For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಇನ್ಸ್ಟಾಗ್ರಾಂ ಲೈವ್: ಪೊಗರು ಚಿತ್ರದ ಕುರಿತು ಅಪ್‌ಡೇಟ್

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇನ್ಸ್ಟಾಗ್ರಾಂ ಲೈವ್ ಬರಲಿದ್ದಾರೆ. ಸೋಮವಾರ ಸಂಜೆ 6 ಗಂಟೆಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬರಲಿದ್ದು, ಪೊಗರು ಚಿತ್ರದ ಕುರಿತು ಬಹುಮುಖ್ಯವಾದ ಪ್ರಕಟಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

  ಪೊಗರು ಬಗ್ಗೆ ಬಿಗ್ ಅಪ್ಡೇಟ್ ಕೊಡಲಿದ್ದಾರೆ ಧ್ರುವ ಸರ್ಜಾ | Filmibeat Kannada

  ಧ್ರುವ ಸರ್ಜಾ ಅವರ ಕಡೆಯಿಂದ ಪ್ರಮುಖ ಘೋಷಣೆ ಎಂದು ಸುದ್ದಿ ತಿಳಿಯುತ್ತಿದ್ದಂತೆ, ಪೊಗರು ಚಿತ್ರದ ಬಿಡುಗಡೆ ದಿನಾಂಕ ಹೇಳಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

  ಹಬ್ಬಕ್ಕೆ ಸಜ್ಜಾಗಿ ಧ್ರುವ ಫ್ಯಾನ್ಸ್: ಪೊಗರು ಬಿಡುಗಡೆ ದಿನಾಂಕ ಲಾಕ್?ಹಬ್ಬಕ್ಕೆ ಸಜ್ಜಾಗಿ ಧ್ರುವ ಫ್ಯಾನ್ಸ್: ಪೊಗರು ಬಿಡುಗಡೆ ದಿನಾಂಕ ಲಾಕ್?

  ಸದ್ಯದ ಬೆಳವಣಿಗೆ ಗಮನಿಸಿದರೆ ಧ್ರುವ ಸರ್ಜಾ ಅವರು ಪೊಗರು ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಬಹುದು. ಜನವರಿ ಕೊನೆ ವಾರ ಅಥವಾ ಫೆಬ್ರವರಿ ಮೊದಲನೇ ವಾರದಲ್ಲಿ ಪೊಗರು ಸಿನಿಮಾ ತೆರೆಕಾಣಬಹುದು ಎಂದು ಹೇಳಲಾಗುತ್ತಿದೆ.

  ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಪೊಗರು ಸಿನಿಮಾ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಪೊಗರು ಚಿತ್ರದ ಡೈಲಾಗ್ ಟೀಸರ್ ಹಾಗೂ ಖರಾಬು ಹಾಡು ಅತಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ.

  'ಜ್ವರ ಬಂದಿದ್ದರೂ ಕುಣಿಬೇಕು ಅನಿಸುತ್ತೆ': ಖರಾಬು ಹಾಡಿನ ಬಗ್ಗೆ ತಮಿಳು ಅಭಿಮಾನಿ ಮಾತು'ಜ್ವರ ಬಂದಿದ್ದರೂ ಕುಣಿಬೇಕು ಅನಿಸುತ್ತೆ': ಖರಾಬು ಹಾಡಿನ ಬಗ್ಗೆ ತಮಿಳು ಅಭಿಮಾನಿ ಮಾತು

  ಅದರಲ್ಲೂ ಖರಾಬು ಹಾಡು ಯ್ಯೂಟ್ಯೂಬ್‌ನಲ್ಲಿ 150 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಕನ್ನಡದ ಹಾಡೊಂದು ಯ್ಯೂಟ್ಯೂಬ್‌ನಲ್ಲಿ ಈ ಮಟ್ಟಕ್ಕೆ ವೀಕ್ಷಣೆ ಪಡೆದುಕೊಂಡಿರುವುದು ಇದೇ ಮೊದಲು.

  ನಂದಕಿಶೋರ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕನಾಗಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ತೆಲುಗು ನಟ ಜಗಪತಿ ಬಾಬು, ಧನಂಜಯ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಇನ್ನು ಪೊಗರು ಚಿತ್ರದ ಬಳಿಕ ಧ್ರುವ ಸರ್ಜಾ ದುಬಾರಿ ಚಿತ್ರವನ್ನು ಆರಂಭಿಸಲಿದ್ದಾರೆ. ನಂದಕಿಶೋರ್ ಹಾಗೂ ಧ್ರುವ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ಈ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ.

  English summary
  Action Prince Dhruva Sarja has coming Instagram live at Today 6pm. Stay tuned for a big announcement from Pogaru Hero.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X