ಕೊರೊನಾ ಗೆದ್ದು ಬಂದ ಧ್ರುವ ಸರ್ಜಾ ಹೇಳಿದ ಕಿವಿಮಾತು
ಕೊರೊನಾ ಸೋಂಕಿತರಾಗಿದ್ದ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣ ಇದೀಗ ಮನೆಗೆ ವಾಪಸ್ಸಾಗಿದ್ದಾರೆ.
Recommended Video
ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಜುಲೈ 15 ರಂದು ಗೊತ್ತಾಗಿತ್ತು. ಕೂಡಲೇ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು.
ಕೇವಲ ಎರಡೇ ದಿನದಲ್ಲಿ ಈ ಯುವ ಜೋಡಿ ಮನೆಗೆ ವಾಪಸ್ಸಾಗಿದ್ದು, ಧ್ರುವ ಸರ್ಜಾ ಅವರಂತೂ ಗೆಲುವಾಗಿದ್ದಾರೆ. ಮನೆಗೆ ಬಂದು ಸಂಜೆ ವೇಳೆಗಾಗಲೇ ವ್ಯಾಯಾಮ ಪ್ರಾರಂಭಿಸಿದ ಧ್ರುವ ಸರ್ಜಾ ಅಭಿಮಾನಿಗಳೊಂದಿಗೆ ಲೈವ್ ಮೂಲಕ ಮಾತನಾಡಿದರು.

ನಾನು, ಪ್ರೇರಣಾ ಆರೋಗ್ಯವಾಗಿದ್ದೇವೆ: ಧ್ರುವ ಸರ್ಜಾ
ಮನೆಯಲ್ಲಿ ಟ್ರೆಡ್‌ಮೀಲ್ ಮೇಲೆ ನಡೆಯುತ್ತಾ ಲೈವ್ ನಡೆಸಿದ ಧ್ರುವ ಸರ್ಜಾ, ತಾವು ಆರೋಗ್ಯವಾಗಿರುವುದಾಗಿ ಹೇಳಿದರು ಹಾಗೂ ಪತ್ನಿ ಪ್ರೇರಣಾ ಕೂಡಾ ಚೆನ್ನಾಗಿದ್ದಾರೆ ಎಂದರು ಧ್ರುವ ಸರ್ಜಾ.

ಮನೆಯಲ್ಲೇ ವರ್ಕೌಟ್ ಮಾಡ್ತಿದ್ದೇನೆ: ಧ್ರುವ
ಕ್ಯಾಲರಿ ಕರಗಿಸಬೇಕಾಗಿದೆ ಎಂದ ಧ್ರುವ ಸರ್ಜಾ ಮನೆಯಲ್ಲಿಯೇ ಟ್ರೆಡ್ ಮಿಲ್ ಇತ್ತು ಹಾಗಾಗಿ ವರ್ಕೌಟ್ ಮಾಡ್ತಾ ಇದ್ದೀನಿ, ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಎಂದರು. ಪ್ರೇರಣಾ ಅವರಿಗೂ ವರ್ಕೌಟ್ ಮಾಡಿಸಬೇಕು ಎಂದರು.

ಅತ್ತಿಗೆ ಮೇಘನಾ ಬಗ್ಗೆ ಮಾತು
ಅತ್ತಿಗೆ ಮೇಘನಾ ಬಗ್ಗೆಯೂ ಮಾತನಾಡಿದ ಧ್ರುವ 'ಮೇಘನಾ ಕೂಡ ಚೆನ್ನಾಗಿದ್ದಾರೆ, ಟೆನ್ಷನ್ ಬೇಡ, ಬೇಗೆ ಹೊರಗೆ ಬರುತ್ತೇನೆ' ಎಂದರು. ವರ್ಕೌಟ್ ಮಾಡುತ್ತಲೇ ಅಭಿಮಾನಿಗಳು ಶುಭಹಾರೈಕೆಯನ್ನು ಓದಿ ಧನ್ಯವಾದ ತಿಳಿಸಿದರು.

ಕಿವಿಮಾತು ಹೇಳಿದ ಧ್ರುವ ಸರ್ಜಾ
'ತಪ್ಪದೆ ಬಿಸಿ ನೀರು ಕುಡಿಯಿಡಿ, ಗಾರ್ಗಲ್ ಮಾಡಿರಿ. ಸಾಧ್ಯವಾದಷ್ಟು ವರ್ಕೌಟ್ ಮಾಡಿ. ಮನೆಯಲ್ಲೇ ಇರಿ, ಸೇಫ್ ಆಗಿರಿ. ಖುಷಿಯಾಗಿ ಇರಬೇಕು ಅಷ್ಟೇ, ಈ ಕೊರೊನಾಅನ್ನು ಓಡಿಸೋಣ. ನಾಳೆ ಸಿಗುತ್ತೇನೆ' ಎಂದು 'ಜೈ ಆಂಜನೇಯ' ಎಂದು ಮಾತುಮುಗಿಸಿದರು ಧ್ರುವ ಸರ್ಜಾ.


Click it and Unblock the Notifications











