಳಿಸುತ್ತಿದ್ದಾರೆ. ಅಂದಹಾಗೆ ಇಂದು ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ ಎಂದು ಧ್ರುವ ಹೇಳಿದ್ದರು. ಚಿತ್ರೀಕರಣಕ್ಕೆಂದು ವೈಜಾಕ್ ನಲ್ಲಿ ಇರುವುದಾಗಿ ಧ್ರುವ ಬಹಿರಂಗ ಪಡಿಸಿದ್ದರು. ಹಾಗಾಗಿ ಎಲ್ಲರೂ ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ತಿಳಿಸುತ್ತಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಇದ್ದಲ್ಲಿಯೇ ವಿಶ್ ತಿಳಿಸಿ ಎಂದು ಧ್ರುವ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಎರಡು ಕಾರಣಗಳನ್ನು ತಿಳಿಸಿದ್ದರು. "ಎರಡು ದೊಡ್ಡ ಕಾರಣವೆಂದರೆ ಒಂದು, ಕೋವಿಡ್ , ಮತ್ತೊಂದು ನಾನು ಊರಲ್ಲಿ ಇರಲ್ಲ. ಶೂಟಿಂಗಾಗಿ ವೈಜಾಗ್ ನಲ್ಲಿರುತ್ತೇನೆ. ಪ್ರತಿವರ್ಷ ಹೇಗೆ ನಮ್ಮನೆ ಹುಡುಗ ಅಂತ ನನ್ನ ಎಲ್ಲಾ ಅಣ್ಣ ತಮ್ಮಂದಿರು, ಅಕ್ಕ-ತಂಗಿಯರು, ತಾಯಂದಿರು ಹೇಗೆ ಆಶೀರ್ವಾದ ಮಾಡುತ್ತಿದ್ದಿರೊ ಈ ಬಾರಿಯೂ ನನ್ನ ಹುಟ್ಟುಹಬ್ಬಕ್ಕೆ ಆಶೀರ್ವಾದ ಮಾಡಿ" ಎಂದು ಧ್ರುವ ಸರ್ಜಾ ವಿಡಿಯೋ ಮೂಲಕ ಮನವಿ ಮಾಡಿದ್ದರು.

Dhruva Sarja birthday: Martin movie poster release for his birthday

ಇನ್ನು ಹುಟ್ಟುಹಬ್ಬದ ಪ್ರಯುಕ್ತ ಧ್ರುವ ನಟನೆಯ ಮಾರ್ಟಿನ್ ಸಿನಿಮಾದಿಂದ ಭಯಾನಕ ಲುಕ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನಲ್ಲಿ ಧ್ರುವ ಕೈಗೆ ಬೇಡಿ ಹಾಕಲಾಗಿದ್ದು, ಖರಾಬು ಲುಕ್ ನಲ್ಲಿ ಪೋಸ್ ನೀಡಿದ್ದಾರೆ. ಈ ಪೋಸ್ಟರ್ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಮಾರ್ಟಿನ್ ಸಿನಿಮಾಗೆ ನಿರ್ದೇಶಕ ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾರ್ಟಿನ್ ಚಿತ್ರದಲ್ಲಿ ಕಾಲೇಜ್ ಲವ್ ಸ್ಟೋರಿ ಜೊತೆ ಆಕ್ಷನ್ ಮನರಂಜನೆ ಇರಲಿದೆ. ಧ್ರುವ ಸರ್ಜಾ 'ಗ್ಯಾಂಗ್ ಸ್ಟರ್' ಪಾತ್ರದಲ್ಲಿ ನಟಿಸಲಿದ್ದಾರೆ.

'ಮಾರ್ಟಿನ್' ಸಿನಿಮಾದ ಚಿತ್ರೀಕರಣ ಭರ್ಜರಿ ನಡೆಯುತ್ತಿದೆ. ಧ್ರುವ ಸರ್ಜಾ ಜೊತೆ 'ದುಬಾರಿ' ಮಾಡಬೇಕಿದ್ದ ಉದಯ್ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯದ ಲೆಕ್ಕಾಚಾರದಲ್ಲಿ ಡಿಸೆಂಬರ್‌ ವೇಳೆ ಈ ಸಿನಿಮಾ ಮುಗಿಸುವ ಚಿಂತನೆಯಲ್ಲಿದೆ ಚಿತ್ರತಂಡ. ಇನ್ನು ಈ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Actor Dhruva Sarja birthday: Martin movie poster release for his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X