For Quick Alerts
  ALLOW NOTIFICATIONS  
  For Daily Alerts

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆ ಬಹಿರಂಗ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಮದುವೆ ಸಂಭ್ರಮದಲ್ಲಿದ್ದಾರೆ. ಇದರ ಜೊತೆಗೆ ಪೊಗರು ಸಿನಿಮಾದ ಟ್ರೈಲರ್ ಸೂಪರ್ ಹಿಟ್ ಆದ ಸಂತಸದಲ್ಲಿದ್ದಾರೆ. ಪೊಗರು ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ. ಇದರ ಜೊತೆಗೆ ಧ್ರುವ ಮದುವೆ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ.

  ಇದೆ ತಿಂಗಳು 24ಕ್ಕೆ ಧ್ರುವ ಬಾಲ್ಯದ ಗೆಳತಿ ಪ್ರೇರಣ ಶಂಕರ್ ಜೊತೆ ಹಸೆಮಣೆ ಏರಲಿದ್ದಾರೆ. ಕಳೆದ ವರ್ಷ ಪ್ರೇರಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಈ ವರ್ಷ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೆ ಧ್ರುವ ಚಿತ್ರರಂಗದ ಗಣ್ಯರಿಗೆ ಮದುವೆ ಆಮಂತ್ರಣ ನೀಡುವಲ್ಲಿ ಬ್ಯುಸಿಯಾಗಿದ್ದಾರೆ.

  ಪೊಗರು ಸಿನಿಮಾ ನಂತರ ಹಸೆಮಣೆ ಏರಲಿದ್ದಾರೆ ನಟ ಧ್ರುವ ಸರ್ಜಾ?ಪೊಗರು ಸಿನಿಮಾ ನಂತರ ಹಸೆಮಣೆ ಏರಲಿದ್ದಾರೆ ನಟ ಧ್ರುವ ಸರ್ಜಾ?

  ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೀಗ ಧ್ರುವ ಮದುವೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಂಜನೆಯನ ಚಿತ್ರವಿರುವ ಆಮಂತ್ರಣ ಪತ್ರಿಕೆ ವಿಭಿನ್ನವಾಗಿದೆ. ಇಬ್ಬರ ಮದುವೆ ಬೆಂಗಳೂರಿನ ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ.

  ನವೆಂಬರ್ 24 ಭಾನುವಾರ ಬೆಳಗ್ಗೆ 7.15 ರಿಂದ 7.45ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಮತ್ತು ಪ್ರೇರಣ ಶಂಕರ್ ಪತಿ-ಪತ್ನಿಯರಾಗಲಿದ್ದಾರೆ. ಇನ್ನು ಅದೆ ದಿನ ಸಂಜೆ 7.30ಕ್ಕೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ. ಅದ್ದೂರಿ ಆರತಕ್ಷತೆಗೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಭಾಗಿಯಾಗಿ ಧ್ರುವ ಮತ್ತು ಪ್ರೇರಣ ಜೋಡಿಗೆ ಆಶೀರ್ವಾದ ಮಾಡಲಿದ್ದಾರೆ.

  English summary
  Kannada actor Dhruva Sarja busy with giving wedding invitation to the dignitaries.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X