ಮಹಾಸಮರಕ್ಕೆ 'ಮಾರ್ಟಿನ್' ರೆಡಿ ; ಪ್ಯಾನ್ ಇಂಡಿಯಾ ಕೇಳಲಿದೆ ಧ್ರುವ 'ಧ್ವನಿ'..?

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಮಾರ್ಟಿನ್. ಹೆಚ್ಚು ಕಡಿಮೆ ನಾಲ್ಕು ವರ್ಷಗಳಿಂದ ಈ ಚಿತ್ರಕ್ಕೆ ಇವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ. ಚಿತ್ರಕ್ಕೆ ಕೋಟಿ ಕೋಟಿ ಹಣವನ್ನ ನಿರ್ಮಾಪಕ ಉದಯ್ ಮೆಹ್ತಾ ಸುರಿದಿದ್ದಾರೆ. ಹೀಗಾಗಿ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಬಹುದೊಡ್ಡ ಅಗ್ನಿ ಪರೀಕ್ಷೆಯೂ ತಂಡದ ಮುಂದೆ ಇದೆ.

Dhruva Sarja Completes Dubbing For Martin

ಆದರೆ ಈ ಪರೀಕ್ಷೆ ಫಲಿತಾಂಶ ಯಾವತ್ತು ಅನ್ನುವುದಕ್ಕೆ ಉತ್ತರ ಇನ್ನೂ ಇಲ್ಲ. ಇದರ ನಡುವೆ ಮಾರ್ಟಿನ್ ಅಂಗಳದಿಂದ ಸುದ್ದಿಯೊಂದು ಹೊರ ಬಂದಿದೆ. ಡಬ್ಬಿಂಗ್ ಕಂಪ್ಲೀಟ್ ಆಗಿರುವ ಸುದ್ದಿ ಅದು.

ಹೌದು, ಮಾರ್ಟಿನ್ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಧ್ರುವ ಸರ್ಜಾ, ತಮ್ಮ ಧ್ವನಿಯನ್ನ ನೀಡಿದ್ದಾರೆ. ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ. ಇನ್ನೂ ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ ಆದ ಹಿನ್ನೆಲೆ ಎಲ್ಲ ಭಾಷೆಯಲ್ಲಿಯೂ ಧ್ರುವ ತಾವೇ ಖುದ್ದು ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರಾ ಅನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಪ್ರಶ್ನೆಗೆ ಸದ್ಯಕ್ಕೆ ನಿಖರವಾದ ಉತ್ತರ ಇಲ್ಲ. ಡಬ್ಬಿಂಗ್ ಕೆಲಸಗಳನ್ನ ಧ್ರುವ ಮುಗಿಸಿದ್ದಾರೆ ಅನ್ನುವುದಷ್ಟೇ ಸದ್ಯದ ಲೇಟೆಸ್ಟ್ ನ್ಯೂಸ್

Dhruva Sarja Completes Dubbing For Martin

ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿ ಪಾತ್ರವನ್ನ ನಿರ್ವಹಿಸಿದ್ದಾರೆ. ಅನ್ವೇಶಿ ಜೈನ್ ಹಾಗೂ ಸುಕೃತಾ ವಾಗ್ಲೇ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ಕೆಲ ದಿನದ ಹಿಂದೆ ಚಿತ್ರದ ಚಿತ್ರೀಕರಣವನ್ನ ಮುಗಿಸಿರುವ ಚಿತ್ರತಂಡ ಸಾವಿನ ದವಡೆಯಿಂದ ಇತ್ತೀಚೆಗಷ್ಟೇ ಪಾರಾಗಿತ್ತು. 22 ನಿಮಿಷ ಫ್ಲೈಟ್ ನಲ್ಲಿ ನರಕಯಾತನೆಯನ್ನ ಅನುಭವಿಸಿತ್ತು. ಜೀವಂತ ಮರಳಿ ಬಂದಿದ್ದೇ ಪವಾಡ ಎಂಬ ಮಾತನ್ನೂ ಕೂಡ ಚಿತ್ರತಂಡ ಹೇಳಿತ್ತು.

ಮಾರ್ಟಿನ್ ಮೊದಲಾ.. ಕೆ.ಡಿ ಮೊದಲಾ..?

ಮಾರ್ಟಿನ್ ಚಿತ್ರದ ಡಬ್ಬಿಂಗ್ ಕೆಲಸ ಮುಕ್ತಾಯವಾದ ಬೆನ್ನಲ್ಲಿಯೇ, ಧ್ರುವ ಸರ್ಜಾ ಅಭಿನಯದ ಯಾವ ಸಿನಿಮಾ ಮೊದಲು ತೆರೆಗೆ ಬರಲಿದೆ ಅನ್ನುವ ಚರ್ಚೆ ಧ್ರುವ ಅವರ ಅಭಿಮಾನಿ ವಲಯದಲ್ಲಿ ಶುರುವಾಗಿದೆ. ಯಾಕೆಂದರೆ ಕೆ.ಡಿ ಚಿತ್ರದ ಚಿತ್ರೀಕರಣ ಕೂಡ ಮುಕ್ತಾಯದ ಹಂತದಲ್ಲಿದೆ. ಕೆ.ಡಿ ಬಗ್ಗೆ ಪ್ರೇಮ್ ಯಾವ ಕ್ಷಣದಲ್ಲಾದರೂ ಬ್ರೇಕಿಂಗ್ ನ್ಯೂಸ್ ನ ಕೊಡಬಹುದು.

Dhruva Sarja Completes Dubbing For Martin

ಇನ್ನೂ ಸದ್ಯಕ್ಕೆ ಐಪಿಎಲ್ ಕಾವು ಏರಲಿದೆ. ಮೇ ಅಂತ್ಯದವರೆಗೆ ಎಲ್ಲರೂ ಐಪಿಎಲ್ ಧ್ಯಾನದಲ್ಲಿರುವ ಕಾರಣಕ್ಕೆ ಮಾರ್ಟಿನ್ ಚಿತ್ರವನ್ನ ಜೂನ್ ಕ್ಕಿಂತ ಮೊದಲು ಬಿಡುಗಡೆ ಮಾಡುವ ಧೈರ್ಯವನ್ನ ಎ.ಪಿ.ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾ ಮಾಡಲ್ಲ. ಇನ್ನೂ ಕೆ.ಡಿ ವಿಚಾರದಲ್ಲಿ ಕೂಡ ಪ್ರೇಮ್ ರಿಸ್ಕ್ ತೆಗೆದುಕೊಳ್ಳಲ್ಲ. ಈ ಕಾರಣಕ್ಕೆ ಜೂನ್ ನಂತರದಲ್ಲಿ ಇವೆರಡು ಸಿನಿಮಾದಲ್ಲಿ ಮೊದಲು ಯಾವ ಸಿನಿಮಾ ಬಿಡುಗಡೆಯಾಗುತ್ತೆ ಅನ್ನುವ ಕುತೂಹಲ ಅಭಿಮಾನಿಗಳದ್ದು.

ಒಟ್ಟಿನಲ್ಲಿ ಸದ್ಯಕ್ಕೆ ಧ್ರುವ ಸರ್ಜಾ ಮಾರ್ಟಿನ್ ಚಿತ್ರದ ಡಬ್ಬಿಂಗ್ ಕೆಲಸವನ್ನ ಮುಗಿಸಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸದ್ಯಕ್ಕೆ ಭರದಿಂದ ಸಾಗಿವೆ. ಬೆಳ್ಳಿ ಪರದೆಯಲ್ಲಿ ಮಾರ್ಟಿನ್ ಧಗಧಗಿಸುವುದು ಯಾವಾಗ ಅನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ

More from Filmibeat

English summary
Action Prince Dhruva Sarja Completes Dubbing For His Much Anticipated Pan India Film Martin
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X