ಹನುಮ ಜಯಂತಿಗೆ ಹೊಸ ಕಾರ್ ಖರೀದಿ ಮಾಡಿದ ಧ್ರುವ ಸರ್ಜಾ
Recommended Video
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಕಾರು ಕೊಂಡುಕೊಂಡಿದ್ದಾರೆ. ಆಂಜನೇಯನ ಭಕ್ತ ಹನುಮ ಜಯಂತಿಗೆ ಹೊಸ ಕಾರ್ ಮಾಲೀಕನಾಗಿದ್ದಾರೆ.
ಧ್ರುವ ಸರ್ಜಾ ಪೋರ್ಷೆ ಕಾರ್ ಖರೀದಿ ಮಾಡಿದ್ದಾರೆ. ಕಪ್ಪು ಬಣ್ಣದ ಕಾರ್ ಇದಾಗಿದೆ. ಮೈಸೂರು ರಸ್ತೆಯಲ್ಲಿ ಇರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ ಪೂಜೆ ಮಾಡಿಸಿದ್ದಾರೆ. ಈ ವೇಳೆ ಧ್ರುವ ಪತ್ನಿ ಪ್ರೇರಣಾ ಕೂಡ ಹಾಜರಿದ್ದರು.
ಟ್ವಿಟ್ಟರ್ ನಲ್ಲಿ ತಮ್ಮ ಕಾರಿನ ಫೋಟೋವನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. ಇಂದು ತಾವು ನಿಶ್ಚಿತಾರ್ಥ ಮಾಡಿಕೊಂಡು ಒಂದು ವರ್ಷ ಆಗಿದ್ದು, ಈ ವಿಶೇಷ ದಿನವೇ ಕಾರ್ ಖರೀದಿ ಮಾಡಿದ್ದಾರೆ.

''ಒಂದೇ ದಿನ ಹಲವು ವಿಶೇಷತೆಗಳಿದ್ದಾಗ ನಿಮ್ಮೊಡನೆ ಹಂಚಿಕೊಳ್ಳೋ ಖುಷಿ. ಮೊದಲಿಗೆ ಇಷ್ಟ ದೇವರು ಹನುಮಜಯಂತಿ. ನನ್ನೆಲ್ಲ ಹಿತೈಷಿ, ಕನ್ನಡ ಬಂಧುಗಳಿಗೆ ಹನುಮದೇವರ ಕೃಪಾಶೀರ್ವಾದವಿರಲಿ!. ಇಂದಿಗೆ ನಾವು ನಿಶ್ಚಿತಾರ್ಥವಾಗಿ 1 ವರ್ಷ. ಜೊತೆಗೆ ಹೊಸ ಅತಿಥಿಯಾಗಿ ಕಾರ್ ಆಗಮನ ಇನ್ನಷ್ಟು ಸಂಭ್ರಮ. ಆಂಜನೇಯನ ಆಶೀರ್ವಾದ, ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀರಕ್ಷೆ ಜೈ ಆಂಜನೇಯ'' ಎಂದು ಟ್ವೀಟ್ ಮಾಡಿದ್ದಾರೆ.
ಧ್ರುವ ಸರ್ಜಾ ಸದ್ಯ 'ಪೊಗರು' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಜನವರಿ 14, 2020ಕ್ಕೆ ಬಿಡುಗಡೆ ಆಗಲಿದೆ. ಅನೇಕ ತಿಂಗಳುಗಳಿಂದ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಸಂಕ್ರಾಂತಿಗೆ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications










